ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಶನಿವಾರ, ಜನವರಿ 29, 2011

ಶ್ರೀ ಗವಿಮಠದ ಜಾತ್ರಾ ವಿಶೇಷತೆಯೆಂದರೆ ಮಹಾದಾಸೋಹ



ಕೊಪ್ಪಳ: ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ವಿಶೇಷತೆಯೆಂದರೆ ಮಹಾದಾಸೋಹ. ಜಿಲ್ಲೆಯಾದ್ಯಾಂತ ಕೊಡುಗೈ ದಾನಿಗಳಿಂದ ದವಸ, ಧಾನ್ಯ, ರೊಟ್ಟಿ, ಭತ್ತ ಮೊದಲಾದವುಗಳು ಮಹಾಪುರದಂತೆ ಹರಿದು ಬಂದು ದಾಸೋಹಕ್ಕೆ ಸಮರ್ಪಿತವಾದದ್ದು ಒಂದು ಐತಿಹಾಸಿಕತೆ. ಪ್ರತಿದಿನವು ಹಲವಾರು ಓಣಿಗಳ, ಸಂಘ ಸಂಸ್ಥೆಗಳಿಂದ ಸಿಹಿ ತಿನಿಸುಗಳು ಹರಿದು ಬರುತ್ತಿವೆ. ಇಂದು ಪಂಡರಪೋಳಿ ಕ"ಟಿಂದ ೫೦ ಕೆ.ಜಿ ಪುಳಿಯೋಗರೆ, ಸಿದ್ದು ಅಂಗಡಿಯವರಿಂದ ೨೫ ಕೆ.ಜಿ ಕೇಸರಿಬಾತ್, ಮಹಾಬಳೇಶ್ವರ ಗವಿಯಪ್ಪ ಮಟ್ಟಿ ಕುಟುಂಬದಿಂದ ೨೫೧೧ ಶೆಂಗಾ ಹೋಳಿಗೆ ದಾಸೋಹಕ್ಕೆ ಸಮರ್ಪಿತವಾಗಿವೆ. ಇವುಗಳನ್ನು ಆ ಓಣಿಯ ಗಿರೀಜಾ ಮೆಳ್ಳಿಕೇರಿ, ಸುಮಂಗಲಾ ಮಟ್ಟಿ, ಸೂಗಮ್ಮ ಬೆಳವಣಿಕಿ, ಸುಜಾತಾ ಬೆಟಗೇರಿ, ವಿಮಲಾ ಗಾಲಾ, ಪಾರಕ್ಕ ಕಡ್ಲಿ, ಸುಧಾ ಮಟ್ಟಿ, ಶಾಂತಾ ಸ್ವಾಮಿ ಮೊದಲಾದವರು ಒಂದೇ ದಿನದಲ್ಲಿ ೨೫೧೧ ಶೆಂಗ ಹೋಳಿಗೆಗಳನ್ನು ತಯಾರಿಸಿದ್ದು ಶ್ಲ್ಯಾಘನೀಯವಾಗಿದೆ. ಇವರೆಲ್ಲರಿಗೂ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
ತೋಟದ ಭಾವಿ ಓಣಿಯವರಿಂದ ೧೮೦೦೦ ಬದಾಮ ಪುರಿ ಸಮರ್ಪಣೆ. ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ವಿಶೇಷತೆಯೆಂದರೆ ಮಹಾದಾಸೋಹ ದಿನಾಂಕ ೨೮.೦೧.೨೦೧೧ ರಂದು ತೋಟದ ಭಾವಿ ಓಣಿಯವರಿಂದ ೧೮೦೦೦ ಬದಾಮ ಪುರಿಯನ್ನು ಮೆರವಣಿಗೆಯ ಮೂಲಕ ತಂದು ಶ್ರೀಮಠದ ದಾಸೋಹಕ್ಕೆ ಸಮರ್ಪಿಸಿದರು. ಓಣಿಯ ಪ್ರಮುಖರು ಉಪಸ್ಥಿತರಿದ್ದರು.

ಮಂಗಳವಾರ, ಜನವರಿ 25, 2011

ಮಹಾ ದಾಸೋಹದಲ್ಲಿ ಸಿರಾ-ಕಡಕ್‌ರೊಟಿ - ಬದನೆಪಲ್ಯ- ಅನ್ನ- ಸಾಂಬರ್-ಮೊಸರು.

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮತ್ತೊಂದು ವೈಶಿಷ್ಟ್ಯ ಎಂದರೆ ಮಹಾದಾಸೋಹ. ದಿನಕ್ಕೆ ಲಕ್ಷಾಂತರ ಭಕ್ತರು ಅಜ್ಜನ ಅನ್ನರೂಪದ ಪ್ರಸಾದದ ರುಚಿಯನ್ನು ಸವಿದು ಧನ್ಯತಾ ಭಾವವನ್ನು ಮೆರೆಯುತ್ತಾರೆ. ಹಾಗೆಯೇ ಕೆರೆಯ ನೀರನ್ನು ಕೆರೆಗೆ ಚಲ್ಲು ಎನ್ನುವಂತೆ ಭಕ್ತರಿಂದ ಬಂದಂತಹ ದವಸ ಧಾನ್ಯಗಳನ್ನು ಅದೇ ಭಕ್ತರ ಮಹಾಪ್ರಸಾದಕ್ಕೆ ವಿನಿಯೋಗಿಸಿ ಹಸಿದವರ ಅಂಗಳಕ್ಕೆ ಕೃಪೆ ಮಾಡುತ್ತಿರುವ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಈ ಮಹತ್ ಕಾಯವನ್ನು ಭಕ್ತರು ಮುಕ್ತ ಕಂಠದಿಂದ ಪ್ರಶಂಸೆ ಮಾಡುತ್ತಿರುವದು ಮಹಾದಾಸೋಹದಲ್ಲಿ ಕಂಡುಬರುತ್ತಿತ್ತು. ಇಂದಿನ ಮಹಾ ದಾಸೋಹದಲ್ಲಿ ಸಿರಾ, ಕಡಕ್ ರೊಟ್ಟಿ, ಬದನೆಪಲ್ಯ, ಜುಣಕಾ, ಅನ್ನ, ಸಾಂಬರ್, ಮೊಸರು ಸದ್ಭಕ್ತರ ಹಸಿವನ್ನು ನೀಗಿಸಿತು.


ಶ್ರೀ ಮಠದ ಮಹಾ- ದಾಸೋಹದಲ್ಲಿ ಸೇವೆಗೈದವರು..

