ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಜನವರಿ 28, 2013

ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ




  ದಿನಾಂಕ ೨೯-೦೧-೨೦೧೩ ಹಾಗೂ ೩೦-೦೧-೨೦೧೩ ರಂದು ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಈ ಕೆಳಕಂಡಂತೆ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಜಾತ್ರೆಗೆ ಬರುವ ಸಾರ್ವಜನಿಕರು ಸಹಕರಿಸಲು ಕೋರಿದೆ. ಲಾರಿ / ಟ್ರಕ್ / ಪಾರ್ಕಿಂಗ್, ಸಾರ್ವಜನಿಕ ಮೈದಾನ, ಟ್ರ್ಯಾಕ್ಟರ್ ಪಾರ್ಕಿಂಗ್ ಎ.ಪಿ.ಎಂ.ಸಿ, ಕಾರ್/ಜೀಪ್/ಟಂಟಂ ಪಾರ್ಕಿಂಗ್ ಗವಿಸಿದ್ದೇಶ್ವರ ಕಾಲೇಜ್ ಮೈದಾನ [ಎ.ಪಿ.ಎಂ.ಸಿ ಮತ್ತು ಪಾದಗಟ್ಟಿ ನಡುವಿನ ಸ್ಥಳ], ಎಲ್ಲಾ ದ್ವಿ-ಚಕ್ರ ವಾಹನಗಳ ಪಾರ್ಕಿಂಗ್ ಗವಿಸಿದ್ದೇಶ್ವರ ಬಿ.ಸಿ.ಎ ಕಾಲೇಜ್ [ಬಸವೇಶ್ವರ ವೃತ್ತದಿಂದ ಗವಿಮಠಕ್ಕೆ ಹೋಗುವ ರಸ್ತೆ ಎಡಕ್ಕೆ], ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್ ಗವಿಸಿದ್ದೇಶ್ವರ ಡಿಗ್ರಿ ಕಾಲೆಜ್ ಕ್ಯಾಂಪಸ್, ಹಾಲವರ್ತಿ ಹಾಗೂ ಗಡಿಯಾರ ಕಂಬದಿಂದ ಬರುವ ಎಲ್ಲಾ ವಾಹನಗಳು ಹಾಲವರ್ತಿ ರಸ್ತೆಯ ಎಡ ಮತ್ತು ಬಲಕ್ಕೆ, ಕೆ.ಎಸ್.ಆರ್.ಟಿ.ಸಿ ಬಸ್‌ಗಳು  ಗವಿಸಿದ್ದೇಶ್ವರ ವೇ ಬ್ರಿಡ್ಜ್. ಈ ಮೇಲ್ಕಂಡ ಸಂಚಾರಿ ವ್ಯವಸ್ಥೆಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.

   ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಸವೇಶ್ವರ ವೃತ್ತ, ಗವಿಸಿದ್ದೇಶ್ವರ ಕಾಲೇಜ್ ಪಾರ್ಕಿಂಗ್ ಸ್ಥಳ, ಹಾಲವರ್ತಿ ಕ್ರಾಸ್, ಗವಿಮಠದ ಮಹಾದ್ವಾರ, ಗರ್ಭಗುಡಿ, ಸಭೆ ನಡೆಯುವ ಸ್ಥಳ, ಊಟದ ಸ್ಥಳ, ಗಡಿಯಾರ ಕಂಬ.

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯಗಳು,



ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇದೂವರೆಗೆ  ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ  ರೊಟ್ಟಿ , ಹೀರೆಕಾಸನಕಂಡಿ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು, ಹುಣಸಿಹಾಳ ಗ್ರಾಮದ ಸದ್ಭಕ್ತರಿಂದ ರೊಟ್ಟಿಗಳು, ಭಾನಾಪುರ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಹನುಮನಟ್ಟಿ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಸಿಹಿಬೂಂದಿ, ಗೋಸಲದೊಡ್ಡಿ ಗ್ರಾಮದ ಸದ್ಧಕ್ತರಿಂದ ದವಸ ಧಾನ್ಯಗಳು, ಹೊಸಳ್ಳಿ ಗ್ರಾಮದ ಸದ್ಧಕ್ತರಿಂದ ದವಸಧಾನ್ಯಗಳು,  ಟಣಕಣಕಲ್ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು ಹಾಗೂ ರೊಟ್ಟಿ , ದದೇಗಲ್,ಆಗೋಲಿ,ಚೆನ್ನಾಳ, ವಜ್ರಬಂಡಿ ಹಾಗೂ ಇಂದರಗಿ ಗ್ರಾಮದಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು, ನರೇಗಲ್ ಗ್ರಾಮದ ಸದ್ಭಕ್ತರಿಂದ ದವಸ ಧಾನ್ಯಗಳು ಹಾಗೂ ರೊಟ್ಟಿ, ಶ್ರೀಮಠದ ಮಹಾದಾಸೋಹಕ್ಕೆ ಹರಿದು ಬಂದಿವೆ. ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಸಾಗರೋಪಾಧಿಯಾಗಿ ರೊಟ್ಟಿ ಹಾಗೂ ದವಸ ಧಾನ್ಯಗಳು ಹರಿದು ಬರಲಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

