ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ "ಪಂಡಿತ ಪುಟ್ಟರಾಜ ಕವಿಗವಾಯಿಗಳ ನೆನಹು" ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುರುಘಾಮಠ ಚಿತ್ರದುರ್ಗದ ಜಮುರಾ ಕಲಾಲೋಕ ತಂಡದವರಾದ ಶ್ರೀ ತೋಟಪ್ಪ ಉತ್ತಂಗಿ ಹಾಗೂ ಶ್ರೀಮತಿ ಕೋಕಿಲಾ ರುದ್ರಮೂರ್ತಿ, ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಭಾಗ್ಯನಗರದ ಸಾಹಿತಿಗಳಾದ ಶ್ರೀ ವಿಠ್ಠಪ್ಪ ಗೋರಂಟ್ಲಿ ಆಗಮಿಸಲಿದ್ದಾರೆ. ಭಕ್ತಿ ಸೇವೆಯನ್ನ ಶ್ರೀ ಎಸ್.ಎನ್ ತಿಮ್ಮನಗೌಡ್ರ ಪ್ರಥಮ ದರ್ಜೆ ಸಹಾಯಕರು, ಎ.ಪಿ.ಎಂ.ಸಿ, ಕೊಪ್ಪಳ ಇವರು ತಮ್ಮ ತಂದೆ ಲಿಂ.ನಿಂಗನಗೌಡ ತಿಮ್ಮನಗೌಡ್ರ ಇವರ ಸ್ಮರಣಾರ್ಥ ಆಯೋಜಿಸಿದ್ದಾರೆ. ಸಕಲ ಸದ್ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಮಂಗಳವಾರ, ನವೆಂಬರ್ 2, 2010
ಶ್ರೀಮಠದ ಭಕ್ತಾದಿಗಳಿಗೆ ಸೂಚನೆ
೧. ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳ ಶ್ರೀ ಮ.ನಿ.ಪ್ರ.ಲಿಂ.ಜ.ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಪ್ರತಿ ಅಮವಾಸ್ಯೆಯ ದಿನ ನಡೆಯುವ 'ಬೆಳಕಿನೆಡೆಗೆ' ಮಾಸಿಕ ಕಾರ್ಯಕ್ರಮವನ್ನು ದೀಪಾವಳಿ ನಿಮಿತ್ಯ ದಿನಾಂಕ ೦೮-೧೧-೨೦೧೦ ಸೋಮವಾರದಂದು ಶ್ರೀ ಮಠದ ಕೆರೆಯ ದಡದಲ್ಲಿ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಶುಕ್ರವಾರ, ಅಕ್ಟೋಬರ್ 8, 2010
೧೨ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ
ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಮ. ನಿ. ಪ್ರ. ಲಿಂ. ಜ. ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಶ್ರೀ ಮಠದ ಕೆರೆಯ ದಂಡೆಯ ಮೇಲೆ ೧೨ ನೇ ಮಾಸಿಕ ಬೆಳಕಿನೆಡೆಗೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಇಟಗಿ ಈರಣ್ಣ, ವಿಶ್ರಾಂತ ಪ್ರಾಧ್ಯಾಪಕರು, ಹೊಸಪೇಟೆ ಇವರು ಶರಣ ಸಂಸ್ಕೃತಿ ಕುರಿತು ಮಾತನಾಡುತ್ತಾ ಶರಣರು ಕಾಯಕಕ್ಕೆ ಮಹತ್ವ ನೀಡಿದ್ದಾರೆ. ನಾವು ಕಾಯಕ ಮಾಡುತ್ತಿಲ್ಲ. ಬರೀ ಮಾತನಾಡುತ್ತೇವೆ. ಹಾಗಾಗಬಾರದು. ನಾವು ಮಾತನಾಡಿದರೆ ಸಂಸ್ಕಾರಯುತ ಮಾತುಗಳನ್ನ ಮಾತನಾಡಬೇಕು. ಅಂದಾಗ ಜನ ಸ್ವೀಕಾರ ಮಾಡುತ್ತಾರೆ. ಶರಣರು ಅಂತಹ ಮಾತುಗಳನ್ನ ನುಡಿದಿದ್ದಾರೆ, ನುಡಿದಂತೆ ನಡೆದಿದ್ದಾರೆ. ಮಾತು ಮಾಣಿಕ್ಯಕ್ಕೆ ಸಮ ಎಂದು ಹೇಳುತ್ತಾ ಬಸವಣ್ಣನವರ "ನುಡಿದರೆ ಮುತ್ತಿನ ಹಾರದಂತಿರಬೇಕು" ಈ ಒಂದೇ ವಚನದ ವಿವಿಧ ಅರ್ಥ ಮುಖಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನ ಶ್ರೀ ಈಶ್ವರ ಹತ್ತಿ, ಕೊಪ್ಪಳ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಪ್ರೋ|| ಎಸ್. ಬಿ. ಹಿರೇಮಠ ಹಾಗೂ ಸಹೋದರರು ತಮ್ಮ ತಂದೆ ಲಿಂ. ಬಸಯ್ಯ ಹಿರೇಮಠ ಸ್ಮರಣಾರ್ಥ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಮಂಗಳವಾರ, ಏಪ್ರಿಲ್ 13, 2010
ಬುಧವಾರ ಬೆಳಕಿನೆಡೆಗೆ ಕಾರ್ಯಕ್ರಮ
ಕೊಪ್ಪಳ : ಸ್ಥಳೀಯ ಪ್ರತಿಷ್ಠಿತ ಗವಿಮಠದಿಂದ ಪ್ರತಿತಿಂಗಳು ಅಮವಾಸ್ಯೆಯಂದು ಹಮ್ಮಿಕೊಳ್ಳಲಾಗುವ ಬೆಳಕಿನೆಡೆಗೆ ಕಾರ್ಯಕ್ರಮ ನಾಳ 14-4-2010ರಂದು ನಡೆಯಲಿದೆ.
