ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಜನವರಿ 17, 2011

ಗವಿಮಠದಲ್ಲಿ ದಿನಾಂಕ ೧೮-೦೧-೨೦೧೧ ರ ಜಾತ್ರಾ ನಿಮಿತ್ಯದ ಕಾರ್ಯಕ್ರಮಗಳು

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ದಿನಾಂಕ ೧೮-೦೧-೨೦೧೧ ರಂದು ಮಂಗಳವಾರ ದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವದು. ಕಾರಣ ಮುತ್ತೈದೆ ಮಹಿಳೆಯರು, ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಇಂದು ವಿದ್ಯುಕ್ತವಾಗಿ ಚಾಲನೆಗೊಂಡ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಇಂದು ದಿನಾಂಕ ೧೭-೦೧-೨೦೧೧ ರ ಸೋಮವಾರ ಜಾತ್ರಾ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಚಾಲನೆಗೊಂಡವು. ಇಂದು ಸಂಜೆ ೬-೦೦ ಗಂಟೆಗೆ ಪೂಜ್ಯರ ಸಮ್ಮುಖದಲ್ಲಿ ಬಸವಪಟ ಕಾರ್ಯಕ್ರಮ ಜರುಗಿತು.

ಶ್ರೀಗವಿಮಠಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸಧಾನ್ಯಗಳ ಮಹಾಪುರ





ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಮಹಾದಾಸೋಹಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ಕೊಪ್ಪಳ ನಗರದಿಂದ ಶ್ರೀಮಠಕ್ಕೆ ದವಸಧಾನ್ಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂದು ಕುಣಿಕೇರಿ ತಾಂಡಾದಿಂದ ೧೭ ಪಾಕೇಟ್ ಮೆಕ್ಕೆಜೋಳ, ೭ ಚೀಲ ಜೋಳ, ಕನಕಾಪುರ ತಾಂಡಾದಿಂದ ೮ ಚೀಲ ಮಕ್ಕೆಜೋಳ, ೩ ಪಾಕೆಟ್ ಅಕ್ಕಿ, ಲಿಂಗದಳ್ಳಿಂದ ೫ ಚೀಲ ನೆಲ್ಲು, ೫ ಚೀಲ ಜೋಳ, ಅರೀಕೇರಿಂದ ೫೦ ಕೆ.ಜಿ.ನೆಲ್ಲು, ೨೫ ಕೆ.ಜಿ. ಅಕ್ಕಡಿ ಕಾಳು, ಗಿಣಿಗೇರಿಂದ ೧೫ ಪಾಕೇಟ್ ನೆಲ್ಲು, ೩ ಪಾಕೇಟ್ ಮೆಕ್ಕೆ ಜೋಳ, ತಳಕಲ್‌ದಿಂದ ಶಿವಪ್ಪ ಆದಾಪುರ ಇವರಿಂದ ೨ ಪಾಕೇಟ ಉಳ್ಳಾಗಡ್ಡಿ, ೧ ಚೀಲ ಮೆಕ್ಕೆಜೋಳ, ಲೇಬಗೇರಿಯ ಬಸಣ್ಣ ನಂದಿಬೇವುರ ಇವರಿಂದ ೪೫ ಕುಂಬಳಕಾ, ತಳಕಲ್‌ದ ಶಿವಣ್ಣ ಸೋಮಾಪುರ ಇವರಿಂದ ೫೦ ಕೆ.ಜಿ.ಉಳ್ಳಾಗಡ್ಡಿ, ಟಣಕಣಕಲ್ಲಿನಿಂದ ಆಟೋಗಾಡಿ ರೊಟ್ಟಿ, ೧೦ ಚೀಲ ಮೆಕ್ಕೆ ಜೋಳ, ನೆಲ್ಲು, ಸಜ್ಜೆ, ಮಂಗಳೂರ ಗ್ರಾಮದಿಂದ ೧೧,೦೦೦ ರೊಟ್ಟಿ, ೨೫ ಚೀಲ ದವಸಧಾನ್ಯ, ೨೦೦ ಕುಂಬಳಕಾ, ಹುಲಗಿ ಗ್ರಾಮದಿಂದ ೧ ಟ್ರ್ಯಾಕ್ಟರ್ ರೊಟ್ಟಿ, ಕಾಸನಕಂಡಿಂದ ೪೫ ಚೀಲ ನೆಲ್ಲು, ೫ ಚೀಲ ಮೆಕ್ಕೆಜೋಳ, ೧ ಚೀಲ ಸಜ್ಜಿ, ತಾಳಕನಕಾಪುರ ಗ್ರಾಮದಿಂದ ೨೦೦೦ ರೊಟ್ಟಿ, ೫೨ ಚೀಲ ದವಸಧಾನ್ಯ, ಹಿರೆ ಕಾಸನಕಂಡಿಂದ ೫ ಕ್ವಿಂಟಾಲ್ ಮೆಕ್ಕೆ ಜೋಳ, ೧ ಚೀಳ ಸಜ್ಜಿ, ೫೪ ಚೀಲ ನೆಲ್ಲು, ೩೦ ಕುಂಬಳಕಾ, ಕೋನಸಾಗರ ಗ್ರಾಮದಿಂದ ೧ ಟ್ರ್ಯಾಕ್ಟರ್ ಕಟ್ಟಿಗೆ, ೧ ಚೀಲ ನೆಲ್ಲು ಈ ಮೊದಲಾದ ದವಸ ಧಾನ್ಯಗಳು ಶ್ರೀ ಗವಿಮಠದ ಜಾತ್ರೆಯ ನಿಮಿತ್ಯ ನೆಡೆಯುವ ಮಹಾದಾಸೋಹಕ್ಕೆ ಅರ್ಪಿತವಾದವು. ಸದ್ಬಕ್ತರಿಗೆ ಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳು ಶುಭಹಾರೈಸಿದ್ದಾರೆ.