ರೊಟ್ಟಿಗಳ ಸಪ್ಪಳ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ವಿಶೇಷತೆ ಎಂದರೆ ಮಹಾದಾಸೋಹ.          ದಿನಾಂಕ ೨೯-೦೧-೨೦೧೩  ರ ರಥೋತ್ಸವದ ದಿನದಿಂದ ಅಮವಾಸ್ಯೆಯ ತನಕ ನಿರಂತರವಾಗಿ ನಡೆಯಲಿರುವ ಮಹಾದಾಸೋಹ್ಕಾಗಿ ಜಿಲ್ಲೆಯದ್ಯಾಂತ ಭಕ್ತ ಜನರು  ತಮ್ಮ ಮನೆಮನೆಗಳಲ್ಲಿ ಹಾಗೂ 
ಹಳ್ಳಿಗಳಲ್ಲಿ ರೊಟ್ಟಿಗಳನ್ನು ಮಾಡಿಕೊಂಡು  ಶ್ರೀಮಠಕ್ಕ ಅರ್ಪಿಸುವ ತವಕದಲ್ಲಿದ್ದಾರೆ. ಈಗಾಗಲೇ ಭಾರೀ ಸಂಖ್ಯೆಯಷ್ಟು ರೊಟ್ಟಿ ಸಂಗ್ರಹವಾಗಿವೆ. ಇನ್ನೆರಡ್ಮೂರು ದಿನಗಳಲ್ಲಿ ರೊಟ್ಟಿಗಳೆಲ್ಲ ಮೆರವಣಿಗೆಯ ಸಪ್ಪಳದೊಂದಿಗೆ ಶ್ರೀಗವಿಮಠಕ್ಕೆ ಸಮರ್ಪಣೆಯಾಗಲಿವೆ. 

ಎತ್ತಿನ ಬಂಡಿಗಳ ಅಬ್ಬರ

ಕೊಪ್ಪಳ ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ದಿನದಿಂದ ದಿನಕ್ಕೆ  ಭಕ್ತರ ಆಗಮನದಿಂದ ರಂಗು ಪಡೆದುಕೊಳ್ಳುತ್ತಿದೆ. ಪ್ರತಿ ದಿನ  ಮಹಾದಾಸೋಹಕ್ಕಾಗಿ ವಿವಿಧ ಗ್ರಾಮಗಳ ಭಕ್ತರು ಎತ್ತಿನ ಬಂಡಿಯಲ್ಲಿ ದವಸಧಾನ್ಯಗಳ  ಮಹಾಪುರವನ್ನೇ ತರುತ್ತಿದ್ದಾರೆ. ಬಂಡಿಯೊಳಗೆ ದವಸಧಾನ್ಯಗಳನ್ನು ತುಂಬಿಕೊಂಡು ರೊಟ್ಟಿ ತರಕಾರಿಗಳ ಸಮೇತ ಎತ್ತುಗಳಿಗೆ ಅಲಂಕಾರವನ್ನು ಮಾಡಿಕೊಂಡು  ಗೆಜ್ಜೆಯನ್ನು ಕಟ್ಟಿ ಶೃಂಗರಿಸಿಕೊಂಡು ಉತ್ಸಾಹದಿಂದ ಅಜ್ಜನ ಜಾತ್ರೆಯ ದಾಸೋಹಕ್ಕೆ ದಾನವನ್ನು ಕೊಡುತ್ತಿರುವದು ಶ್ರೀಮಠದ ಮೇಲಿನ ಭಕ್ತಿಯನ್ನು ತೋರಿಸುತ್ತಿದೆ. ಆಧುನಿಕತೆಯ ಭರಾಟೆಯಲ್ಲಿಯೂ ಟ್ರ್ಯಾಕ್ಟರ, ಟಾಂಟಾಂನ್ನುಕೈಬಿಟ್ಟು ನೂರಾರು ಎತ್ತಿನ ಬಂಡಿಗಳಲ್ಲಿ ಬರುತ್ತಿರುವದು ಜಾತ್ರೆಯ ವೈಶಿಷ್ಟ್ಯತೆಗೆ ಕಾರಣವಾಗಿದೆ.  