ಇಂದಿನ ದಾಸೋಹದಲ್ಲಿ ಬೆಳಿಗ್ಗೆ ನೀರಲಗಿ, ವದಗನಾಳ್ ಗ್ರಾಮದ ಸದ್ಭಕ್ತರು ಹಾಗೂ ಶ್ರೀ ಎಸ್. ವಿ. ಕೆ ಬಿ.ಬಿ.ಎಂ & ಬಿ.ಸಿ.ಎ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಗಡದ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಪ್ರಸಾದವನ್ನು ಭಕ್ತಾಧಿಗಳಿಗೆ ಬಡಿಸಿದರು. ಸಾಯಂಕಾಲ ಶ್ರೀ ಗವಿಸಿದ್ಧೇಶ್ವರ ಆಯುರ್ವೆದಿಕ್ ವಿದ್ಯಾರ್ಥಿಗಳು ಹಾಗೂ ಬಾಲ ವಿನಾಯಕ ಮಿತ್ರಮಂಡಳಿ ಕೊಪ್ಪಳ ಇವರು ಪ್ರಸಾದವನ್ನು ಬಡಿಸಿದರು. ಹಾಗೇಯೆ ಇಂದು ಮಹಾದಾಸೋಹದಲ್ಲಿ ಹಳ್ಳಿಗುಡಿ, ಜಂತ್ಲಿ-ಶಿರೂರು, ಮಂಗಳೂರು ಗ್ರಾಮಗಳ ಸದ್ಭಕ್ತರು ಪ್ರಸಾದ ರೂಪದ ಅಡುಗೆ ತಯಾರಿಸಿ ತಮ್ಮ ತಮ್ಮ ಸೇವೆಯನ್ನು ಸಲ್ಲಿಸಿದರು. ಅದರಂತೆ ಕೊಪ್ಪಳದ ಅಕ್ಕಮಹಾದೇವಿ ಮಹಿಳಾಮಂಡಳದ ಕೋಮಲಕ್ಕ ಕುದರಿಮೋತಿ ಹಾಗೂ ಸಂಗಡಿಗರು, ಇನ್ನರ್ ವಿಲ್ ಪದಾಧಿಕಾರಿಗಳು ಹಾಗೂ ದಾಸೋಹದ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿರುವ ಹಂಪಮ್ಮ ಮೈನಳ್ಳಿ ಹಾಗೂ ಸಂಗಡಿಗರು ದಾಸೋಹದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯದಲ್ಲಿ ತೊಡಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರೆಲ್ಲರಿಗೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.


ಸಿಹಿ ಕರಿಗಡುಬು ದಾಸೋಹಕ್ಕೆ ಸಮರ್ಪಣೆ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಮಹಾದಾಸೋಹದಲ್ಲಿ ಜಿಲ್ಲೆಂದ ವಿವಿಧ ಭಕ್ತರು ತಮ್ಮ ತನು-ಮನ-ಧನ ಸಹಾಯವನ್ನು ನೀಡುತ್ತಿದ್ದಾರೆ. ಇಂದು ಭಾಗ್ಯನಗರ ಗ್ರಾಮದ ಮಾಜಿ ಗ್ರಾ.ಪಂ.ಸದಸ್ಯರಾದ ಭೋಗಪ್ಪ ಡಾಣಿ ಕುಟುಂಬ ವರ್ಗ ಹಾಗೂ ಅವರ ಕಾರ್ಮಿಕ ಮಂಡಳಿಯವರು ಸೇರಿಕೊಂಡು ಅಜ್ಜನ ಈ ಮಹಾದಾಸೋಹಕ್ಕೆ ೫೦ ಕೆ.ಜಿ ಸಿಹಿ ಕರಿಕಡುಬನ್ನು ದಾಸೋಹಕ್ಕೆ ಸಮರ್ಪಿಸಿದರು, ಇವರೊಂದಿಗೆ ಪ್ರಭಣ್ಣ ಡೊಳ್ಳಿನ, ಆನಂದಪ್ಪ ಅಳವಂಡಿ, ಬಸಣ್ಣ ಸಮಗಂಡಿ, ನಾಗರಾಜ ಡಾಣಿ, ಬಸವರಾಜ ಡಾಣಿ, ವೆಂಕಟೇಶ ಕಬ್ಬೇರ, ಗುಂಡೇಶ ಪಿ. ಸಿದ್ದಪ್ಪ ಡಾಣಿ, ಶಿವ ಕೋಣಂಗಿ, ಲಕ್ಷವ್ವ ಬೋಗಪ್ಪ ಡಾಣಿ, ಪಾರ್ವತಮ್ಮ ಹೊಟ್ಟಿ, ಶಾಂತವ್ವ ಸಮಗಂಡಿ ಉಪಸ್ಥಿರಿದ್ದರು. ಸದ್ಭಕ್ತರಿಗೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.


ಬಾಯಲ್ಲಿ ನೀರೂರಿಸುವ ಗೋಭಿಮಂಚುರಿ,ಊಟಿ ಮಿರ್ಚಿ, ಡೆಲ್ಲಿ ಹಪ್ಪಳ, ಪಾವ್‌ಬಜಿ,

ಕೊಪ್ಪಳ: ಬಾಯಲ್ಲಿ ನೀರೂರಿಸುವ ಗೋಭಿಮಂಚುರಿ, ಊಟಿ ಮಿರ್ಚಿ, ಡೆಲ್ಲಿ ಹಪ್ಪಳ, ಪಾವ್‌ಬಜಿ, ನೋಡಲ್ಸ, ಮೈಸೂರ ಸ್ಪೆಷಲ್ ಗೋಭಿ ಮಂಚುರಿ, ಇವುಗಳು ಜಾತ್ರೆಯಲ್ಲಿ ತಿರುಗಾಡುವ ಭಕ್ತರ ಪ್ರಿಯ ವಸ್ತುಗಳು. ಹೌದು ಇವು ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ದೊರಕುವ ವಿಶಿಷ್ಟ ಆಕರ್ಷಣೆಯ ತಿನಿಸುಗಳು. ಚಿಕ್ಕವರಿಂದ ಹಿಡಿದು ದೊಡ್ಡವರು ಸಹ ಇತ್ತ ಕಡೆ ಹಾಯುವಾಗ ಒಂದು ಕೈ ನೋಡಿಯೇ ಬಿಡಬೇಕು ಎಂದೆನಿಸಿ ಆಯಾ ಅಂಗಡಿಗಳ ಮುಂದೆ ನಿಂತುಕೊಂಡು ಬಾಯಿ ಚಪ್ಪರಿಸುತ್ತಾ ಆನಂದಿಸಿ ನಂತರ ಕಬ್ಬಿನ ಹಾಲನ್ನು ಸೇವಿಸಿ ಜಾತ್ರೆಯ ಸವಿಯನ್ನು ಅನುಭವಿಸುವದು ಜಾತ್ರಾ ಅವರಣದಲ್ಲಿ ಕಂಡು ಬರುವ ವಿಶೇಷವಾದ ಆಕರ್ಷಣೆಗಳಲ್ಲೊಂದಾಗಿತ್ತು.