ಮಿಟ್ಟಿಕೇರಿ ಮುಸ್ಲಿಂ ಬಾಂದವರಿಂದ ಶ್ರೀಮಠಕ್ಕೆ ರೊಟ್ಟಿಗಳ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕೆ ನಗರದ ಮಿಟ್ಟೀಕೇರಿಯ ಮುಸ್ಲಿಂ ಭಕ್ತ ಶ್ರೀ ಷರ್ಮಾಶಲಿ ತಂದೆ ಜಾಫರ್ ಹುಸೇನ್ ವರ್ಧಿ ಇವರು ೧೧,೦೦೦ ರೊಟ್ಟಿ ಹಾಗೂ ೨೫ ಕಿ.ಲೋ ಬೆಲ್ಲ ಹಾಗೂ ಮಿಟ್ಟೀಕೇರಿ ಓಣಿಯ ಭಕ್ತರು ೨೦೦೦ ರೊಟ್ಟಿಗಳನ್ನು ಶ್ರೀಮಠದ ಮಹಾ ದಾಸೋಹಕ್ಕೆ ಸಮರ್ಪಿಸುವದರ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆದಿದ್ದಾರೆ. ಪೂಜ್ಯ ಶ್ರೀಗಳು ಸದ್ಬಕ್ತರಿಗೆ ಶುಭಹಾರೈಸಿದ್ದಾರೆ.

