ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಶುಕ್ರವಾರ, ಮಾರ್ಚ್ 19, 2010

ಗವಿಮಠದಲ್ಲಿ ಯುಗಾದಿ ಸಂಭ್ರಮ















ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠ, ಕೊಪ್ಪಳದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಯುಗಾದಿ ಪಾಡ್ಯದ ಅಂಗವಾಗಿ ಭಕ್ತಾದಿಗಳಿಗೆ ಶ್ರೀಮಠದಲ್ಲಿ ಸಿಹಿ ಕಹಿಯ ಸಾಂಕೇತಿಕವಾಗಿ ಬೇವನ್ನು ವಿತರಿಸಲಾತು.

ಮಂಗಳವಾರ, ಮಾರ್ಚ್ 16, 2010


ಶ್ರೀ ಗವಿಮಠದಲ್ಲಿ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ಪ್ರತಿ ಅಮವಾಸ್ಯೆಯ ನಿಮಿತ್ಯ ನಡೆಯುವ 'ಬೆಳಕಿನೆಡೆಗೆ' ಕಾರ್ಯಕ್ರಮದ ಅಂಗವಾಗಿ ಯುಗಾದಿ ಅಮವಾಸ್ಯೆಯ ನಿಮಿತ್ಯ ೫ನೇಯ ಬೆಳಕಿನೆಡೆಗೆ ಕಾರ್ಯಕ್ರಮ ಶ್ರೀ ಗವಿಮಠದ ಕೆರೆಯ ದಂಡೆಯ ಮೇಲಿನ ವೇದಿಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಕೊಳ್ಳೆಗಾಲದ ಶ್ರೀ ಅನಂತನರಸಿಂಹ ಶಾಸ್ತ್ರಿಗಳು ಅತಿಥಿಗಳಾಗಿ ಆಗಮಿಸಿ ಶ್ರೀ ನಿಜಗುಣ ಶಿವಯೋಗಿಗಳ 'ಪಾರ್ವತಿ ಪ್ರಣಯ ಕಲಹ' ಈ ವಿಷಯ ಕುರಿತು ಉಪನ್ಯಾಸ ಮಾಡುತ್ತಾ ನಿಜಗುಣ ಶಿವಯೋಗಿಗಳ ಕಾವ್ಯದಲ್ಲಿ ಪಾರಮಾರ್ಥಿಕ ಚಿಂತನೆ ಇರುತ್ತದೆ. ಇದನ್ನು ಅರ್ಥೈಸಿಕೊಂಡು ಬದುಕು ಸಾಗಿಸಬೇಕು. ಇವರು ಕನ್ನಡ ಸಾಹಿತ್ಯಕ್ಕೆ ೬ ಪ್ರಮುಖ ಶಾಸ್ತ್ರಗಳನ್ನ ನೀಡಿದ್ದಾರೆ ಎಂದು ಹೇಳುತ್ತಾ ನಿಜಗುಣ ಶಿವಯೋಗಿಗಳ ಸಾಹಿತ್ಯದ ವಿವಿಧ ಮುಖಗಳನ್ನು ಹೇಳಿದರು. ಅಧ್ಯಕ್ಷತೆಯನ್ನ ಶ್ರೀ ಶರಣ ವೀರಭದ್ರಪ್ಪನವರು ಕುರಕುಂದಿ ವಹಿಸಿ ಆಧ್ಯರ ವಚನಗಳು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತವೆ. ಶರಣರ ವಚನ ಸಾಹಿತ್ಯದ ಕಡೆಗೆ ನಾವೆಲ್ಲ ಹೋದಾಗ ನಾವು ಖಂಡಿತವಾಗಿ ಬೆಳಕಿನ ಕಡೆಗೆ ಹೋಗುತ್ತೇವೆ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಸಮಾರಂಭದ ಸಾನಿಧ್ಯವನ್ನ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಗುಡ್ಡದ ವಿರಕ್ತಮಠ, ನಿಲಗುಂದ ಇವರು ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ೫ನೇ ಈ ಮಾಸಿಕ ಕಾರ್ಯಕ್ರಮವನ್ನು ಆಯೋಜಿಸಿ ಭಕ್ತಿಸೇವೆಗೈದ ಶ್ರೀ ರಮೇಶ ಕುಮಾರ ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಗುಲಬುರ್ಗಾ ಇವರನ್ನು ಸಾನಿಧ್ಯ ವಹಿಸಿದ ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗವಿಸಿದ್ಧಪ್ಪ ಕೊಪ್ಪಳ, ಪ್ರಾರ್ಥನೆಯನ್ನು ದೀಪ್ತಿ ನರಸಿಂಹಶಾಸ್ತ್ರಿ, ಕಾರ್ಯಕ್ರಮಕ್ಕೆ ಮುಂಚೆ ಶ್ರೀ ಗವಿಮಠದ ಸಂಗೀತ ಪಾಠಶಾಲೆಯ ವಿದ್ಯಾರ್ಥಿಬಳಗದಿಂದ ಸಂಗೀತ ಕಾರ್ಯಕ್ರಮ ನಡೆತು. ಸಭೆಯಲ್ಲಿ ಶ್ರೀ ಮ.ನಿ.ಪ್ರ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಹಾಗೆಯೇ ಅಪಾರ ಸದ್ಭಕ್ತರು ಸಭೆಗೆ ಮೆರಗನ್ನು ತಂದುಕೊಟ್ಟರು.

ಭಾನುವಾರ, ಮಾರ್ಚ್ 14, 2010

ಗವಿಮಠದಲ್ಲಿ ಬೆಳಕಿನೆಡೆಗೆ ಕಾರ್ಯಕ್ರಮ

ಶ್ರೀಗವಿಮಠದ ಕೆರೆದಡದಲ್ಲಿ ದಿನಾಂಕ 15ರ ಸಂಜೆ 6-30ಕ್ಕೆ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಕೊಳ್ಳೇಗಾಲದ ಅನಂತ ನರಸಿಂಹಶಾಸ್ತ್ರೀ ಮುಖ್ಯ ಉಪನ್ಯಾಸಕರಾಗಿ ಆಗಮಿಸಲಿದ್ದಾರೆ. ವೀರಭದ್ರಪ್ಪ ಕುರಕುಂದಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶ್ರೀಮಠದ ಪ್ರಕಟಣೆ ತಿಳಿಸಿದೆ

ಮಂಗಳವಾರ, ಮಾರ್ಚ್ 9, 2010

ಭರ್ಜರಿ ಮಹಾದಾಸೋಹ

ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದಲ್ಲಿ ಲಿಂ. ಜ. ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯಸ್ಮರಣೆಯ ಅಂಗವಾಗಿ ಮಹಾದಾಸೋಹ ಯಶಸ್ವಿಯಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕಿಂತಲು ವಿಶೇಷವಾಗಿ ಇಂದಿನ ಮಹಾದಾಸೋಹದಲ್ಲಿ ಸಿಹಿ ಲಾಡು (ಬೂಂದಿ), ಪಲಾವ್, ಬದನೆಕಾಯಿ ಪಲ್ಲೆ, ಹುಳಿ ಚಟ್ನಿ, ಮೊಸರು, ತಂಪು ಮಜ್ಜಿಗೆ ಇಂದಿನ ಮಹಾದಾಸೋಹದಲ್ಲಿ ಕಂಡುಬಂದಿತು. ಕೊಪ್ಪಳ ಜಿಲ್ಲೆಯಾದ್ಯಂತ ಅನೇಕ ಭಕ್ತರು ಬೆಳಿಗ್ಗೆ ೧೦.೩೦ ಗಂಟೆಯಿಂದ ಮಹಾಪ್ರಸಾದವನ್ನ ಸ್ವೀಕರಿಸಿ ಸಂತುಷ್ಟರಾದರು. ೩೦ ಕ್ವಿಂಟಲ್ ಸಿಹಿ ಲಾಡು, ೪೦ ಕ್ವಿಂಟಲ್ ಅಕ್ಕಿ, ಸುಮಾರು ೧೦ ಬ್ಯಾರಲ್ ತಂಪು ಮಜ್ಜಿಗೆ ಇಂದಿನ ಮಹಾದಾಸೋಹದಲ್ಲಿ ಬಳಕೆಮಾಡಲಾಗಿದೆ.