ಸೋಮವಾರ, ಜನವರಿ 24, 2011

ಜಾತ್ರೆಯಲ್ಲಿ ಪಲ್ಸ ಪೋಲಿಯೋ



ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯಲ್ಲಿ ನಿನ್ನೆ ಚಾಲನೆಗೊಂಡ ಪಲ್ಸ ಪೋಲಿಯೋ ಹಾಕುವ ಕಾರ್ಯ ತುರುಸಾಗಿ ನಡೆಯುತ್ತಲಿದೆ. ಜಾತ್ರಾ ನಿಮಿತ್ಯ ಸೋಮವಾರ ಶ್ರೀ ಗವಿಸಿದ್ಧೇಶ್ವರರ ಕರ್ತೃ ದರ್ಶನಕ್ಕೆ ಬಹಳಷ್ಟು ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಸಂಘಟಕರು ಪ್ರವೇಶ ದ್ವಾರದ ಗೇಟಿನ ಮುಂದೆ ಬಿಡಾರ ಹೂಡಿ ತಾಯಂದಿರ ಕೈಯಲ್ಲಿ ಇರುವ ಚಿಕ್ಕ ಚಕ್ಕ ಮಕ್ಕಳಿಗೆ ಪಲ್ಸ ಪೋಲಿಯೋ ಹಾಕುತ್ತಿರುವ ದೃಶ್ಯ ಕಂಡು ಬಂದಿತು.

ದಾಸೋಹ ಸೇವೆಗೈದವರು.

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಇಂದು ಸಹ ಮಹಾದಾಸೋಹ ಭರ್ಜರಿಯಾಗಿ ಸಾಗಿತು. ದಿನಾಂಕ ೨೪-೦೧-೨೦೧೧ ರ ಸೋಮವಾರದ ಇಂದಿನ ಮಹಾದಾಸೋಹದಲ್ಲಿ ಬೆಳಿಗ್ಗೆ ತಿಗರಿ ಗ್ರಾಮದ ಸದ್ಭಕ್ತರು, ಹ್ಯಾಟಿ-ಮುಂಡರಗಿ ಗ್ರಾಮದ ಸದ್ಭಕ್ತರು, ಗ್ರಾಮೀಣ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ದದೇಗಲ್ ಹಾಗೂ ಸಂಜೆ ಮಂಡಲಗೇರಿ ಗ್ರಾಮದ ಸದ್ಭಕ್ತರು, ಶ್ರೀ ಗ"ಸಿದ್ಧೇಶ್ವರ ಆಯುರ್ವೆದಿಕ್ ಕಾಲೇಜಿನ "ದ್ಯಾರ್ಥಿಗಳು ಪ್ರಸಾದ ಬಡಿಸುವ ಸೇವೆಯಲ್ಲಿ ತೊಡಗಿದ್ದರು. ಇವತ್ತಿನ ದಾಸೋಹದಲ್ಲಿ ಅಡುಗೆ ತಯಾರಿಕಾ ಕಾರ್ಯದಲ್ಲಿ ಹಳ್ಳಿಗುಡಿ, ಜಂತ್ಲಿ-ಶಿರೂರು, ಮಂಗಳೂರು ಗ್ರಾಮದ ಸದ್ಭಕ್ತರು ಭಾಗವ"ಸಿದ್ದರು. ಇವರೆಲ್ಲರಿಗೆ ಪೂಜ್ಯ ಶ್ರೀ ಗಳು ಆಶೀರ್ವದಿಸಿದ್ದಾರೆ.
ನಾಳೆ ದಿನಾಂಕ ೨೫-೦೧-೨೦೧೧ ರ ಮಂಗಳವಾರ ದಾಸೋಹದ ಸೇವೆಯಲ್ಲಿ ಬೆಳಿಗ್ಗೆ ಪ್ರಸಾದ ಬಡಿಸುವವರು ನೀರಲಗಿ, ವದಗನಾಳ್ ಗ್ರಾಮಸ್ಥರು ಹಾಗೂ ಎಸ್..ಕೆ ಬಿ.ಬಿ.ಎಮ್ ಕಾಲೇಜಿನ ವಿದ್ಯಾರ್ಥಿಗಳು, ಸಂಜೆ ಶ್ರೀ ಗವಿಸಿದ್ಧೇಶ್ವರ ಆಯುರ್ವೆದಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಾಲವಿನಾಯಕ ಮಿತ್ರ ಮಂಡಳಿ ಕೊಪ್ಪಳ ಭಾಗವಹಿಸುವರು.

ಜೀವನದಲ್ಲಿ ಮೌಲ್ಯಗಳ ಅಳವಡಿಕೆ ಅವಶ್ಯವಾಗಿದೆ - ಡಾ.ಗುರುರಾಜಕರ್ಜಗಿ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ೩ನೇ ದಿನದ ಸಮಾರೋಪ ಸಮಾರಂಭದ ಮುಖ್ಯ ಅಥಿಗಳಾಗಿ ಸಮಾರೋಪದ ನುಡಿಗಳನ್ನಾಡಿದ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅವರು ಜಾತ್ರೆಯ ವೈಶಿಷ್ಟ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾನವಿಯ ಮೌಲ್ಯಗಳು ಅಧಃಪತನದ ಹಾದಿ"ಡಿಯುತ್ತಿರುವದು ವಿಷಾದಕರ. ಇಂದಿನ ದಿನದಲ್ಲಿ ಮನುಷ್ಯ ಜರೂರಾಗಿ ಭಾರತೀಯ ಸಂಸ್ಕೃತಿಯ ಮೂಲ ಬೇರು ಸಾಮಾಜಿಕ, ಮೌಖಿಕ ಸಂಬಂಧ ಮತ್ತು ಮಾನವಿಯ ಮೌಲ್ಯಗಳನ್ನು ಅಳವಡಿಕೆ ಮಾಡಿಕೊಳ್ಳುವದು ಅವಶ್ಯವೆಂದು ಮನೋಜ್ಞವಾಗಿ ಮಾತನಾಡಿದರು. ಶಿಕ್ಷಣ, ಆಧ್ಯಾತ್ಮ, ದಾಸೋಹ, ಭಕ್ತಿಯ ನಿತ್ಯೋತ್ಸವಗಳು ಶ್ರೀಮಠದಲ್ಲಿ ನಿರಂತರ ಜರುಗುತ್ತಿರುವದು ಶ್ಲ್ಯಾಘನೀಯವೆಂದರು. ಈ ಸಂದರ್ಭದಲ್ಲಿ ಸಕಲ ಶ್ರೀಗಳು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಪೂಜ್ಯ ಅಭಿನವ ಶ್ರೀಗವಿಸಿದ್ಧೇಶ್ವರ ಶ್ರೀಗಳು ಶ್ರೀಮಠಕ್ಕೆ ಉದಾರವಾಗಿ ದಾನಗೈದ ಮಹನೀಯರನ್ನು ಸನ್ಮಾನಿಸಿ ಆಶಿರ್ವದಿಸಿದರು.