ಸಂಜೆ 6-30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡಾ.ಗುರುದೇವಿ ಹುಲೆಪ್ಪನವರ ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ಡಾ.ಕೆ.ಬಿ.ಬ್ಯಾಳಿ ವಹಿಸಿಕೊಳ್ಳುವರು. ಗವಿಮಠದ ಕೆರೆದಡದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ, ಮಾರ್ಚ್ 19, 2010
ಗವಿಮಠದಲ್ಲಿ ಯುಗಾದಿ ಸಂಭ್ರಮ
ಮಂಗಳವಾರ, ಮಾರ್ಚ್ 16, 2010
ಶ್ರೀ ಗವಿಮಠದಲ್ಲಿ ಬೆಳಕಿನೆಡೆಗೆ ಕಾರ್ಯಕ್ರಮ
ಕೊಪ್ಪಳ ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ಪ್ರತಿ ಅಮವಾಸ್ಯೆಯ ನಿಮಿತ್ಯ ನಡೆಯುವ 'ಬೆಳಕಿನೆಡೆಗೆ' ಕಾರ್ಯಕ್ರಮದ ಅಂಗವಾಗಿ ಯುಗಾದಿ ಅಮವಾಸ್ಯೆಯ ನಿಮಿತ್ಯ ೫ನೇಯ ಬೆಳಕಿನೆಡೆಗೆ ಕಾರ್ಯಕ್ರಮ ಶ್ರೀ ಗವಿಮಠದ ಕೆರೆಯ ದಂಡೆಯ ಮೇಲಿನ ವೇದಿಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಕೊಳ್ಳೆಗಾಲದ ಶ್ರೀ ಅನಂತನರಸಿಂಹ ಶಾಸ್ತ್ರಿಗಳು ಅತಿಥಿಗಳಾಗಿ ಆಗಮಿಸಿ ಶ್ರೀ ನಿಜಗುಣ ಶಿವಯೋಗಿಗಳ 'ಪಾರ್ವತಿ ಪ್ರಣಯ ಕಲಹ' ಈ ವಿಷಯ ಕುರಿತು ಉಪನ್ಯಾಸ ಮಾಡುತ್ತಾ ನಿಜಗುಣ ಶಿವಯೋಗಿಗಳ ಕಾವ್ಯದಲ್ಲಿ ಪಾರಮಾರ್ಥಿಕ ಚಿಂತನೆ ಇರುತ್ತದೆ. ಇದನ್ನು ಅರ್ಥೈಸಿಕೊಂಡು ಬದುಕು ಸಾಗಿಸಬೇಕು. ಇವರು ಕನ್ನಡ ಸಾಹಿತ್ಯಕ್ಕೆ ೬ ಪ್ರಮುಖ ಶಾಸ್ತ್ರಗಳನ್ನ ನೀಡಿದ್ದಾರೆ ಎಂದು ಹೇಳುತ್ತಾ ನಿಜಗುಣ ಶಿವಯೋಗಿಗಳ ಸಾಹಿತ್ಯದ ವಿವಿಧ ಮುಖಗಳನ್ನು ಹೇಳಿದರು. ಅಧ್ಯಕ್ಷತೆಯನ್ನ ಶ್ರೀ ಶರಣ ವೀರಭದ್ರಪ್ಪನವರು ಕುರಕುಂದಿ ವಹಿಸಿ ಆಧ್ಯರ ವಚನಗಳು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತವೆ. ಶರಣರ ವಚನ ಸಾಹಿತ್ಯದ ಕಡೆಗೆ ನಾವೆಲ್ಲ ಹೋದಾಗ ನಾವು ಖಂಡಿತವಾಗಿ ಬೆಳಕಿನ ಕಡೆಗೆ ಹೋಗುತ್ತೇವೆ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಸಮಾರಂಭದ ಸಾನಿಧ್ಯವನ್ನ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಗುಡ್ಡದ ವಿರಕ್ತಮಠ, ನಿಲಗುಂದ ಇವರು ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ೫ನೇ ಈ ಮಾಸಿಕ ಕಾರ್ಯಕ್ರಮವನ್ನು ಆಯೋಜಿಸಿ ಭಕ್ತಿಸೇವೆಗೈದ ಶ್ರೀ ರಮೇಶ ಕುಮಾರ ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಗುಲಬುರ್ಗಾ ಇವರನ್ನು ಸಾನಿಧ್ಯ ವಹಿಸಿದ ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗವಿಸಿದ್ಧಪ್ಪ ಕೊಪ್ಪಳ, ಪ್ರಾರ್ಥನೆಯನ್ನು ದೀಪ್ತಿ ನರಸಿಂಹಶಾಸ್ತ್ರಿ, ಕಾರ್ಯಕ್ರಮಕ್ಕೆ ಮುಂಚೆ ಶ್ರೀ ಗವಿಮಠದ ಸಂಗೀತ ಪಾಠಶಾಲೆಯ ವಿದ್ಯಾರ್ಥಿಬಳಗದಿಂದ ಸಂಗೀತ ಕಾರ್ಯಕ್ರಮ ನಡೆತು. ಸಭೆಯಲ್ಲಿ ಶ್ರೀ ಮ.ನಿ.ಪ್ರ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಹಾಗೆಯೇ ಅಪಾರ ಸದ್ಭಕ್ತರು ಸಭೆಗೆ ಮೆರಗನ್ನು ತಂದುಕೊಟ್ಟರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)