ಶ್ರೀಗವಿಮಠಕ್ಕೆ ಮುಕುಟವಾದ ಕಲ್ಲಿನ ಮಂಟಪ


http://kannadanet.blogspot.in/2013/01/blog-post_24.html








 ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಹತ್ತಿರಕ್ಕೆ ಬರುತ್ತಿರಲು ಶ್ರೀಗವಿಮಠವು ಅತ್ಯಾಕರ್ಷಕವಾಗಿ ಕಂಗೊಳಿಸುತ್ತಲಿದೆ. ಶ್ರೀಗವಿಸಿದ್ಧೇಶ್ವರರ ಕರ್ತೃ ಗದ್ದುಗೆಯ ಸುತ್ತಲೂ ತಲೆಯೆತ್ತಿ ನಿಂತಿರುವ ಕಲ್ಲಿನ ಮಂಟಪವು ವಿನೂತನವಾಗಿ ಮತ್ತು ಆಕರ್ಷಕವಾದ ಶಿಲ್ಪ ಕೆತ್ತನೆಗಳಿಂದ ನೋಡುಗರ ಕಣ್ಮನಗಳನ್ನು ಸೆಳೆಯುತ್ತಲಿದೆ. ಅದರಲ್ಲಿಯಂತೂ ಶ್ರೀಗವಿಮಠದ ರಸ್ತೆಗೆ ಉತ್ತರಾಭಿಮುಖವಾಗಿ ಎತ್ತರದಲ್ಲಿ ಕಾಣುವ  ಕಲ್ಲಿನ ಮಂಟಪವಂತೂ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ.  ಈ ಕಲ್ಲಿನ ಮಂಟಪಗಳು ನವಿರಾದ, ಮನೋಜ್ಞವಾದ ಕೆತ್ತನೆಗಳಿಂದ ಕೂಡಿದ್ದೂ ಪ್ರಮುಖ ಅಕರ್ಷಣೆಯ ಕೇಂದ್ರವಾಗಿದೆ.  ಈ ಕೆತ್ತನೆಯ ಕಾರ್ಯವನ್ನು ಆಂದ್ರಮೂಲದ ಕರ್ನೂಲ್ ಜಿಲ್ಲೆಯ ಆಧೋನಿ ತಾಲೂಕಿನ ನದಿಚ್ಯಾಗಿ ಗ್ರಾಮದ ಶ್ರೀಮರಿಯಪ್ಪ ಅಂಬಿಗರ  ಎಂಬ ಕಲಾವಿದ ಹತ್ತು ಜನ ತನ್ನ ಸಹ ಕಲಾವಿದರೊಂದಿಗೆ ಸೇರಿಕೊಂಡು ತಿಂಗಳುಗಟ್ಟಲೇ ಈ ಕಾರ್ಯವನ್ನು ಮಾಡಿದ್ದಾರೆ. ಈ ಸುಂದರ ಶೈಲಿಯ ಕೆತ್ತನೆಯ ಸ್ತಂಭಗಳು ಹಾಗೂ  ಅವುಗಳ ಮೇಲಿನ ಮಂಟಪಗಳ ರಚನೆಯ ಸಂಕಲ್ಪವು ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳದ್ದಾಗಿದೆ. ಅವರೇ ನನಗೆ ಈ ಯೋಜನೆಯ ಸ್ಕೆಚ್ ಹಾಕಿಕೊಟ್ಟು ನನ್ನ ಕಾರ್ಯಕ್ಕೆ ಪ್ರೇರೇಪಣೆ ನೀಡಿದರೆಂದು ಕಲಾವಿದ ಮರಿಯಪ್ಪ ಹೇಳುತ್ತಾನೆ. ಪೂಜ್ಯರ ಈ ಸಂಕಲ್ಪ ಶಕ್ತಿಯಿಂದಾಗಿ ಶ್ರೀಗವಿಮಠವು ಕಂಗೊಳಿಸಲು ಕಾರಣವಾಗಿದೆ. 