ನಾಳೆ ಚಕೋರಿ ನಾಟಕ ಪ್ರದರ್ಶನ ದಿನಾಂಕ ೨೫-೦೧-೨೦೧೧ರ ಮಂಗಳವಾರದಂದು ಕೈಲಾಸ ಮಂಟಪದ ವೇದಿಕೆಯಲ್ಲಿ ಶ್ರೀ ಶಿವಕುಮಾರ ಕಲಾತಂಡ ಸಾಣೆಹಳ್ಳಿ ಇವರಿಂದ ಡಾ.ಚಂದ್ರಶೇಖರ ಕಂಬಾರ ವಿರಚಿತ ಚಕೋರಿ ನಾಟಕ ಪ್ರದರ್ಶನಗೊಳ್ಳಲಿದೆ. ಕೊಪ್ಪಳದ ನಾಗರೀಕರು ವಿಕ್ಷಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ನಮ್ಮೂರ ಜಾತ್ರೆಯಲ್ಲೊಂದು ಸುತ್ತು.

kannadanet.com: ನಮ್ಮೂರ ಜಾತ್ರೆಯಲ್ಲೊಂದು ಸುತ್ತು...

ಝಗಮಗಿಸುವ ಜಾತ್ರೆ





ಶನಿವಾರ, ಜನವರಿ 22, 2011

ಜಾತ್ರೆಯಲ್ಲಿ ಇಂದು : ದಾಸೋಹದ ಸವಿ ತುಂಬಾ ಸಿಹಿ


ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಒಂದು ಜನೋತ್ಸವ, ಭಕ್ತಿ ಉತ್ಸವ ಕೊಪ್ಪಳ ನಾಡಿನ ಉತ್ಸವವಾಗಿ ಸುಮಾರು ೪ ಲಕ್ಷ ಭಕ್ತ ಜನಸಾಗರದಲ್ಲಿ ವಿಜೃಂಭಿಸುತ್ತದೆ. ಮಹಾದಾಸೋಹದಲ್ಲಿ ಸವಿಯಾದ ಪ್ರಸಾದ, ರೊಟ್ಟಿ, ಮೆಣಸಿನಕಾಯಿ ಚಟ್ನಿ,ಕಡಲೆ ಪುಡಿ, ಬದನೆಕಾಯಿ, ಕುಂಬಳ ಪಲ್ಯ, ಉಪ್ಪಿನ ಕಾಯಿ, ಹೀಗೆ ಪ್ರಸಾದದ ಪಟ್ಟಿ ಮುಂದುವರಿಯುತ್ತದೆ. ಮೃದುವಾದ ಮಾದಲಿ ಜೊತೆಗೆ ತುಪ್ಪ, ಅದರೊಳಗೆ ಬಿಸಿಹಾಲು ಸವಿಯುತ್ತಿದ್ದರೆ ಅದಕ್ಕಿಂತ ಆನಂದ ಬೇರೋಂದಿಲ. ಅನ್ನ,ಸಾರು, ಹೀಗೆ ಶ್ರೀಮಠದ ದಾಸೋಹವು ಅಬ್ಬಾ ಎನ್ನುವ ಮಟ್ಟಿಗೆ ಅದ್ಬುತವಾಗಿವೆ. ಸುಮಾರು ೫೦೦೦ ಕ್ಕಿಂತ ಹೆಚ್ಚಿನ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುತ್ತಿರುವದು ಕಂಡು ಬರುತ್ತದೆ. ಭಕ್ತರಪ್ರಕಾರ ಉತ್ತರ ಕರ್ನಾಟಕದ ಧರ್ಮಸ್ಥಳ ವಾಗುವದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವದು ಮಹಾದಾಸೋಹದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ.

ಬಳಗಾನೂರಿನ ಶ್ರೀಶಿವಶಾಂತವೀರ ಶರಣರಿಂದ ಧೀರ್ಘದಂಡ ನಮಸ್ಕಾರ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಎರಡನೆಯ ದಿನದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಈ ಸಾರೆಯು ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರಿಂದ ಲಿಂ.ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ತನಕ ಧೀರ್ಘದಂಡ ನಮಸ್ಕಾರ ಹಾಕುವ ಕಾರ್ಯಕ್ರಮ ಇಂದು ಸಂಜೆ ಜರುಗಿತು. ಈ ಹಿಂದೆ ಲಿಂ.ಪೂಜ್ಯ ಚನ್ನವೀರ ಶರಣರು ಸುಮಾರು ೫೦-೬೦ ವರ್ಷಗಳಿಂದ ತಮ್ಮ ಗುರುಗಳಾದ ಲಿಂ.ಮ.ನಿ.ಪ್ರ.ಜ.ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ತನಕ ಗುರುಸ್ಮರಣೆಗಾಗಿ ಧೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಈಗ ಶ್ರೀಶಿವಶಾಂತವೀರ ಶರಣರು ಮುಂದುವರೆಸಿದ್ದಾರೆ. ಶ್ರೀಶಿವಶಾಂತವೀರ ಶರಣರು ದಿವಂಗತ ಡಾ.ಗಂಗಯ್ಯ ಸ್ವಾಮಿ ಹೀರೆಮಠ ಅವರ ಮನೆಯಿಂದ ಹೊರಟು ಜವಾಹರ ರಸ್ತೆ,ಗಡಿಯಾರಕಂಬ,ಶಾರದಾಟಾಕೀಸ್ ಮಾರ್ಗವಾಗಿ ಶ್ರೀಮಠಕ್ಕೆ ಪಾದಯಾತ್ರೆ ಬಂದು ಅಪಾರ ಭಕ್ತರ ಮಹಾಪೂರದಲ್ಲಿ ಹೂವಿನ ಹಾಸಿಗೆಯ ಮೇಲೆ ಪ್ರವೇಶದ್ವಾರದಿಂದ ಮರಿಶಾಂತವೀರ ಸ್ವಾಮಿಗಳ ಗದ್ದುಗೆಯ ತನಕ ಧೀಘೃದಂಡ ನಮಮಸ್ಕಾರ ಹಾಕಿzರು. ಈ ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಭಜನಾಮಂಡಳಿಯು ನೆರೆದ ಭಕ್ತ ಸಮೂಹವನ್ನು ಮಂತ್ರ ಮುಗ್ಧರನ್ನಾಗಿಸಿತು.



