ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಶುಕ್ರವಾರ, ಅಕ್ಟೋಬರ್ 8, 2010

೧೨ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಮ. ನಿ. ಪ್ರ. ಲಿಂ. ಜ. ಶಿವಶಾಂತವೀರ ಶಿವಯೋಗಿಗಳ ದಿವ್ಯ ಪ್ರಕಾಶದಲ್ಲಿ ಶ್ರೀ ಮಠದ ಕೆರೆಯ ದಂಡೆಯ ಮೇಲೆ ೧೨ ನೇ ಮಾಸಿಕ ಬೆಳಕಿನೆಡೆಗೆ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಇಟಗಿ ಈರಣ್ಣ, ವಿಶ್ರಾಂತ ಪ್ರಾಧ್ಯಾಪಕರು, ಹೊಸಪೇಟೆ ಇವರು ಶರಣ ಸಂಸ್ಕೃತಿ ಕುರಿತು ಮಾತನಾಡುತ್ತಾ ಶರಣರು ಕಾಯಕಕ್ಕೆ ಮಹತ್ವ ನೀಡಿದ್ದಾರೆ. ನಾವು ಕಾಯಕ ಮಾಡುತ್ತಿಲ್ಲ. ಬರೀ ಮಾತನಾಡುತ್ತೇವೆ. ಹಾಗಾಗಬಾರದು. ನಾವು ಮಾತನಾಡಿದರೆ ಸಂಸ್ಕಾರಯುತ ಮಾತುಗಳನ್ನ ಮಾತನಾಡಬೇಕು. ಅಂದಾಗ ಜನ ಸ್ವೀಕಾರ ಮಾಡುತ್ತಾರೆ. ಶರಣರು ಅಂತಹ ಮಾತುಗಳನ್ನ ನುಡಿದಿದ್ದಾರೆ, ನುಡಿದಂತೆ ನಡೆದಿದ್ದಾರೆ. ಮಾತು ಮಾಣಿಕ್ಯಕ್ಕೆ ಸಮ ಎಂದು ಹೇಳುತ್ತಾ ಬಸವಣ್ಣನವರ "ನುಡಿದರೆ ಮುತ್ತಿನ ಹಾರದಂತಿರಬೇಕು" ಈ ಒಂದೇ ವಚನದ ವಿವಿಧ ಅರ್ಥ ಮುಖಗಳನ್ನು ವಿವರಿಸಿದರು. ಅಧ್ಯಕ್ಷತೆಯನ್ನ ಶ್ರೀ ಈಶ್ವರ ಹತ್ತಿ, ಕೊಪ್ಪಳ ವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಭಕ್ತಿ ಸೇವೆಯನ್ನು ಪ್ರೋ|| ಎಸ್. ಬಿ. ಹಿರೇಮಠ ಹಾಗೂ ಸಹೋದರರು ತಮ್ಮ ತಂದೆ ಲಿಂ. ಬಸಯ್ಯ ಹಿರೇಮಠ ಸ್ಮರಣಾರ್ಥ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.