ಯಶಸ್ವಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಪರಮಪೂಜ್ಯ ಲಿಂ. ಜ. ಶ್ರೀ ಶಿವಶಾಂತವೀರ ಮಹಾಶಿವಯೊಗಿಗಳ ೭ನೇಯ ಪುಣ್ಯಸ್ಮರಣೆಯ ನಿಮಿತ್ಯ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಂಕಲ್ಪದ ಮೇರೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಯಶಸ್ವಿಯಾಗಿ ನಡೆತು. ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ವಿವಿಧ ತಜ್ಞ ವೈದ್ಯರು ವಿವಿಧ ರೋಗಿಗಳಿಗೆ ಆರೋಗ್ಯ ತಪಾಸಣೆ ನಡೆಸಿದರು. ತಜ್ಞ ವೈದ್ಯರುಗಳಾದ ಡಾ||ಎಸ್.ಪಿ.ಬಳಿಗಾರ, ನರರೋಗ ತಜ್ಞರು ಹುಬ್ಬಳ್ಳಿ ಇವರು ೫೦೮, ಡಾ||ಷಣ್ಮುಖ ಹಿರೇಮಠ ಹೃದಯ ರೋಗ ತಜ್ಞರು ಹುಬ್ಬಳ್ಳಿ ೨೬೨, ಡಾ|| ಅಜಯಕುಮಾರ, ಮಾನಸಿಕ ರೋಗ ತಜ್ಞರು ೨೭೨, ಡಾ|| ಸದಾಶಿವ ಸೊಪ್ಪಿಮಠ, ಉದರರೋಗ ತಜ್ಞರು ಹುಬ್ಬಳ್ಳಿ ೨೩೦, ಡಾ|| ಆರ್.ಬಿ.ನೆರ್ಲಿ, ಮೂತ್ರಪಿಂಡ ತಜ್ಞರು ೧೫೦, ಡಾ|| ಶ್ರೀನಿವಾಸ .ಎಚ್. ಚಿಕ್ಕಮಕ್ಕಳ ತಜ್ಞರು ಕೊಪ್ಪಳ ೧೫೧, ಡಾ|| ಉಮೇಶ ನಾಗಲೋಟಿಮಠ. ಇ.ಎನ್.ಟಿ ತಜ್ಞರು, ಹುಬ್ಬಳ್ಳಿ ೨೬೨, ಡಾ|| ಉಮೇಶ ರಾಜೂರ, ಮಧುಮೇಹ ಇತರೆ, ಹುಬ್ಬಳ್ಳಿ ೧೮೦, ಡಾ|| ಬಿ.ಎಸ್.ಸವಡಿ ಮೂಲವ್ಯಾದಿ ತಜ್ಞರು ೭೦, ಡಾ|| ಎಸ್.ಎಂ.ಹಕ್ಕಂಡಿ, ಚರ್ಮ ರೋಗ ತಜ್ಞರು ಕೊಪ್ಪಳ ೧೭೯, ಡಾ|| ಬಿ.ಎಚ್.ಮನೋಹರ. ಪಾರ್ಶ್ವವಾಯು ತಜ್ಞರು ಕೊಪ್ಪಳ ೧೪೮, ಡಾ|| ಗವಿ ಪಾಟೀಲ, ಸಂದಿರೋಗ ತಜ್ಞರು, ಕೊಪ್ಪಳ ೪೦೩, ಡಾ|| ಬಿ.ಎಲ್.ಕಲ್ಮಠ, ಶ್ವಾಸಕೋಶ ತಜ್ಞರು ಕೊಪ್ಪಳ ೧೫೩, ಡಾ|| ಆರ್.ಪಿ ದೇವರಗುಡಿ, ಸ್ತ್ರೀರೋಗ ತಜ್ಞರು, ಕೊಪ್ಪಳ ೯೨ ಒಟ್ಟು ೩೦೬೫ ಕ್ಕಿಂತ ಹೆಚ್ಚು ರೋಗಿಗಳು ಇಂದಿನ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಂಡರು ಎಂದು ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಬಿ.ಎಸ್. ಸವಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವನಮಹೋತ್ಸವ ಕಾರ್ಯಕ್ರಮ


ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ


ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ







ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ


ಪರಮಪೂಜ್ಯ ಶ್ರೀ ಮ. ನಿ. ಪ್ರ. ಜ. ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ ೭ನೇ ಪುಣ್ಯಸ್ಮರಣೋತ್ಸವ
ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದ ೧೭ನೇಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಜ. ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ ೭ನೇ ಪುಣ್ಯಸ್ಮರಣೆ ಅದ್ಧೂರಿಯಾಗಿ ನೆರವೇರಿತು. ಇಂದು ಬೆಳಿಗ್ಗೆ ೫.೩೦ಕ್ಕೆ ಲಿಂ. ಶಿವಶಾಂತವೀರ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ ನೆರವೇರಿಸುವದರೊಂದಿಗೆ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಆರಂಭವಾತು. ಇದರ ಅಂಗವಾಗಿ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆತು. ಈ ಪಾದಯಾತ್ರೆಯಲ್ಲಿ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು, ಹೆಬ್ಬಾಳ ಶ್ರೀಗಳು, ಹಿರೇಸಿಂದೋಗಿ ಶ್ರೀಗಳು, ತಮದಡ್ಡಿ ಶ್ರೀಗಳು, ಕೊತ್ಬಾಳ್ ಶ್ರೀಗಳು, ಮಹಾಂತದೇವರು, ಪಂಪಯ್ಯದೇವರು ಮೊದಲಾದ ಪೂಜ್ಯರು ಭಾಗವಹಿಸಿದ್ದರು. ಮಳೆಮಲ್ಲೇಶ್ವರದಿಂದ ಶ್ರೀಗವಿಮಠದವರೆಗಿನ ಈ ಪಾದಯಾತ್ರೆಯಲ್ಲಿ ಪುರ ಪ್ರಮುಖರು, ರಾಜಕೀಯ ಗಣ್ಯರು ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನಡಿಯಲ್ಲಿ ಬರುವ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು, ಹೆಣ್ಣು ಮಕ್ಕಳು ಬಿಸಿಲನ್ನು ಲೆಕ್ಕಿಸದೇ ಶ್ರೀಗಳೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾದರು. ಪಾದಯಾತ್ರೆ ಶ್ರೀಮಠಕ್ಕೆ ತಲುಪಿದ ನಂತರ ವನಮಹೋತ್ಸವ ಕಾರ್ಯಕ್ರಮಕ್ಕೆ ನಾಡೋಜ ಪ್ರಶಸ್ತಿ ವಿಜೇತೆ ಶ್ರೀಮತಿ ಸಾಲುಮರದ ತಿಮ್ಮಕ್ಕನವರು ಶ್ರೀ ಗವಿಮಠದ ಆವರಣದಲ್ಲಿ ಸಸಿ ನೆಡುವದರೊಂದಿಗೆ ಚಾಲನೆ ನೀಡಿದರು. ಇವರ ಜೊತೆ ಪೂಜ್ಯ ಶ್ರೀ ಜ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಜಿಲ್ಲಾಧಿಕಾರಿಗಳಾದ ಶ್ರೀ ಸತ್ಯಮೂರ್ತಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಈಶ್ವರಚಂದ್ರ ವಿದ್ಯಾಸಾಗರರವರು, ಅರಣ್ಯ ಇಲಾಖೆ ಅಧಿಕಾರಿಗಳು ಮೊದಲಾದ ಗಣ್ಯರು ಭಾಗವಹಿಸಿದ್ದರು. ಬೆಳಿಗ್ಗೆ ೧೦.೦೦ ಗಂಟೆಂದ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ನಾಡಿನ ಹೆಸರಾಂತ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಯಶಸ್ವಿಯಾಗಿ ಪ್ರಾರಂಭಗೊಂಡಿತು. ಹಲವಾರು ರೋಗಿಗಳು ಸಾಲುಸಾಲಾಗಿ ನಿಂತು ತಪಾಸಣೆ ಮಾಡಿಸಿಕೊಂಡರು.
ಪ್ರಕಟಣೆ: ಪರಮಪೂಜ್ಯ ಶ್ರೀ ಮ. ನಿ. ಪ್ರ. ಜ. ಲಿಂ. ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಾಟಕಕಾರರಾದ ಶ್ರೀ ಈಶ್ವರ ಅತ್ತಿ ವಿರಚಿತ ಮತ್ತು ಶ್ರೀ ಗಂಗಾಧರ ಸ್ವಾಮಿ ನಿರ್ದೇಶನದ ಕೋಪಣಾಚಲದ ಶ್ರೀ ಗವಿಸಿದ್ಧೇಶ್ವರರು ಅರ್ಥಾತ್ ಮೆಟ್ಟಲುಗಳುಂಟು ಅಟ್ಟಣಿಕೆಗಳು ಹದಿನೆಂಟು ಎಂಬ ನಾಟಕ ಪ್ರದರ್ಶನ ದಿನಾಂಕ ೧೦ & ೧೧ ಮಾರ್ಚ ೨೦೧೦ ರಂದು ಸಂಜೆ ೭.೦೦ ಗಂಟೆಗೆ ಶ್ರೀ ಶಿವಶಾಂತವೀರ ಪಬ್ಲಿಕ್ ಸ್ಕೊಲ್ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ.

ಲಿಂ. ಶಿವಶಾಂತವೀರ ಶಿವಯೋಗಿಗಳ ಗದ್ದುಗೆಗೆ ಮಹಾರುದ್ರಾಭಿಷೇಕ




ಸೋಮವಾರ, ಮಾರ್ಚ್ 8, 2010

ಪ್ರತಿ ಪುಣ್ಯ ಸ್ಮರಣೆಗೊಂದು ಸಾಧನೆ ಮೈಲುಗಲ್ಲು

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ಎನ್ನುವುದನ್ನೇ ತಮ್ಮ ಜೀವಾಳ ಮಾಡಿಕೊಂಡಿರುವ ಸಂಸ್ಥಾನ ಗವಿಮಠದ ೧೮ನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಪ್ರತಿ ವರ್ಷ ತಮ್ಮ ಗುರುವಿನ ಸ್ಮರಣೆ ಮಾಡುವುದೇ ವಿಭಿನ್ನ.
ತಮ್ಮ ಗುರುಗಳಾದ ಸಂಸ್ಥಾನ ಶ್ರೀ ಗವಿಮಠದ ೧೭ನೇ ಪೀಠಾಧಿಪತಿಗಳಾಗಿದ್ದ ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯನ್ನು ಪ್ರತಿ ವರ್ಷ ಒಂದು ಸಾಧನೆಯ ಮೈಲಿಗಲ್ಲು ನೆಡುವ ಮೂಲಕ ಈಗಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಚರಣೆ ಮಾಡುತ್ತಿದ್ದಾರೆ. ಇದು ಶ್ರೀ ಗವಿಮಠದ ಜೊತೆಗೆ ಈ ನಾಡಿನ ಪ್ರಗತಿಯೂ ಆಗುತ್ತಿರುವುದು ಸಂತಸದ ಸಂಗತಿ.
ಸಂಸ್ಥಾನ ಗವಿಮಠದ ೧೭ನೇ ಪೀಠಾಧಿಪತಿಗಳಾಗಿದ್ದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ದಿನಾಂಕ ೨೬.೦೩.೨೦೦೩ರಂದು ಲಿಂಗೈಕ್ಯರಾದರು. ತಮ್ಮ ಅವಧಿಯಲ್ಲಿ ಅಪಾರ ಸಾಧನೆ ಮಾಡುವುದರ ಜೊತೆಗೆ ಅನೇಕ ಕನಸುಗಳನ್ನು ಕಟ್ಟಿಕೊಂಡಿದ್ದ ಶಾಂತಮೂರ್ತಿಗಳು ಅವರು.
ಅವರು ಲಿಂಗೈಕ್ಯರಾದ ಬಳಿಕ ಪಟ್ಟಕ್ಕೆ ಬಂದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರತಿವರ್ಷ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಗುರುಗಳನ್ನು ಸ್ಮರಿಸುತ್ತಾರೆ.
ಪ್ರಥಮ ಪುಣ್ಯ ಸ್ಮರಣೆಯನ್ನು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕನಸಿನ ಆಯುರ್ವೇದಿಕ್ ಕಾಲೇಜಿನ ಕಟ್ಟಡವನ್ನು ಪೂರ್ಣಗೊಳಿಸುವ ಮೂಲಕ ಆಚರಿಸಿದರು. ಅದು ನಾಡಿನ ಹೆಸರಾಂತ ಆಯುರ್ವೇದಿಕ್ ಕಾಲೇಜುಗಳಲ್ಲಿ ಒಂದು ಎನ್ನುವಂತೆ ಇಂದು ಖ್ಯಾತಿ ಪಡೆದಿದೆ.
ದ್ವಿತೀಯ ಪುಣ್ಯ ಸ್ಮರಣೆಯನ್ನು ಸದ್ಭಾವನಾ ಯಾತ್ರೆ ಹಾಗೂ ಉಚಿತ ಆರೋಗ್ಯ ಚಿಕಿತ್ಸಾ ಶಿಭಿರಗಳನ್ನು ನಡೆಸುವುದರ ಜೊತೆಗೆ ವಿಶೇಷ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ತೃತೀಯ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಳ ಉಚಿತ ಪ್ರಸಾದ ನಿಲಯಕ್ಕೆ ಅಡಿಗಲ್ಲನ್ನು ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಗಳಿಂದ ಹಾಕಿಸಲಾತು. ಇದು ಸುಮಾರು ೨.೫ ಕೋಟಿ ರೂಗಳ ಅಂದಾಜು ವೆಚ್ಚದ ಯೋಜನೆಯಾಗಿದೆ.
ನಾಲ್ಕನೇ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯದ ಮೊದಲ ಅಂತಸ್ತಿನ ಕಟ್ಟಡವನ್ನು ಉದ್ಘಾಟನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ಐದನೇ ಪುಣ್ಯ ಸ್ಮರಣೆಯನ್ನು ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯ ಕಟ್ಟಡದ ಮೊದಲ ಮಹಡಿ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಯಿತು.
ಆರನೇ ಪುಣ್ಯಸ್ಮರಣೆಗೆ ಮಹಾದ್ವಾರಕ್ಕೆ ಅಡಿಗಲ್ಲು ಹಾಕಲಾತು. ಮತ್ತು ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪಬ್ಲಿಕ್ ಸ್ಕೂಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾತು. ಈಗ ಕಾಮಗಾರಿ ಪ್ರಗತಿಯಲ್ಲಿದೆ.
ಈಗ ಏಳನೇ ಪುಣ್ಯ ಸ್ಮರಣೆಯ ಅಂಗವಾಗಿ ೫೦೦ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮ ಹಾಕಿಕೊಳ್ಳಳಾಗಿದೆ. ಅಲ್ಲದೇ ಬಿಸಿಲಿನ ಬೇಗೆಂದ ಬಳಲುತ್ತಿರುವ ಕೊಪ್ಪಳಕ್ಕೆ ನೆರಳು ಕ್ರಾಂತಿ ಮಾಡಲು ಸಹಸ್ರಾರು ಮರಗಳ ನೆಡುವ ಕಾರ್ಯಕ್ರಮ ಹಾಕಿಕೊಂಡಿದ್ದು ನಾಡೋಜ ಗೌರವಕ್ಕೆ ಪಾತ್ರವಾಗಿರುವ ಶ್ರೀಮತಿ ಸಾಲುಮರದ ತಿಮ್ಮಕ್ಕ ಅವರ ಮೂಲಕ ಹಸಿರು ಕ್ರಾಂತಿಗೆ ಚಾಲನೆ ಕೊಡಿಸಲಾಗುತ್ತದೆ. ಹೀಗೆ ಗುರು ಸ್ಮರಣೆಯನ್ನು ಪ್ರತಿ ಸಾರಿ ಒಂದು ಸಾಧನೆಯ ಮೈಲುಗಲ್ಲುಗಳನ್ನ ನೆಡುವ ಮೂಲಕ ಆಚರಣೆ ಮಾಡುವ ಸಂಪ್ರದಾಯ ಶ್ರೀ ಗವಿಮಠದ್ದಾಗಿದೆ.