ವೇಷಗಾರರಿಂದ ಕಲಾ ಪ್ರದರ್ಶನ


ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಶ್ರೀಮಠದ ಆವರಣದಲ್ಲಿ ವೇಷಗಾರರು ತಮ್ಮ ವರ್ಣರಂಜಿತ ಕಲೆಯನ್ನು ಪ್ರದರ್ಶನ ಮಾಡುವದರ ಮೂಲಕ ಜಾತ್ರೆಗೆ ಆಗಮಿಸಿರುವ ಭಕ್ತರಿಗೆ ಮೆರಗನ್ನು ತಂದು ಕೊಟ್ಟರು. ಅವರು ಪೌರಾಣೀಕ,ಧಾರ್ಮಿಕ, ಸಾಮಾಜಿಕ ವಿಷಯಾಧಾರಿತ ವೇಷವನ್ನು ಧರಿಸಿ ಗಾಯನದೊಂದಿಗೆ,ಕುಣಿದು ಕುಪ್ಪಳಿಸಿ ತಮ್ಮ ಕಲಾ ಪ್ರದಶೃನ ಮಾಡಿದರು. ಆರಂಭದಲ್ಲಿ ವೇದಿಕೆಯ ಮೇಲೆ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಾದ ಸಿ.ವಿ.ಚಂದ್ರಶೇಕರ ಅವರು ಕಲಾವಿದರಿಗೆ ೧೦೦೦ ರೂ ಕಾಣಿಕಕೊಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇಷಗಾರರ ಮುಖ್ಯಸ್ಥರಾದ ಬಸವರಾಜ ವಿಭೂತಿ ಪಾಲ್ಗೋಂಡಿದ್ದರು. ಪ್ರಾಸ್ತಾವಿಕ ಶಿವಕುಮಾರ ಕೆ. ನಿರೂಪಣೆ ರಾಜೇಶ ಸಸಿಮಠ ನೆರವೇರಿಸಿದರು.


ಜನಸ್ತೋಮವನ್ನು ರಂಜಿಸಿದ ಕುಸ್ತಿ ಸ್ಪರ್ಧೆ


ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಶ್ರೀಮಠದ ಆಟದ ಆವರಣದಲ್ಲಿ ಪುರುಷರ ಮತ್ತು ಮಹಿಳೆಯರ ಭಾರೀ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಾಡಿನ ಹೆಸರಾಂತ ಕುಸ್ತಿ ಪಟುಗಳು ಭಾಗವಹಿಸಿದ್ದರು. ಇವರಲ್ಲಿ ವಿಜೇತ ಪಟುಗಳಾದ ಬಸವರಾಜ ಹುಯಿಲಗೋಳ, ಫಯಾಜ್, ರಸೂಲ್, ಸತ್ಯಪ್ಪ, ಹುಲಗಪ್ಪ , ಪಾಲಾಕ್ಷಿ ,ಸಮೀರ್, ಈ ಕುಸ್ತಿಪಟುಗಳಿಗೆ ಶ್ರೀ ಮಠದದಿಂದ ಹಣದ ರೂಪದ ಪ್ರಶಸ್ತಿ,ಫಲಕ ನೀಡಲಾಯಿತು. ನಿರ್ಣಾಯಕರಾಗಿ ಶ್ರೀಭೀಮಸಿ ಪೈಲವಾನ್,ಶ್ರೀಮುಸ್ತಫಾ ಪೈಲವಾನ್,ಶ್ರೀಶರಣಗೌಡ ಕುಸ್ತಿ ತರಬೇತುದಾರರು,ಶ್ರೀ ವಿ.ಎನ್.ಘಾಡಿ ಆಗಮಿಸಿದ್ದರು.ವ್ಯವಸ್ಥಪಕರಾಗಿ ಪ್ರಭು ಹೀರೇಮಠ, ನರೇಂದ್ರ ಎಚ್‌ಎಸ್ ಪಾಟೀಲ ಕಾರ್ಯನಿರ್ವಹಿಸಿದರು.

ಜಾತ್ರಾ ಮಹೋತ್ಸವದ ವಿಡಿಯೋ

ನಮ್ಮೂರ ಅಜ್ಜನ ಜಾತ್ರೆಯ ಸಂಭ್ರಮ
ಶ್ರೀಗವಿಮಠದ ಜಾತ್ರಾ ಮಹೋತ್ಸವ ವಿಡಿಯೋ ನೋಡುವುದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಪೆ : ಶ್ರೀಗವಿಮಠಕೊಪ್ಪಳ.ಕಾಂ

