ಸೋಮವಾರ, ಜನವರಿ 2, 2012
ಶ್ರೀಮಠದಲ್ಲಿ ಜಾತ್ರೆಗೆ ಭರದಿಂದ ಸಿದ್ದತೆ
ಕೊಪ್ಪಳ. ಈ ನೆಲದ ಪಾವನ ಪುರುಷರಾದ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ದಿನಗಣನೆ ಆರಂಭವಾಗಿದ್ದೂ ಭಕ್ತರ ಮನಸ್ಸೂ ಉಲ್ಲಾಸಭರಿತವಾಗುತ್ತಿದೆ. ಮಹಾರಥೋತ್ಸವದ ಅಂಗವಾಗಿ ಶ್ರೀಮಠದಲ್ಲಿ ಚುರುಕಿನಿಂದ ಸಕಲ ಸಿದ್ದತೆಗಳು ನಡೆಯುತ್ತಿವೆ. ಬ್ರಹತ್ ದಾಸೋಹ ಮಂಟಪ, ವಿಶಾಲವಾದ ಮೈದಾನದಲ್ಲಿ ಚೊಕ್ಕವಾದ ಅಂಗಡಿ ಮುಂಗಟ್ಟುಗಳು, ಹಾಗೂ ಧಾರ್ಮಿಕ ಚಿಂತನ ಮಂತನಗಳು ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯುವ ಕೈಲಾಸ ಮಂಟಪ ಹೀಗೆ ಏನೆಲ್ಲ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಸ್ವತಃ ಶ್ರೀಗಳೇ ಪುರದ ಪ್ರಮುಖರೊಂದಿಗೆ ಉತ್ಸುಕತೆಯಿಂದ ಪಾದರಸದಂತೆ ಸುತ್ತಾಡಿ ಮೇಲುಸ್ತುವಾರಿ ವಹಿಸಿರುವದು ಭಕ್ತರಿಗೆ ಆನಂದ ತರುತ್ತಿದೆ.
ಧವಸ ಧಾನ್ಯ ಅರ್ಪಣೆ:
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಶ್ರೀಮಠಕ್ಕೆ ಜಿಲ್ಲೆಯಾಧ್ಯಾಂತ ಧವಸ-ಧಾನ್ಯಗಳು ಅರ್ಪಿತವಾಗಿತ್ತವೆ. ಇತ್ತೀಚಿಗೆ ಹನುಮನಟ್ಟಿ ಗ್ರಾಮದಿಂದ ೪೫ ಪಾಕೇಟ್ ಮೆಕ್ಕೆಜೋಳ, ೫೦ ಕೆ.ಜಿ ಜೋಳ, ೧ ಚೀಲ ಖಾರದ ಪುಡಿ, ವಗರನಾಳಗ್ರಾಮದಿಂದ ೨೨ ಚೀಲ ನೆಲ್ಲು, ೮ ಪಾಕೆಟ್ ಸಜ್ಜಿ, ಬೋಚನಹಳ್ಳಿಗ್ರಾಮದಿಂದ ೪೫ ಪಾಕೇಟ ಮೆಕ್ಕೆಜೋಳ, ೧ ಪಾಕೆಟ್ ಸಜಿ, ೧ಪಾಕೆಟ್ ಜೋಳ, ಕೆಂಚನಗೌಡ ಮನ್ನಾಪುರ ದದೇಗಲ್ ಗ್ರಾಮದ ಭಕ್ತರಿಂದ ೧೫ ಪಾಕೇಟ್ ಉಳ್ಳಾಗಡ್ಡಿ, ಅಲ್ಲದೇ ಮುರಡಿ,ಭಾನಾಪುರ,ವಗರನಾಳ ಗ್ರಾಮದ ಭಕ್ತರಿಂದ ಟ್ರ್ಯಾಕ್ಟರ್ ಕಟ್ಟಿಗಗಳು,ಇವುಗಳಲ್ಲದೇ ಸ್ಥಳೀಯ ಹಾಗೂ ಹೊರಗಿನ ಭಕ್ತರಿಂದ ಚಿಕ್ಕ ಪುಟ್ಟ ರೀತಿಯ ಧವಸ ಧಾನ್ಯಗಳು ಶ್ರೀಮಠಕ್ಕೆ ಅರ್ಪಿತವಾಗಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ
ಶುಕ್ರವಾರ, ನವೆಂಬರ್ 25, 2011
೨೫ನೇ ಬೆಳಕಿನೆಡೆಗೆ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನೆ
ಸಂಸ್ಥಾನ ಶ್ರೀ ಗವಿಮಠ ಕೊಪ್ಪಳದಲ್ಲಿ ಶ್ರೀ ಮ. ನಿ. ಪ್ರ. ಲಿಂ. ಜ|| ಶ್ರೀ ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ಜರುಗುವ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನೆ ಕಾರ್ಯಕ್ರಮವು ದಿನಾಂಕ ೨೫.೧೧.೨೦೧೧ರ ಶುಕ್ರವಾರ ಶ್ರೀ ಮಠದ ಕೆರೆಯ ದಡದಲ್ಲಿ ಸಾಯಂಕಾಲ ೬:೩೦ ಗಂಟೆಗೆ ಜರಗುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಹಿರಿಯ
ವಿದ್ವಾಂಸರಾದ ಕೋ. ಚನ್ನಬಸಪ್ಪನವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನ ಅಲ್ಲಂ ಗುರುಬಸವರಾಜ ಅಧ್ಯಕ್ಷರು ವೀರಶೈವ ವಿದ್ಯಾವರ್ಧಕ ಸಂಸ್ಥೆ ಬಳ್ಳಾರಿ ವಹಿಸುವರು. ಇದೇ ಸಮಯದಲ್ಲಿ ಬಾಪು ಪದ್ಮನಾಭ ಹಾಗೂ ಯಾನ್ಕ್ಲೀನ್ ಯುರೋಪ ಹಾಗೂ ಸಂಗಡಿಗರಿಂದ ಅಂತರಾಷ್ಟ್ರೀಯ ಸಂಗೀತ ಸಮಾಗಮ ಕಾರ್ಯಕ್ರಮ ನೆಡೆಯಲಿದೆ. ಇದೇ ವೇದಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರು ಕನಕಗಿರಿಯ ಶಂಕರ ಬಿನ್ನಾಳ ಅವರನ್ನು ಸನ್ಮಾನಿಸಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಗುರುಶಾಂತಪ್ಪ ವೀರಣ್ಣ ಅಗಡಿ ಇವರ ಸ್ಮರಣಾರ್ಥ ಅವರ ಪುತ್ರರಾದ ಭಾ.ಜ.ಪ ಮುಖಂಡರು ಆದ ಅಂದಣ್ಣ ಅಗಡಿ, ಇವರು ಭಕ್ತಿ ಸೇವೆಯನ್ನ ಗೈಯಲಿದ್ದಾರೆ. ಸದ್ಭಕ್ತರು ಇ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.ಭಾನುವಾರ, ಮಾರ್ಚ್ 27, 2011
ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇ ಪುಣ್ಯಸ್ಮರಣೋತ್ಸವ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳದಲ್ಲಿ ದಿನಾಂಕ ೨೮.೦೩.೨೦೧೧ ಸೋಮವಾರದಂದು ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಅಂದು ಬೆಳಿಗ್ಗೆ ೭.೩೦ಕ್ಕೆ ಪರಮಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಕಾರ್ಯಕ್ರಮ ಜರುಗುವದು. ಅಂದೆ ಬೆಳಿಗ್ಗೆ ೧೦.೩೦ಕ್ಕೆ ಬಸವೇಶ್ವರ ವೃತ್ತದಲ್ಲಿನ ನೂತನ ಮಹಾದ್ವಾರ ಕಟ್ಟಡದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಮುರುಡಿ, ಹಿರೇಮಠ, ಯಲಬುರ್ಗಾ ಪೂಜ್ಯರ ಲಿಂಗ ಹಸ್ತದಿಂದ ಜರುಗುವದು. ಬೆಳಿಗ್ಗೆ ೧೧.೦೦ ಗಂಟೆಗೆ ೧೦೮ ಅಡಿ ಎತ್ತರದ ರಾಜಗೋಪುರ ಕಟ್ಟಡದ ಶಿಲಾನ್ಯಾಸವನ್ನು ಶ್ರೀ ಮ. ನಿ. ಪ್ರ. ಡಾ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿರಕ್ತಮಠ, ಕನಕಗಿರಿ ಪೂಜ್ಯರು ಶ್ರೀಮಠದ ಆವರಣದಲ್ಲಿ ನೆರವೇರಿಸುವರು. ಅಂದು ಸಾಯಂಕಾಲ ೬.೩೦ ಗಂಟೆಗೆ ಕೈಲಾಸಮಂಟಪದಲ್ಲಿ ಜರುಗಲಿರುವ ಗುರುಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿರೇನಾಗಾವಿಯ ಶ್ರೀ ಮ. ನಿ. ಪ್ರ. ಜಯಶಾಂತಲಿಂಗ ಮಹಾಸ್ವಾಮಿಗಳು, ಹೆಬ್ಬಾಳದ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ, ಹೆಬ್ಬಾಳ, ಢವಳಗಿಯ ಪರಮಪೂಜ್ಯ ಶ್ರೀ ಘನಮಠೇಶ್ವರ ಮಹಾಸ್ವಾಮಿಗಳು ಅಲ್ಲದೇ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಪ್ರಧಾನ ಸಂಚಾಲಕರಾದ ಡಾ. ಬಸವರಾಜ ಪಾಟೀಲ ಸೇಡಂ ಆಗಮಿಸಲಿದ್ದಾರೆ. ಶ್ರೀ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿದ ಶಿವಶಾಂತ ಎಂಬ ಕವನಸಂಕಲನವು ಲೋಕಾರ್ಪಣೆಯಾಗಲಿದೆ. ಇದೇ ವೇದಿಕೆಯಲ್ಲಿ ಪಂ. ಪ್ರಕಾಶ ಸೊಂಟಕ್ಕಿ ಹಾಗೂ ಶ್ರೀಮತಿ ಸುಮಾ ಸುಧೀಂದ್ರ ಬೆಂಗಳೂರು ತಂಡದವರಿಂದ ಫ್ಯೂಜನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
ಉಚಿತ ಆರೋಗ್ಯ ತಪಾಸಣೆ
ಈ ಗುರುಸ್ಮರಣೆ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀಗಳ ಸಂಕಲ್ಪದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ ಪ್ರಖ್ಯಾತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು
ಉಚಿತ ಆರೋಗ್ಯ ತಪಾಸಣೆ
ಈ ಗುರುಸ್ಮರಣೆ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀಗಳ ಸಂಕಲ್ಪದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ ಪ್ರಖ್ಯಾತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