ಶ್ರೀ ಗುರುವಿನ ಸ್ಮರಿಸುತ್ತಾ.......

"ಹೆಸರು ಶಿವಶಾಂತ ಉಸಿರು ಮರಿಶಾಂತ" ವಿಷಯದಲ್ಲಿ ಉದಾಸೀನ, ವಿಶೇಷತೆಯಲ್ಲಿ ಭಕ್ತಾಧೀನ. ಅಂಗ-ಲಿಂಗಗಳ ಸಮರಸವ ಸಾಧಿಸಿದ ಲಿಂಗ ಸಂಗಿ, ಮನವ ಇಂದ್ರಿಯದಲ್ಲಿರಿಸದೇ ಬ್ರಹ್ಮ ರಂಧ್ರದಲ್ಲಿ ಕೇಂದ್ರೀಕರಿಸಿದ ಅಮನಸ್ಕ ಯೋಗಿ. ಅನುಷ್ಠಾನದಿಂದ ಸ್ವಾಧೀಷ್ಠಾನಾಧಿ ಚಕ್ರಗಳ ಸಕ್ರೀಯಗೊಳಿಸಿದ ಶಿವಯೋಗ ಚಕ್ರವರ್ತಿ ಅವರಿಗೆ ಭಕ್ತರೇ ನಿಜವಾದ ಆಸ್ತಿ. ಸಮಯ ಕಳೆದಿದ್ದು ಶಿವಪೂಜೆಯಲ್ಲಿ ಜಾಸ್ತಿ. ಕಲ್ಲಿಗೂ ಕಾಯಕ ಕಲಿಸಿ, ದೀನರಿಗೆ ದಾಸೋಹದಮೃತವ ಉಣಿಸಿ, ತ್ರಾಣ ಇರುವವರೆಗೂ ಪ್ರಾಣ ಹೋಗುವವರೆಗೂ ಗವಿಸಿದ್ಧನ ಸೇವೆ ಮಾಡಿ ಲೋಕಾಂತ-ಏಕಾಂತ ಸಾಧಿಸಿದ ಮಹಾಂತ ಗುರು ಶಿವಶಾಂತನ ೭ನೇ ಪುಣ್ಯಸ್ಮರಣೆ.
ಅಕ್ಷರ ಬರದ ಈ ನಾಡಿನಲ್ಲಿ ಸಾಕ್ಷರತೆಯ ದೀಪ ಬೆಳಗಿಸಿದ್ದು ಶ್ರೀ ಗವಿಮಠ. "ಎಡಗೈಯಲ್ಲಿ ಇಷ್ಟಲಿಂಗ, ಬಲಗೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯ"ವನ್ನು ಇಟ್ಟುಕೊಂಡವರು ಗವಿಮಠದ ಎಲ್ಲ ಪೂಜ್ಯರು. ಶ್ರೀ ಮರಿಶಾಂತವೀರ ಶಿವಯೋಗಿಗಳಿಂದ ಪ್ರಾರಂಭಗೊಂಡ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಬೆಳೆದು ಇಂದು ಉತ್ತರ ಕರ್ನಾಟಕದ ಸಿದ್ಧಗಂಗೆ ಎಂದೇ ಭಕ್ತರ ಮನೆಮಾತಾಗಿದೆ. ೯೫೦ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ವ ಭಕ್ತರ ಸಹಕಾರದಿಂದ ನೂತನವಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ನಿಲಯದ ಪ್ರಥಮ ಹಂತದ ಕಟ್ಟಡ ಪೂರ್ಣಗೊಂಡಿದೆ. ದ್ವಿತೀಯ ಹಂತದ ಕಟ್ಟಡ ಪೂರ್ಣಗೊಳ್ಳುತ್ತಲಿದ್ದು ಈ ಸಂದರ್ಭದಲ್ಲಿ ೧೨ ಕೊಠಡಿಗಳ ಸಮೂಹ ಉದ್ಘಾಟನೆಗೊಳ್ಳುತ್ತಲಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಉನ್ನತ ಶಿಕ್ಷಣವನ್ನು ಗಮನದಲ್ಲಿರಿಸಿಕೊಂಡು ೫೦೦ ವಿದ್ಯಾರ್ಥಿನಿಯರಿಗಾಗಿ ಸುಸಜ್ಜಿತ ವಸತಿ ನಿಲಯ ಕಟ್ಟಡದ ಶಿಲಾನ್ಯಾಸ ನೆರವೇರಲಿದೆ.
ಕೊಪ್ಪಳ ಜಿಲ್ಲಾಡಳಿತ, ನಾಗರಿಕರು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಾಡೋಜ ಶ್ರೀಮತಿ ಸಾಲುಮರದ ತಿಮ್ಮಕ್ಕನವರಿಂದ ಕೊಪ್ಪಳವನ್ನು ಮಾಲಿನ್ಯಮುಕ್ತ ಪರಿಸರವನ್ನಾಗಿಸಲು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಲಿದೆ.
ಗುರುನಾಥರ ಪುಣ್ಯ ಸ್ಮರಣೆಗೆ ರಚನಾತ್ಮಕ ಸೇವಾ ಕಾರ್ಯಕ್ರಮಗಳೇ ಗುರುಚರಣದಲ್ಲಿ ಪುಷ್ಪಗಳಾಗಲಿ. ಅನ್ನ, ಅರಿವು, ಆರೋಗ್ಯ, ಆಧ್ಯಾತ್ಮ, ದಾಸೋಹಗಳಿಗೆ ತನು-ಮನ-ಧನ ತ್ರಿಕರ್ಣ ಪೂರ್ವಕ ಸೇವೆ ಸಲ್ಲಿಸಿ ಈ ಮಹಾತ್ಕಾರ್ಯದಲ್ಲಿ ಭಾಗಿಯಾಗೋಣ...