ವಿವಿದ ದೃಶ್ಯಗಳು











ಸಂಭ್ರಮದ ಜಾತ್ರಾಮಹೋತ್ಸವ





























ಲಕ್ಷಾಂತರ ಭಕ್ತಾದಿಗಳು ಸೇರಿದ್ದ ಜಾತ್ರಾ ಮಹೋತ್ಸವದ ಚಿತ್ರಗಳು

ಗುರುವಾರ, ಜನವರಿ 20, 2011

ಗವಿಮಠದ ರಥೋತ್ಸವ ಇಂದು

ಶ್ರೀಗವಿಮಠದ ರಥೋತ್ಸವ 21 ರ ಸಂಜೆ 5 ಗಂಟೆಗೆ ನಡೆಯಲಿದೆ.
ಎಲ್ಲರಿಗೂ ಹಾರ್ದಿಕ ಸುಸ್ವಾಗತ

ಶ್ರೀಮಠದ ದಾಸೋಹಕ್ಕೆ ಹರಿದು ಬಂದ ದವಸ ಧಾನ್ಯ ಹಾಗೂ ರೊಟ್ಟಿ






ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಇಂದು ಸಹ ಮಹಾದಾಸೋಹಕ್ಕೆ ಅನೇಕ ದವಸ ಧಾನ್ಯ,ರೊಟ್ಟಿ, ತರಕಾರಿಗಳು ಸಾಗರೋಪಾದಿಯಲ್ಲಿ ಹರಿದು ಬಂದವು. ಗಂಗಾವತಿಯ ಅಯ್ಯನಗೌಡ ಕಾಸನಕಂಡಿ ೨೨ ಪಾಕೇಟ್ (೫೦ಕೆ.ಜಿ ತೂಕ"ರುವ)ಅಕ್ಕಿಯನ್ನು ಮಲ್ಲಯ್ಯ ಕರಿಬಸವಯ್ಯ ಹಿರೇಮಠ ಹುಡ್ಕೋ ಕಾಲನಿ ಕೊಪ್ಪಳ ಇವರು ೨ ಕ್ವಿಂಟಾಲ್ ಅಕ್ಕಿ, ಕೆಂಪಳ್ಳಿ ಗ್ರಾಮದವರಿಂದ ೧೦೦೦ ರೊಟ್ಟಿ,೧ಚೀಲ ಮೆಣಸಿನಕು, ಹಿರೇವಂಕಲಕುಂಟಿ ಗ್ರಾಮದವರಿಂದ ೫೦೦೦ ರೊಟ್ಟಿ, ೧ಕ್ವಿಂಟಾಲ್ ಮೆಕ್ಕೆ ಜೋಳ, ೨ ಚೀಲ ನೆಲ್ಲು, ೧ ಚೀಲ ಸಜ್ಜೆ, ಗೌರಿಅಂಗಳದ ಇಸ್ಮಾಲ್ ಸಾಬ ಕಮತರ್ ೨೫೦೦ ರೊಟ್ಟಿ, ಬಿಸgಳ್ಳಿ ಗ್ರಾಮದವರಿಂದ ೫೦೦೦ ರೊಟ್ಟಿ ಹಾಗೂ ದವಸ ಧಾನ್ಯ,ಮತ್ತುರು ಗ್ರಾಮದವರಿಂದ ೧೫೦೦ ರೊಟ್ಟಿ, ೨೫ ಪಾಕೇಟ್ ದವಸ ಧಾನ್ಯ, ಕರ್ಕಿಹಳ್ಳಿ ಗ್ರಾಮದವರಿಂದ ೫೧ ಚೀಲ ದವಸಧಾನ್ಯ,೧೦೦೦ ರೊಟ್ಟಿ ,ತಳಕಲ್ ಗ್ರಾಮದವರಿಂದ ೪೦೦೦ ರೊಟಿ , ದವಸಧಾನ್ಯಗಳು, ತರಕಾರಿ, ಚಳ್ಳಾರಿ ಗ್ರಾಮದವರಿಂದ ೨೬ ಪಾಕೇಟ್ ದವಸ-ಧಾನ್ಯ, ಹಾಲಹಳ್ಳಿ ಗ್ರಾಮದವರಿಂದ ೧೧ ಚೀಲ ತರಕಾರಿ,ಬೇವೂರ ಗ್ರಾಮದವರಿಂದ ೫೦೦೦ ರೊಟ್ಟಿ,೨ ಚೀಲ ದವಸ ಧಾನ್ಯ, ಬೆಣಕಲ್ ಗ್ರಾಮದಿಂದ ೫೦೦೦ ರೊಟ್ಟ, ದವಸ-ಧಾನ್ಯ,ತರಕಾರಿ,ಇಟಗಿ ಗ್ರಾಮದವರಿಂದ ೫ ಚೀಲ ದವಸ-ಧಾನ್ಯ, ೫೦೦೦ ರೊಟ್ಟಿ,ಮಂಡಲಗೇರಿ ಗ್ರಾಮದವರಿಂದ ೩೦೦೦ ರೊಟ್ಟಿ, ತರಲ ಕಟ್ಟಿ ಗ್ರಾಮದವರಿಂದ ೪೫೦೦ ರೊಟ್ಟಿ,೫ಚೀಲ ದವಸ-ಧಾನ್ಯ,೨ ಚೀಲ ತರಕಾರಿ

ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತನ ೧೦ ಕಿ.ಮಿ. ಉರುಳು ಸೇವೆ


ಕೊಪ್ಪಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನಾ ದಿನಾ ಇಂದು ಕೊಪ್ಪಳ ತಾಲೂಕಿನ ಹ್ಯಾಟಿ-ಮುಂಡರಗಿ ಗ್ರಾಮದ ಭಕ್ತ ಶ್ರೀ ಗುರುಸಿದ್ಧನಗೌಡ ಚಿಕ್ಕಸಿಂಧೋಗಿ ಇವರು ಸತತ ೪ ವರ್ಷಗಳಿಂದ ಪ್ರತಿ ವರ್ಷ ೧೦ ಕೀ.ಮಿ.ಉರುಳು ಸೇವೆಯ ಮೂಲಕ ತಮ್ಮ ವಿಶಿಷ್ಟ ಹರಕೆಯನ್ನು ಸಲ್ಲಿಸುತ್ತಿದ್ದಾರೆ. ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

ಬುಧವಾರ, ಜನವರಿ 19, 2011

ಮಂಗಳಾಪೂರದಿಂದ ಮೂರ್ತಿ ಮತ್ತು ಕಳಸ ಉತ್ಸವ

ದಿನಾಂಕ: ೨೦-೦೧-೨೦೧೧ ಗುರುವಾರದ ಕಾರ್ಯಕ್ರಮ

ಕೊಪ್ಫಳ: ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ದಿನಾಂಕ ೨೦-೦೧-೨೦೧೧ ರ ಗುರುವಾರ ಸಾಯಂಕಾಲ ೬-೦೦ ಗಂಟೆಗೆ ಲಘು ರಥೋತ್ಸವ ಹಾಗೂ ಸಂಜೆ ೬-೩೦ ಗಂಟೆಗೆಕೈಲಾಸಮಂಟಪ ವೇದಿಕೆಯಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗುವವು. ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಮಹಾದಸೋಹಕ್ಕೆ ಹರಿದು ಬಂದ ದವಸಧಾನ್ಯಗಳು ೧೯-೦೧-೨೦೧೧





ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಶ್ರೀಮಠದ ಆವರಣದಲ್ಲಿ ಸಡಗರ ಸಂಭ್ರಮ ಕಂಡುಬರುತ್ತಿದೆ. ಇಂದು ಸಹ ಶ್ರೀಮಠದ ದಾಸೋಹಕ್ಕೆ ಅಬ್ಬಿಗೇರಿ ಗ್ರಾಮಸ್ಥರಿಂದ ೧೦೦೦೦ ಸಾವಿರ ರೊಟ್ಟಿ, ಕೊಪ್ಪಳದ ಗೌರಿ ಅಂಗಳದ ಭಕ್ತರಿಂದ ೬೦೦ ರೊಟ್ಟಿ, ೨ ಚೀಲ ಮೆಣಸಿನಕಾ, ಚಿಕ್ಕಸಿಂಧೋಗಿ ಗ್ರಾಮಸ್ಥರಿಂದ ೩೦೦೦ ರೊಟ್ಟಿ, ಚಿಲಕಮಕಿ ಗ್ರಾಮದವರಿಂದ ೧ ಚೀಲ ಸಜ್ಜೆ, ೧೨೦೦ ರೊಟ್ಟಿ, ಕಟಗಿಹಳ್ಳಿ ಗ್ರಾಮಸ್ಥರಿಂದ ೧೦೦೦ ರೊಟ್ಟಿ, ೭ ಚೀಲ ದವಸ ಧಾನ್ಯ, ಹುಲಗಿ-ಹೊಸಳ್ಳಿ ಗ್ರಾಮದ ಸದ್ಭಕ್ತರಿಂದ ೩೫೦೦ ರೊಟ್ಟಿಗಳು, ಬನ್ನಿಕೊಪ್ಪ ಗ್ರಾಮದವರಿಂದ ೮೦೦೦ ರೊಟ್ಟಿಗಳು, ರಾಮದುರ್ಗ ಭಕ್ತರಿಂದ ೨೫ ಪಾಕೇಟ್ ದವಸಧಾನ್ಯಗಳು, ಭಾನಾಪುರ ಗ್ರಾಮದವರಿಂದ ೧ ಟ್ರ್ಯಾಕ್ಟರ್ ರೊಟಿ, ೨ ಚೀಲ ಅಕ್ಕಿ, ೧ ಪಾಕೇಟ್ ಸಜ್ಜೆ,ಕುಂಬಳಕಾ, ವದಗನಾಳ್ ಗ್ರಾಮದವರಿಂದ ೪೦೦೦ ರೊಟ್ಟಿಗಳು, ಕವಲೂರು ಗ್ರಾಮದವರಿಂದ ೧ ಟ್ರ್ಯಾಕ್ಟರ್ ರೊಟ್ಟಿ, ೨ ಚೀಲ ಉಳ್ಳಾಗಡ್ಡಿ,ಯಾಪಲ್ ದಿನ್ನಿ ಗ್ರಾಮಸ್ಥರಿಂದ ೨೦೦೦ ರೊಟ್ಟಿ,೩ ಚೀಲ ದವಸ ಧಾನ್ಯ,೧ ಚೀಲ ಟಮಾಟೋ,ಕುಂಬಳಕಾ, ನಿಟ್ಟಾಲಿ ಗ್ರಾಮದವರಿಂದ ೫೦೦೦ ರೊಟ್ಟಿ, ೬ ಪಾಕೇಟ್ ಅಕ್ಕಿ,ತರಕಾರಿ,೧ ಚೀಲ ಜೋಳ,ಹನುಮನಳ್ಳಿ ಗ್ರಾಮದವರಿಂದ ೩೦ ಚೀಲ ದವಸಧಾನ್ಯ,ಕಂದಕೂರ ಗ್ರಾಮದವರಿಂದ ೨೦೦೦ ರೊಟ್ಟಿ,೨ ಪಕೇಟ್ ಅಕ್ಕಿ,೨ ಚೀಲ ಸಜ್ಜೆ,ಕುಂಬಳಕಾ,ಗೊಂಡ ಬಾಳ ಗ್ರಾಮದವರಿಂದ ೫೦೦೦ ರೊಟ್ಟಿ,೫೪ ಚೀಲ ದವಸ ದಾನ್ಯ,ಹಾಲವರ್ತಿ ಗ್ರಾಮದವರು ಹಾಗೂ ಮಹಾದೇ" ಇಂಡಸ್ಟ್ರಿಸ್ ಅವರಿಂದ ೮ ಟ್ರ್ಯಾಕ್ಟರ್ರ್‍ಅ ಕಲ್ಲು,ಮಸಬಹಂಚಿನಾಳ ಗ್ರಾಮದವರಿಂದ ೧೦೦೦೦ ರೊಟ್ಟಿ,೬ ಚೀಲದವಸಧಾನ್ಯ,ಕಾಟ್ರಳ್ಳಿ ಗ್ರಾಮದವರಿಂದ ೪೦೦೦ ರೊಟ್ಟಿ,ಗುತ್ತುರು ಗ್ರಾಮದವರಿಂದ ೩೦೦೦ ರೊಟ್ಟಿ,ಕುಂಬಳಕಾ,ಹಗರಿಬೊಮ್ಮನಳ್ಳಿ ತಾಲೂಕಾ ಉಪ್ಪಾರಗಟ್ಟಿ ಗ್ರಾಮದವರಿಂದ ೧ ಮಿನಿ ಗಾಡಿ ರೊಟ್ಟಿ,ನಿಲೂಗಲ್ ಗ್ರಾಮದವರಿಂದ ೨೦೦೦ ರೊಟ್ಟಿ,೨ ಪಾಕೇಟ್ ಅಕ್ಕಿ ಜೋಳ, ಹಿರೇಬಗನಾಳ ಗ್ರಾಮದವರಿಂದ ೧೫ ಚೀಲ ನೆಲ್ಲು,೪ ಚೀಲ ಮೆಕ್ಕೆಜೋಳ,೧ ಚೀಲ ಸಜ್ಜೆ, ವೆಂಕಟಾಪುರ ಗ್ರಾಮದವರಿಂದ ೧ ಚೀಲ ಜೋಳ.೨೩ ಪಾಕೇಟ್ ಸಜ್ಜೆ, ೪ ಚೀಲ ಜವೆಗೋಧಿ, ಯಲಮಗೇರಿ ಗ್ರಾಮದವರಿಂದ ೩೦ ಪಾಕೇಟ ದವಸಧಾನ್ಯ,ಕುಣಿಕೇರಿ ಗ್ರಾಮದವರಿಂದ ೫೦೦೧ ರೊಟ್ಟಿ,೪೦ ಚೀಲ ದವಸಧಾನ್ಯ,೩ಕ್ವಿಂಟಾಲ್ ಕುಂಬಳಕಾ, ಯಲಬುರ್ಗಾ ತಾಲೂಕಾ ಹುಣಸಿಹಾಳ ಗ್ರಾಮದವರಿಂದ ೧ಮಿನಿ ಗಾಡಿ ರೊಟ್ಟಿ, ೧ಚೀಲ ಜೋಳ,ಬೈರ ನಾಯಕನಹಳ್ಳಿ ಗ್ರಾಮದವರಿಂದ ೫೦೦೦ ರೊಟ್ಟಿ,೬ ಚೀಲ ದವಸ ಧಾನ್ಯ, ಗುಳದಳ್ಳಿ ಗ್ರಾಮದಿಂದ ೫೦೦ ರೊಟ್ಟಿ,೧೦೦ ಚಪಾತಿ,೭೯ ಚೀಲ ದವಸ ಧಾನ್ಯಗಳು, ೩ ಚೀಲ ಮೆಣಸಿನಕಾ, ಮುರಡಿ ಗ್ರಾಮದವರಿಂದ ೬೦೦೦ ರೊಟ್ಟಿ,೨೦ ಚೀಲ ದವಸಧಾನ್ಯ,೨೦೦ ಕುಂಬಳಕಾ, ಕೊಪ್ಪಳದ ತಳವಗೇರಿ ಕುಟುಂದವರಿಂದ ೫೪ ಪಾಕೇಟ್ (೨೫ ಕೆ.ಜಿ.ತೂಕವಿರುವ) ೧೩.೫೦ ಕ್ವಿಂಟಾಲ್ ಅಕ್ಕಿಯನ್ನು ಗವಿಸಿದ್ದಪ್ಪ ಎನ್ ತಳವುಗೇರಿ,ಸಂಗಪ್ಪ ತಳುವಗೇರಿ,ವಿನಾಯಕ ತಳುವಗೇರಿಯವರು ಶ್ರೀಮoದ ದಾಸೋಹಕ್ಕೆ ಸಮರ್ಪಿಸಿದರು. ಈ ದಾಸೋಹ ಸೇವೆಗೈದ ಸದ್ಭಕ್ತರನ್ನು ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ದಾಸೋಹಕ್ಕೆ ಅಕ್ಕಿ ದೇಣಿಗೆ : ಗಂಗಾವತಿ ತಾಲೂಕಿನ ಭಕ್ತರಿಂದ ೨೯೭ ಕ್ವಿಂಟಾಲ್ ಅಕ್ಕಿ ಕಾಣಿಕೆ
ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಮಹಾದೋಸೋಹಕ್ಕೆ ದಿನದಿಂದ ದಿನಕ್ಕೆ ಕಾಣಿಕೆಗಳ ಮಹಾಪೂರ ಹರಿದುಬರುತ್ತಿದೆ. ಗಂಗಾವತಿ ತಾಲೂಕಿನ ಸಮಸ್ತ ಭಕ್ತರು ೨೫೦ ಪಾಕೇಟ್ (೫೦ ಕೆ.ಜಿ.ತೂಕವಿರುವ) ೧೨೫ ಕ್ವಿಂಟಾಲ್ ಅಕ್ಕಿಯನ್ನು ದಿನಾಂಕ ೧೮-೦೧-೨೦೧೧ ರಂದು ಅದೇ ರೀತಿ ಇಂದು ದಿನಾಂಕ ೧೯-೦೧-೨೦೧೧ ಗಂಗಾವತಿ ಸದ್ಭಕ್ತರಿಂದ ೩೪೪ ಪಾಕೇಟ್ ಅಕ್ಕಿ (೫೦ಕೆ.ಜಿ ತೂಕವಿರುವ) ಯನ್ನು ಶ್ರೀಮಠದ ದಾಸೋಹಕ್ಕೆ ಸಮರ್ಪಿಸಿದರು.
ಕಮ್ಮವಾರು ಶಿಕ್ಷಣ ಸಂಸ್ಥೆಂದ ಅಕ್ಕಿ ಕಾಣಿಕೆ: ಕೊಪ್ಪಳದ ಶ್ರೀ ಗವಿಮಠದ ಜಾತ್ರೆಯ ಮಹಾದೋಸೋಹಕ್ಕೆ ಕಾರಟಗಿಯ ಅಧ್ಯಕ್ಷರು ಕಮ್ಮವಾರು ಶಿಕ್ಷಣ ಸಂಸ್ಥೆ ಇವರು (೪೦೪ ಪಾಕೇಟ್ ೨೫ ಕೆ.ಜಿ ತೂಕವಿರುವ) ೧೦೧ ಕ್ವಿಂಟಾಲ ಅಕ್ಕಿಯನ್ನು ಸಮರ್ಪಿಸಿದ್ದಾರೆ. ಸದ್ಭಕ್ತರನ್ನು ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.