೧) ಉಡಿತುಂಬುವ ಕಾರ್ಯಕ್ರಮಕ್ಕೆ ಉಚಿತ ವಾಹನ ಸೌಲಭ್ಯ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ  ಅಂಗವಾಗಿ ಶ್ರೀಮಠದಲ್ಲಿ ನಾಳೆ ಉಡಿ ತುಂಬುವ ಕಾರ್ಯಕ್ರುಮ ಹಾಗೂ ಬಸವಪಟ  ಕಾರ್ಯಕ್ರಮಗಳು ಸಂಜೆ ೫ ಗಂಟೆಗೆ  ಜರುಗುವದು.  ಶ್ರೀಗವಿಮಠದ ಕೈಲಾಸ ಮಂಟಪದಲ್ಲಿರುವ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವದರ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಗಲಿದೆ. ಈ ಉಡಿತುಂಬುವ ಕಾರ್ಯಕ್ರಮಕ್ಕೆ ಶ್ರೀಮಠಕ್ಕೆ ಆಗಮಿಸುವ ಸ್ಥಳೀಯ  ಮಹಿಳೆಯರಿಗಾಗಿ ಸಾಯಂಕಾಲ ೫ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ನಗರದ ಎಲ್ಲ ಭಾಗಗಳಿಂದಲೂ ವಿಶೇಷವಾಗಿ ಉಚಿತ ವಾಹನ ಸೌಲಭ್ಯವನ್ನು ಮಾಡಲಾಗಿದೆ.  ವಾಹನಗಳ ಮಾರ್ಗ ಇಂತಿದೆ.

ಮಾರ್ಗ೧: (ವಾಹನ ನಂ ೧): ಶ್ರೀಗವಿಶ್ರೀನಗರ, ಗಂಜ್ ಕ್ರಾಸ್, ಬಿ.ಟಿ.ಪಾಟೀಲನಗರ,ಹಳೇಡಿ.ಸಿ ಆಫೀಸ್,ಅಶೋಕ ಸರ್ಕಲ್,ಬಸ್ ನಿಲ್ದಾಣ, ಅಮೀನಪುರ, ಬನ್ನಿಕಟ್ಟಿ, ಬಸವ ನಗರ,ಸದಾಶಿವ ನಗರದ ಮುಖ್ಯರಸ್ತೆಗಳಿಂದ ಶ್ರೀಗವಿಮಠ ಹೊರಡುವದು.

ಮಾರ್ಗ೨:  (ವಾಹನ ಸಂಖ್ಯೆ ೨): ಶಾರದಾಟಕೀಸ್, ಅಂಬೇಡ್ಕರ್ ಸರ್ಕಲ್,ಕೆ.ಸಿ.ಸರ್ಕಲ್,ಹೈದರಲಿ ಸರ್ಕಲ್,ಹಳೇ ಡಿ.ಸಿ.ಆಫೀಸ್, ಪೋಲೀಸ್ ಕಾಲನಿ,ಲಕ್ಷೀಟಾಕೀಸ್,ಪ್ರಶಾಂತ ಕಾಲನಿ,ಬಿ.ಟಿ.ಪಾಟೀಲ ನಗರ,ಕುಷ್ಟಗಿಗೇಟ್,ಗಂಜ್ ಕ್ರಾಸ್ ನಮೂಲಕ ಮುಕ್ಯರಸ್ತೆಗಳ ಮೂಲಕ ಶ್ರೀಗವಿಮಠಕ್ಕೆ ಹೊರಡುವದು.

ಮಾರ್ಗ ೩: (ವಾಹನ ಸಂಖ್ಯೆ ೩): ಗಡಿಯಾರ ಕಂಬ,ಜವಾಹರ ರಸ್ತೆ,ಆಜಾದ್ ಸರ್ಕಲ್,ದುರ್ಗಮ್ಮಕಟ್ಟಿ,ಅಶೋಕ ಸರ್ಕಲ್,ವಿಜಯನಗರ ಕಾಲನಿ, ಭಾಗ್ಯನಗರ ಕ್ರಾಸ.