ಗವಿಮಠ

ಗವಿಮಠ

ಗವಿಮಠ

ಜ್ಞಾನದಾಸೋಹ

ಶೈಕ್ಷಣಿಕವಾಗಿ ಅತ್ಯಂತ ಹಿದುಳಿದಿರುವ ಕೊಪ್ಪಳ ಜಿಲ್ಲೆಗೆ ಜ್ಞಾನ ದಾಸೋಹ ನೀಡುವ ಉದ್ದೇಶದಿಂದ ೧೯೬೩ ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಘೆ ಆರಂಭಗೊಂಡಿತು. ಶ್ರೀ ಲಿಂ.ಜ. ಮರಿಶಾಂತವೀರ ಸ್ವಾಮಿಗಳು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿ ಕಾಲೇಜು, ಆಯುರ್ವೇದ ಮಹಾವಿದ್ಯಾಲಯ, ಶಿಕ್ಷಕ ತರಬೇತಿ ಸಂಸ್ಥೆ ಬಿ.ಎಡ್. ಕಾಲೇಜಿನವರೆಗೂ ಮಹೋನ್ನತವಾಗಿ ಬೆಳೆಯುತ್ತಾ ಸಾಗಿದೆ. ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿಯ ವ್ಯವಸ್ಥೆಗೊಳಿಸಲು ವಿದ್ಯಾರ್ಥಿನಿಲಯವನ್ನೂ ಸ್ಥಾಪಿಸಿದೆ. ಇಂದಿನ ೧೮ ನೇ ಪೀಠಾಧೀಶ್ವರರಾದ ಅಭಿನವ ಶ್ರೀ ಗವಿಸಿದ್ದೇವಿಶ್ವರ ಮಹಾ ಸ್ವಾಮಿಜಿಗಳು ವಿದ್ಯಾಪ್ರೇಮಿಗಳಿಗೆ ಹೆಚ್ಚಿನ ಸವಲತ್ತು ನೀಡುವಲ್ಲಿ ಗಮನ ಕೇಂದ್ರೀಕರಿಸಿದ್ದು, ಗಮಠವನ್ನು ವಿವಿಧ ದೃಷ್ಠಿ ಕೋನಗಳಿಂದ ಅಭಿವೃದ್ಧಿಪಡಿಸುವಲ್ಲಿಯೂ ನಿರತರಾಗಿದ್ದಾರೆ.

ಜಾತ್ರೆಯ ಸಂಭ್ರಮ

ಮಹಾ ಮಹಿಮ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ನಗರದಲ್ಲಿ ಸುಮಾರು ಹದಿನೈದು ದಿನಗಳ ಮೊದಲಿನಿಂದಲೇ ಸಿದ್ದತೆಗಳು ಆರಂಭವಾಗುತ್ತವೆ. ಗವಿಮಠ ಸೇರಿದಂತೆ ನಗರದ ಮನೆಗಳು, ಕಟ್ಟಡಗಳು, ಸುಣ್ಣ ಬಣ್ಣಗಳಿಂದ ಅಲಂಕೃತಗೊಳ್ಳುತ್ತವೆ. ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವದ ದಿನದಂದು ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಗವಿಸಿದ್ದೇಶ್ವರರಿಗೆ ಕಾಯಿ-ಕರ್ಪೂರಗಳೊಂದಿಗೆ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.