ಸೋಮವಾರ, ಜನವರಿ 10, 2011

ಒಡಲದನಿ ಆಲಿಸಲು ಕರೆ- 15 ಬೆಳಕಿನೆಡೆಗೆ ಕಾರ್ಯಕ್ರಮ



ಕೊಪ್ಪಳ : ಪ್ರತಿಯೊಬ್ಬರಲ್ಲಿಯೂ ಒಡಲದನಿ ಇದ್ದೇ ಇರುತ್ತದೆ. ಆ ದನಿಯನ್ನು ಆಲಿಸಿ ಅದರಲ್ಲಿಯ ಕೆಟ್ಟದ್ದನ್ನು ಕೈಬಿಟ್ಟು ಉತ್ತಮವಾದ ಜ್ಞಾನದ ವಿಚಾರಫಾಂಟ್ ಗಾತ್ರಗಳನ್ನು ಆಯ್ದುಕೊಂಡು ಮನುಷ್ಯ ಪರಿಪೂರ್ಣನಾಗಬೇಕೆಂದು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿ ನುಡಿದರು.
ಅವರು ಗವಿಮಠದ ಕೆರೆಯ ಆವರಣದಲ್ಲಿ ಪ್ರತಿತಿಂಗಳು ಅಮವಾಸ್ಯೆಯಂದ ನಡೆಯುವ ಬೆಳಕಿನೆಡೆಗೆ ಕಾರ್‍ಯಕ್ರಮದ ಮುಖ್ಯ ಅತಿಥಿಯಗಿ ಭಾಗವಹಿಸಿ ವೀರಣ್ಣ ಹುರಕಡ್ಲಿ ಭಾಗ್ಯನಗರ ಇವರ "ಒಡಲದನಿ" ಕವನಸಂಕಲನ ಬಿಡುಗಡೆಗೊಳಿಸಿ ಮೇಲಿನಂತೆ ಮಾತನಾಡುತ್ತ ಮುಂದುವರೆಸಿಸಿ ನಮ್ಮ ಮಾತುಗಳಲ್ಲಿರುವ ಜ್ಞಾನದ ವಿಚಾರವನ್ನು ತಿಳಿಯದಿದ್ದರೆ ಬದುಕಿನಲ್ಲಿ ಬಹಳಷ್ಟು ಅವಘಡಗಳು ಸಂಭವಿಸುತ್ತವೆ. ಅವುಗಳನ್ನು ಜ್ಞಾನಕ್ಕೆ ಪರಿವರ್ತಿಸಿಕೊಂಡರೆ ಅವನೇ ಮಹಾತ್ಮಾ ಸಂತ ಶರಣನಾಗುತ್ತಾನೆಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಲದನಿಯ ಕರ್ತೃ ವೀರಣ್ಣ ಹುರಕಡ್‌ಲಿ ತಾವು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಪ್ರೇರಣೆಯಾದದ್ದನ್ನು ಹೇಳುತ್ತಾ ಸಾಹಿತ್ಯ ಬದುಕಿಗೂ ಮತ್ತು ಸಮಾಜಕ್ಕೂ ನೆಮ್ಮದಿಯನ್ನು ಕೊಡುತ್ತದೆ ಆ ಕಾರಣದಿಂದ ಸಾಹಿತ್ಯ ನನಗೆ ಪ್ರಿಯವಾಗಿದೆ ಎಂದರು.
ನಂತರ ಸಂಗೀತ ಕಲಾವಿದೆ ಕು.ಅಂಬಿಕಾ ಉಪ್ಪಾರವರಿಂದ ಭಕ್ತಿಸಂಗೀತ ಕಾರ್‍ಯಕ್ರಮ ನಡೆಯಿತು. ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಅವರ ಸಂಗೀತಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಕಾರ್‍ಯಕ್ರಮ ನಿರ್ವಹಣೆ ಮಾಡಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದ ಪ್ರಕಾಶ ಕಂದಕೂರು ಮತ್ತು ಹಂಪಿ ಕನ್ನಡ ವಿಶ್ವವಿದ್ಯಲಯದಿಂದ ಪಿಎಚ್ಡಿ ಪದವಿ ಪಡೆದಿರುವ ಪ್ರಕಾಶ ಬಳ್ಳಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿಜಯಕುಮಾರ ಕವಲೂರವರು ಭಕ್ತಿಸೇವೆ ನಡೆಸಿಕೊಟ್ಟದ್ದರಿಂದ ಅವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು , ಪ್ರಾಚಾರ್‍ಯರಾದ ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರ, ಡಾ.ವಿ.ಬಿ.ರಡ್ಡೇರ, ಪರೀಕ್ಷಿತರಾಜ ಮತ್ತು ಮಾಲಿಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ಎಚ್.ಎಸ್.ಪಾಟೀಲ್, ಎಸ್.ಎಂ.ಕಂಬಾಳಿಮಠ, ಮಲ್ಲಿಕಾರ್ಜುನ ಸೋಮಲಾಪುರ, ಕವಿಸಮೂಹ ಬಳಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.