ಮಾರ್ಗ ೪:  (ವಾಹನ ಸಂಖ್ಯೆ ೪): ಗಡಿಯಾರ ಕಂಬ,ಬಳ್ಳೊಳ್ಳಿ ಮಿಲ್,ಗೋಶಾಲಾ,ಸಿರಸಪ್ಪಯ್ಯನ ಮಠ, ಬಹದ್ದೂರ ಬಂಡಿ ಕ್ರಾಸ್,

 ಹೀಗೆ ೪ ವಾಹನಗಳು  ಈ ಮೇಲೆ ಸೂಚಿಸಿದ ಮಾರ್ಗವಾಗಿ ಅಂದು ಸತತವಾಗಿ ಸಂಜೆ ೫ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ಸಂಚರಿಸಲಿವೆ. ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾಗೆಯೇ ಇದರ ಹೆಚ್ಚಿನ  ಮಾಹಿತಿಗಾಗಿ ಡಾ.ಬಸವರಾಜ ಪೂಜಾರ ಅವರ ಮೊಬೈಲ್ ಸಂಖ್ಯೆ ೯೪೪೮೨೬೨೮೬೩  ಸಂಪರ್ಕಿಸಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ. 



 ೨) ದಾಸೋಹದಲ್ಲಿ ಇಂದು ಸಮರ್ಪಣೆ

 ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯಲಿರುವ ಮಹಾದಾಸೋಹಕ್ಕಾಗಿ ಇಂದು ಹೊಸೂರ,ಹೊಸಳ್ಳಿ,ಕೂಕನಪಳ್ಳಿ,ಕೆಂಪಳ್ಳಿ,ಮ್ಯಾದ್ನೇರಿ,ಬಿಸರಳ್ಳಿ, ಮೆತಗಲ್,ಯಡ್ಡೋಣಿ,ತಾಳಕನಕಾಪುರ, ಹಂಚಿನಾಳ ಗ್ರಾಮಗಳಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು ಶ್ರೀಗವಿಮಠಕ್ಕೆ ಅರ್ಪಣೆಯಾದವು. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ.

ಶುಕ್ರವಾರ, ಜನವರಿ 18, 2013

ದಾಸೋಹ ಅಂಗಳಕ್ಕೆ ಕೊಂಡೊಯ್ಯುವ ಕಟ್ಟಿಗೆಗಳು


http://kannadanet.blogspot.in/2013/01/blog-post_7665.html
ದಾಸೋಹ ಅಂಗಳಕ್ಕೆ ಕೊಂಡೊಯ್ಯುವ ಕಟ್ಟಿಗೆಗಳು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಸಮೀಪಿಸುತ್ತಿದ್ದಂತೆ ಶ್ರೀಮಠದಲ್ಲಿನ ಚಟುವಟಿಕೆಗಳು  ಆರಂಭಗೊಂಡಿ. ಈಗಾಗಲೇ ಶ್ರೀಮಠದ ಆವರಣ ಶೃಂಗಾರಗೊಳ್ಳುತ್ತಲಿದ್ದೂ ಬೃಹತ್ ದಾಸೋಹ ಮಂಟಪವು ಹಾಗೂ ಧಾರ್ಮಿಕ ಚಿಂತನ ಮಂತನಗಳು ನಡೆಯುವ ಕೈಲಾಸ ಮಂಟಪವು ಸಿದ್ಧವಾಗಿ ಪರಿಪೂರ್ಣವಾಗುವ ಹಂತದಲ್ಲಿದೆ. ಇಂದು ಶ್ರೀಗವಿಮಠದ ಮಹಾದಾಸೋಹದ ಪ್ರಸಾದ ತಯಾರಿಕೆಗಾಗಿ ಬಳಕೆಯಾಗುವ ದೊಡ್ಡ ದೊಡ್ಡ ಕೊರೆದ ಕಟ್ಟಿಗೆಗಳ ತುಂಡುಗಳನ್ನು ಶ್ರೀಮಠದ ವಿದ್ಯಾರ್ಥಿಗಳು ಬೃಹತ್ ದಾಸೋಹಮಂಟಪಗೊಳಗೆ ಕೊಂಡೊಯ್ಯುವ ಕಾರ್ಯ ವೇಗವಾಗಿ ಜರುಗಿತು. ಪೂಜ್ಯ ಶ್ರೀಗಳಾದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸ್ವತ: ಕೆಲಸದಲ್ಲಿ ತೊಡಗಿಸಿಕೊಂಡು ಮುತುವರ್ಜಿ ವಹಿಸಿ ಕಾರ್ಯ ಮಾಡುವದು ಶ್ರೀಮಠದಲ್ಲಿ ಕಂಡುಬಂದಿತು.

ಅಜ್ಜನ ಜಾತ್ರೆಗೆ ಬನ್ನಿ 2013

ಅಜ್ಜನ ಜಾತ್ರೆಗೆ ಬನ್ನಿ 2013





ಅಜ್ಜನ ಜಾತ್ರೆಗೆ ಬನ್ನಿ 2013