ಸಂಜೆಯ ವೇಳೆಗೆ ಜರುಗುವ ರಥೋತ್ಸವಕ್ಕೆ ನಗರದ ಸಮೀಪದ ಊರುಗಳ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್, ಲಾರಿ, ಕಾರು, ಟಂಟಂ, ಟೆಂಪೋಗಳಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುವ ದೃಶ್ಯ ಬೆಳಿಗ್ಗೆಂದಲೇ ಕಾಣಸಿಗುತ್ತದೆ. ಸಮೀಪದ ಹಳ್ಳಿಗರು ಎತ್ತಿನ ಬಂಡಿಗಳಲ್ಲಿ ಘಲ್-ಘಲ್ ಅಂತ ಜಾತ್ರೆಗೆ ಆಗಮಿಸುವ ಈ ಜಾನಪದ ದೃಶ್ಯ ನಿಜಕ್ಕೂ ಮನಸ್ಸಿಗೆ ಮುದ ನೀಡುತ್ತದೆ. ಅಂದಿನ ದಿನ ಮಾತ್ರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸದ್ದಿಗಿಂತ ಹೆಚ್ಚಾಗಿ, ಎತ್ತಿನ ಕೊರಳ ಘಂಟೆ-ಗೆಜ್ಜೆಗಳ ಘಲ್ ಘಲ್ ನಿನಾದವೇ ಹೆಚ್ಚು ಕೇಳಿಸುತ್ತದೆ.
ತಮ್ಮ ದೈನಂದಿನ ಜಂಜಾಟದಲ್ಲಿ ಹೈರಾಣಾದ ಭಕ್ತರು ಜಾತ್ರೆಯ ದಿನ ಮುಂಜಾನೆ ಬಂಡಿ ಹೂಡಿಕೊಂಡು ಸೂರ್ಯ ನೆತ್ತಿ ಮೇಲೆ ಬರುವುದರೊಳಗೆ ಜಾತ್ರೆ ಸೇರಿ, ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಕಾಯಿ, ಕರ್ಪೂರದೊಂದಿಗೆ ಭಕ್ತಿ ಸಲ್ಲಿಸಿದ ತರುವಾಯವೇ ಅವರ ಮನಸ್ಸಿಗೆ ನೆಮ್ಮದಿ.
ಆಧುನಿಕ ಕಾಲದ ಈ ಸಂದರ್ಭದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಆದರೆ ಈ ಜಾತ್ರೆಯ ಅಂಗವಾಗಿ ಕುಸ್ತಿ ಸ್ಪರ್ಧೆ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸಲಾಗುತ್ತದೆ.
ಸಂಜೆಯ ವೇಳೆಗೆ ಆರಂಭಗೊಳ್ಳುವ ರಥೋತ್ಸವದ ಸಂದರ್ಭದಲ್ಲಿ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಳ್ಳುವುದು ಶತಮಾನಗಳಿಂದ ಇಲ್ಲಿ ರೂಢಿಯಲ್ಲಿದೆ. ಈ ಜಾತ್ರೆಯ ಇನ್ನೊಂದು ವಿಶೇಷವೆಂದರೆ, ಸಾಮಾನ್ಯವಾಗಿ ಎಲ್ಲಾ ರಥೋತ್ಸವಗಳಲ್ಲಿ ಭಕ್ತರು ಬಾಳೆಹಣ್ಣು ಹಾಗೂ ಇತರೆ ಹಣ್ಣುಗಳನ್ನು ತೇರಿನತ್ತ ಎಸೆದು ಭಕ್ತಿ ಸಲ್ಲಿಸಿದರೆ, ಗವಿಸಿದ್ದೇಶ್ವರ ರಥೋತ್ಸವದಲ್ಲಿ ಮಾತ್ರ ಭಕ್ತರು ಬಾಳೆಹಣ್ಣಿನ ಜೊತೆಗೆ ಉತ್ತತ್ತಿಗಳನ್ನು ತೇರಿನತ್ತ ಎಸೆದು ಭಕ್ತಿ ಅರ್ಪಿಸುವುದು ವಾಡಿಕೆ. ರಥೋತ್ಸವದ ಬಗ್ಗೆ ಯಾವ ಹೆಚ್ಚಿನ ಪ್ರಚಾರವೂ ಇಲ್ಲದೆ ಲಕ್ಷಾಂತರ ಭಕ್ತರು, ಜಾತ್ರೆಯ ಈ ಒಂದು ಸಂದರ್ಭದಲ್ಲಿ ಒಂದೆಡೆ ಸೇರುವುದೆಂದರೆ ಸೋಜಿಗವೇ ಸರಿ.
ವರ್ಷದಿಂದ ವರ್ಷಕ್ಕೆ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಪ್ರತಿ ವರ್ಷವೂ ವೃದ್ಧಿಸುತ್ತಿದ್ದು, ಈ ಜಾತ್ರೆ ಹಿಂದೂ, ಮುಸ್ಲಿಂ, ಕ್ರೈಸ್ತರು ಮುಂತಾದ ಜಾತಿ-ಮತಗಳ ಭೇದ ಭಾವವಿಲ್ಲದೆ, ಗವಿಸಿದ್ದರ ತತ್ವದಲ್ಲಿ ಮಿಳಿತವಾಗಿ ಭಾವೈಕ್ಯತೆಯನ್ನು ಬೆಸೆಯುವ ಕೋಮು ಸಾಮರಸ್ಯದ ಪ್ರತೀಕವೂ ಇದಾಗಿದೆ.
ಗವಿಮಠ ಆವರಣದ ಬೃಹತ್ ಮೈದಾನದಲ್ಲಿ ಜಾತ್ರೆಯ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಹಲವು ಬಗೆಯ ಅಂಗಡಿ, ಮಳಿಗೆಗಳು, ಹೋಟೆಲುಗಳು ಬಿಡಾರ ಹೂಡುತ್ತವೆ. ಸೂಜಿಯಂತಹ ಸಣ್ಣ ವಸ್ತುವಿನಿಂದ ಮೊದಲುಗೊಂಡು ಒಂದು ಕುಟುಂಬದ ಅಗತ್ಯ ಸಾಮಗ್ರಿಗಳೆಲ್ಲವೂ ಈ ಜಾತ್ರೆಯಲ್ಲಿ ಲಭ್ಯ. ಹಲವು ಬಗೆಯ ಮಕ್ಕಳ ಎಲೆಕ್ಟ್ರಾನಿಕ್ ಆಟಿಕೆಗಳು, ತರುಣಿಯರ ಹೆಗಲನ್ನೇರುವ ಜಂಭದ ಚೀಲಗಳು (ವ್ಯಾನಿಟಿ ಬ್ಯಾಗ್) ಸುಶ್ರಾವ್ಯ ಹಾಗೂ ಕರ್ಕಶ ಶಬ್ದವನ್ನೂ ಹೊರಡಿಸುವ ವೈವಿಧ್ಯಮಯ ವಾದ್ಯಗಳು, ಕ್ಷಣಾರ್ದದಲ್ಲೇ ಅಗಾಧವಾದುದನ್ನು ಕಲಿಸುವ ಅಂಗಡಿಗಳು, ಬಗೆ ಬಗೆಯ ಬಣ್ಣದ ಬಳೆಗಳ ನೂರಾರು ಅಂಗಡಿಗಳು, ಅಲಂಕಾರಿಕ ವಸ್ತ್ರಾಭರಣದ ಅಂಗಡಿಗಳು, ಗೃಹಾಲಂಕಾರ ಮತ್ತು ಗೃಹೋಪಯೋಗಿ ಬಳಕೆಯ ನವ ನವೀನತೆಯ ವಸ್ತುಗಳು, ಎತ್ತಿನ ಕೊರಳಿಗೆ ಕಟ್ಟುವ ಘಂಟೆ, ಗೊರಸುಗಳೂ ಸೇರಿದಂತೆ ಬೇಸಾಯದ ವಿವಿಧ ಬಗೆಯ ಸಾಮಗ್ರಿಗಳೂ ಗವಿಮಠದ ಮೈದಾನವನ್ನು ಆವರಿಸಿರುತ್ತವೆ. ಮಕ್ಕಳು ಬಗೆ ಬಗೆಯ ಆಟಿಕೆ ಸಾಮಾನುಗಳನ್ನು ಕೊಡಿಸುವಂತೆ ತಮ್ಮ ಪಾಲಕರಿಗೆ ದುಂಬಾಲು ಬಿದ್ದು, ಪೀಡಿಸುವ ದೃಶ್ಯ ಜಾತ್ರೆಯ ಆವರಣದಲ್ಲಿ ಸರ್ವೆ ಸಾಮಾನ್ಯ. ಆಟಿಕೆ ವಸ್ತುಗಳನ್ನು ಖರೀದಿಸಿ, ಪಕ್ಕದಲ್ಲೇ ಸಿಗುವ ಗೋಬಿ ಮಂಚೂರಿ ಸವಿದು, ತಿರುಗು ರಾಟೆಯಲ್ಲಿ ತಿರುಗಿ, ಮಕ್ಕಳ ಉಗಿಬಂಡಿಯಲ್ಲಿ ಕುಳಿತು ಒಂದಷ್ಟು ಮಜಾ ಅನುಭವಿಸಿದರಷ್ಟೆ ಜಾತ್ರೆಯ ಸಂಭ್ರಮ ಅನುಭವಿಸಿದಂತೆ. ಇಲ್ಲದಿದ್ದಲ್ಲಿ ಜಾತ್ರೆ ಅಪೂರ್ಣವೆನಿಸುತ್ತದೆ.
ಈ ಜಾತ್ರೆಯಲ್ಲಿ ಎಲ್ಲಾ ಖರೀದಿ ಮುಗಿದ ನಂತರ ಮಂಡಾಳು- ಮಿರ್ಚಿ ತಿನ್ನದೇ ಇದ್ದರೆ ಜಾತ್ರೆಯೇ ಅಪೂರ್ಣ ಎಂದು ಇಲ್ಲಿಗೆ ಬರುವವರು ಭಾವಿಸುತ್ತಾರೆ. ಹೀಗೆ ನಾಲಿಗೆಗೆ ಖಾರ ಉಣಿಸುವ ಮಿರ್ಚಿ-ಮಂಡಕ್ಕಿ ತಿಂದು, ಅಲ್ಲಿಯೇ ಬಿಡಾರ ಹೂಡಿರುವ ಅಂಗಡಿಗಳಲ್ಲಿ ಗ್ಲಾಸಿನ ತುಂಬ ಕಬ್ಬಿನ ಹಾಲು ಕುಡಿದು ಹೊಟ್ಟೆ ತಣ್ಣಗಾದ ನಂತರವೇ ಜಾತ್ರೆ ಪೂರ್ಣಗೊಂಡಂತೆ.

ಸುಮಾರು ೧೫ ರಿಂದ ೨೦ ದಿನಗಳ ಕಾಲ ನಡೆಯುವ ಈ ಜಾತ್ರೆಯ ಪ್ರತಿದಿನವೂ ಒಂದು ವಿಶೇಷವೆಂಬಂತೆ ಅನುಭವವಾಗುವುದು.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಸಂಭ್ರಮ

ಪ್ರಾಚೀನ ಇತಿಹಾಸದಲ್ಲಿ ಕೊಪ್ಪಳ ಪ್ರದೇಶ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಕೊಪ್ಪಳ ನಗರ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಹೈದ್ರಾಬಾದ್-ಕರ್ನಾಟಕ ಭಾಗದ ಇತಿಹಾಸ ಪ್ರಸಿದ್ಧ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ಎಂದರೆ, ಈ ಭಾಗದ ಜನತೆಗೆ ಏನೋ ಒಂದು ಅಮಿತಾನಂದ, ಸಡಗರ, ಸಂಭ್ರಮ. ಕೊಪ್ಪಳ ನಗರದ ಬೆಟ್ಟದ ತಪ್ಪಲಿನಲ್ಲಿ ಕಂಗೊಳಿಸುವ ಸಂಸ್ಥಾನ ಶ್ರೀ ಗವಿಮಠ ಆಧ್ಯಾತ್ಮ, ಅನ್ನದಾಸೋಹ, ಜ್ಞಾನದಾಸೋಹ ಉಣಬಡಿಸುವ ಪುಣ್ಯ ಕ್ಷೇತ್ರವಾಗಿದೆ. ಪ್ರತಿ ವರ್ಷವೂ ನೂತನ ವರ್ಷಾರಂಭದ ಮೊದಲೆರಡು ಮಾಸದಲ್ಲೇ ಬರುವ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಸಡಗರವನ್ನು ಕಣ್ಣಾರೆ ಕಂಡು ಆನಂದಿಸಲು ಈ ಭಾಗದ ಸಣ್ಣ ಮಕ್ಕಳಿಂದ ಮೊದಲುಗೊಂಡು, ವಯಸ್ಕರವರೆಗೆ ಎಲ್ಲರೂ ತುದಿಗಾಲಲ್ಲಿ ನಿಲ್ಲುತ್ತಾರೆ.

ಇತಿಹಾಸ : ಚಾರಿತ್ರಿಕ ಸಂಪನ್ನತೆ ಹೊಂದಿರುವ ಕೊಪ್ಪಳ ಕುರಿತು ಕೊಪಣತೀರ್ಥ, ಆದಿತೀರ್ಥ, ಕೊಪಣಾಚಲ ಮುಂತಾದ ಹೆಸರುಗಳಿಂದ ಉಲ್ಲೇಖಿಸಿರುವುದು ಶಿಲಾಶಾಸನಗಳು ಹಾಗೂ ಸಾಹಿತ್ಯ ಗ್ರಂಥಗಳಿಂದ ತಿಳಿದುಬರುತ್ತದೆ. ಆದಿಗ್ರಂಥ ಕವಿರಾಜ ಮಾರ್ಗದಲ್ಲಿ ಮಹಾಕೊಪಣ ನಗರ ಮತ್ತು ತಿರುಳ್ಗನ್ನಡ ನಾಡು ಎಂಬ ಪ್ರಖ್ಯಾತಿ ಒಂದೆಡೆಯಾದರೆ, ಅಶೋಕ ಚಕ್ರವರ್ತಿಯ ಶಿಲಾ ಶಾಸನ ಕೊಪ್ಪಳದ ಇತಿಹಾಸ, ಧಾರ್ಮಿಕ- ಸಾಹಿತ್ಯಕ ವೈಭವ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದೆ. ಕೊಪ್ಪಳ ಜೈನ ಧರ್ಮದ ಪ್ರಮುಖ ಕೇಂದ್ರವಾಗಿ ಜೈನಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ.
ಹನ್ನೊಂದನೇ ಶತಮಾನದಲ್ಲಿ ಕಾಶೀಚರವರ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸ್ಥಾಪನೆಗೊಂಡ ಶ್ರೀ ಗವಿಮಠ, ಬರದ ನಾಡಿನಲ್ಲಿ ಅನ್ನದಾಸೋಹ ಮತ್ತು ಜ್ಞಾನ ದಾಸೋಹದ ಮೂಲಕ ಜಾತಿ ಮತ ಭೇದವಿಲ್ಲದೆ ಬಂದ ಭಕ್ತರನ್ನು ಹರಸಿದ ಪವಿತ್ರ ಸ್ಥಳವಾಗಿದೆ. ಗವಿಮಠದ ಹನ್ನೊಂದನೇ ಪೀಠಾಧಿಪತಿಗಳಾದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪರಮ ಪ್ರಸಾದ ಅಂಬಲಿಯನ್ನು ಉಣಿಸಿ ನವಾಬನ ಕುಷ್ಠರೋಗ ಗುಣಪಡಿಸಿ ಪವಾಡ ಮೆರೆದವರು ಎಂಬ ಪ್ರತೀತಿ ಇದೆ. ತಮ್ಮ ಪೂಝ್ಯ ಗುರುಗಳನ್ನು ಅಗಲಿ ಬದುಕುವ ಯಾತನೆ ಸಹಿಸಲಾರದೆ, ಗುರುಗಳಿಗಾಗಿ ಸಿದ್ದಪಡಿಸಿದ್ದ ಗದ್ದುಗೆಗೆ ತಾವೇ ಪ್ರವೇಶಿಸಿ ಸಜೀವ ಗದ್ದುಗೆಗೊಂಡರಂತೆ, ಅಂದಿನ ಆ ದಿನವನ್ನೇ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರಾ ಮಹೋತ್ಸವವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತಿದೆ.

ಜಾತ್ರಾ ಚಿತ್ರಗಳು -1




ಚಿತ್ರಗಳು




Welcome to SRI GAVISIDDEWSHARA MATH

KOPANACHALA – KOPPAL.

Koppal is an integral part of Hyderabad Karnataka. It is one of the renowned historical places of the ruins and remains of pre -historic days. Indrakeel Parvata of Mahabharata period, the inscriptions of Ashoka the great and well- built hill fort, echoes the glorious historical heritage of Koppal. It has secured the place of pride as the centre of religious harmony, tolerance and mutual respect.

SHRI GAVIMATH-THE SEAT OF TRIVIDHA DASOHA

Samsthan shri Gavimath facing to the east of Koppal is a source of divine light. Shri Gavimath has the history of one thousand years. H.H.Rudrumuni Shivacharya Mahaswamiji is the pioneer of Gavimath. The total dedication of all the seventeen peetadhipatis of Gavimath for the noble causes like spread of education and upliftment of the unfortunate of this famine stricken area, has transformed Shri Gavimath into holy haven of Thrivida Dasoha (food, Education, Spiritual Knowledge) The history of the development of this part of Karnataka becomes complete only with the mention of the contributions of Gavimath.


The Successive Peetadipaties of Sri Gavimath.

1) Poojya Shree Rudramuni Mahaswamigalu.

2) Poojya Shree Sanganbasava Mahaswamigalu.

3) Poojya Shree Shivalinga Mahaswamigalu.

4) Poojya Shree Channaveera Mahaswamigalu.

5) Poojya Shree Kashi Karibasava Mahaswamigalu.

6) Poojya Shree Shivalinga Mahaswamigalu.

7) Poojya Shree Putta Suchannaveera Mahaswamigalu.

8) Poojya Shree Channamallikarjun Mahaswamigalu.

9) Poojya Shree Sanganabasava Mahaswamigalu.

10) Poojya Shree Channabasava Mahaswamigalu.

11) Poojya Shree Gavisiddeshwara Mahaswamigalu.

12) Poojya Shree Hirishantaveera Mahaswamigalu.

13) Poojya Shree Shivashantaveera Mahaswamigalu.

14) Poojya Shree Marishantaveera Mahaswamigalu.

15) Poojya Shree Shivashantaveera Mahaswamigalu.

16) Poojya Shree Marishantaveera Mahaswamigalu.

17) Poojya Shree Shivashantaveera Mahaswamigalu.

18) Poojya Shree Gavisiddeshwara Mahaswamigalu.

THE MAIN DEITY SHRI GAVISIDDESHWAR.

The main deity Shri Gavisiddeshwar, the eleventh peetadhipati of shri Gavimath, his early name Gududayya was born in Mangalpur near Koppal. Gudadayya stayed with Shri. Jadegouda, the Revenue head of Koppal for a short period. The inborn spiritual qualities forced him to meditate in the tranquil lap of Malemalleshwara to attain the divinity. With the strong desire of shri Guru Chennabasava Shivayogi of Gavimath, Shri Gudadayya came down to Shri Gavimath where he achieved SHIVAYOGA SIDDHI (art of joining Atma with Paramatma). Thus Gudadayya became “GAVISIDDA’ with the blessings of Shri Guru Channabasava Shivayogi.

Shri Gavisiddeshwara of Gavimath did many miracles for the disciples who believed and worshipped him. For instance the then Nizam of Hyderbad who was suffering from leprosy (skin disease) approached His Holiness Shri Gavisiddeshwara and Pujya Swamiji gracefully cured Nizam with his divine powers. He was much pleased and donated 1300 acres of land to Gavimath as a taken of gratitude Of course today all these lands are not remained with math due to land Reforms Act.

Shri. Gavisiddeshwarawillingly entered the Samadhi built for his aged Guruji as he could not bear the separation from his Guruji and attained “ Nirvikalpa samadhi’ Shri Gavisiddeshwar was immorfalized by getting the honour of performing his CAR FESTIVAL (PUNYARADHANE). by his Guruji . His Holiness, Shri Gavisiddeshwara bestowed spiritual power to Shri Gavimath. It is true that Lord Shri Gavisiddeshwara is still with us in an unseen form, fulfilling aspirations of his believers. His presence has been proved in many occasions beyond doubt.

HIS HOLINESS MARISHANTVEER MAHASHIVAYOGI.

His Holiness Shri. Marishantaveeraswamiji, the 16th peetadipathi heightened Shri Gavimath to acme. He is still in the heart of the people by virtue of his profound knowledge of Sanskrit, philosophy, logic, Ayurveda and more than that his invaluable contributions to a cause of education, free food to the poor students and popularization of Ayurvedic system. He was the embodiment of kindness to the students specially the poor & the neglected. In his tours to the villages,he used to identify the needy students and bring with him such students to Shri. Gavimath for their all-round development. He started free boarding and hostel to the students irrespective of caste, creed, class, religion and sect. He established Shri.Gavisiddeshwar High School in 1951. Realizing the lack of educational facilities in this area he founded Shri Gavisiddeshwara Vidya Vardhak Trust and donated all the landed property of Shri Gavimath to the Trust to ensure unhindered growth in imparting education. Today a number of institutions are being run under this Trust. These institutions are rendering significant service to the society especially in the field of education and social service with the help of its various institutions. Undoubtedly we all are indebted to the constant endeavor of Poojya Shri Marishantaveer Mahaswamiji.

HIS HOLINESS SHRI. SHIVASHANTAVEER MAHASWAMIJI.

His Holiness Shri. Shivashantaveera Mahaswamiji, the Seventeenth Peethadipati, added the lustre to the glitter and glory of Shri.Gavimath. He not only strengthened the works of his Guruji but also extended quite appreciably the halo of Shri. Gavimath by means of solid & sacred achievements. He revived all the branches of Shri.Gavimath(shakha Mutts) spread all over the state. He opened need-based educational instituations with all infrastructures to enable them to give qualitative education. Himself a scholar in Sanskrit and Ayurveda,he successfully fulfilled his dream of establishing Ayurveda college and Hospital with the intention of providing free treatment and free supply of ayrvedic medicines to the poor. He launched the most ambitious plan of Ayurvedic Medical college at an estimated cost of Rs.8 Croses .

He worked tremendously hard around the clock for the fulfillment of his plans.

THE PRESENT PEETADIPATI

POOJYA SHRI GAVISIDDESHWARA MAHASWAMIJI.

The present swamiji His Holiness Shri. Gavisiddeshwara Mahaswamiji is a post-graduate in English, philosophy and Sanskrit. He is a scholar, orator, thinker, creative worker, educationist, reformist and above all he is an ardent follower of his Guruji. He is an exemplary for GURUBHAKTHI AND KRIYASHAKTI. He believes himself not as a Peethadipati of Shri Gavimath but as an humble servant chosen by his revered Guruji , of which he feels proud to serve to uphold the greatness of Shri. Gavimath and for promoting good of all. He is quite sincere in carrying out the aims and aspirations of his Guruji. His Holiness strived hard successfully for the completion of unfinished Ayurvedic college & Hospital building within the record period of one year and observed the first “punya Smarane” of his Guruji in the premises of the completed building of Ayurvedic college quite meaningfully and magnificently.

His Holiness Shri Gavisiddeshwar Mahaswamiji after his every visit to the villages of Gavimath followers in the district returned with heavy heart deeply moved by the pathetic condition of the poor in providing education to their children due to poverty. He took upon himself the task of performing “SIKSHANA YAGNA’ which he regards the right form of worship to his Guruji as well as fulfilling the need of the present situation.

Food for life, education for living, health for strength, and spiritualism for self realization are the mottos of Shri Gavisiddeshwara Mahaswamiji His vision and mission is to bring out students of character for the promotion of peace and prosperity of the nation and the universe as a whole.

Realizing the most urgent need of the hour to dismal and distressing plight of education of this area, His Holiness Mahawamiji immediately founded need-based educational institutions like D.Ed centre, B.Ed College and B.B.M College and also pioneered to start a Residential school with CBSE syllabus.