ಸೋಮವಾರ, ಜನವರಿ 17, 2011

ಗವಿಮಠದಲ್ಲಿ ದಿನಾಂಕ ೧೮-೦೧-೨೦೧೧ ರ ಜಾತ್ರಾ ನಿಮಿತ್ಯದ ಕಾರ್ಯಕ್ರಮಗಳು

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ದಿನಾಂಕ ೧೮-೦೧-೨೦೧೧ ರಂದು ಮಂಗಳವಾರ ದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಜರುಗುವದು. ಕಾರಣ ಮುತ್ತೈದೆ ಮಹಿಳೆಯರು, ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

ಇಂದು ವಿದ್ಯುಕ್ತವಾಗಿ ಚಾಲನೆಗೊಂಡ ಜಾತ್ರೆಯ ಧಾರ್ಮಿಕ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಇಂದು ದಿನಾಂಕ ೧೭-೦೧-೨೦೧೧ ರ ಸೋಮವಾರ ಜಾತ್ರಾ ನಿಮಿತ್ಯ ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಚಾಲನೆಗೊಂಡವು. ಇಂದು ಸಂಜೆ ೬-೦೦ ಗಂಟೆಗೆ ಪೂಜ್ಯರ ಸಮ್ಮುಖದಲ್ಲಿ ಬಸವಪಟ ಕಾರ್ಯಕ್ರಮ ಜರುಗಿತು.

ಶ್ರೀಗವಿಮಠಕ್ಕೆ ಹರಿದು ಬರುತ್ತಿರುವ ರೊಟ್ಟಿ ಹಾಗೂ ದವಸಧಾನ್ಯಗಳ ಮಹಾಪುರ





ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಮಹಾದಾಸೋಹಕ್ಕೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಹಾಗೂ ಕೊಪ್ಪಳ ನಗರದಿಂದ ಶ್ರೀಮಠಕ್ಕೆ ದವಸಧಾನ್ಯಗಳ ಮಹಾಪೂರವೇ ಹರಿದುಬರುತ್ತಿದೆ. ಇಂದು ಕುಣಿಕೇರಿ ತಾಂಡಾದಿಂದ ೧೭ ಪಾಕೇಟ್ ಮೆಕ್ಕೆಜೋಳ, ೭ ಚೀಲ ಜೋಳ, ಕನಕಾಪುರ ತಾಂಡಾದಿಂದ ೮ ಚೀಲ ಮಕ್ಕೆಜೋಳ, ೩ ಪಾಕೆಟ್ ಅಕ್ಕಿ, ಲಿಂಗದಳ್ಳಿಂದ ೫ ಚೀಲ ನೆಲ್ಲು, ೫ ಚೀಲ ಜೋಳ, ಅರೀಕೇರಿಂದ ೫೦ ಕೆ.ಜಿ.ನೆಲ್ಲು, ೨೫ ಕೆ.ಜಿ. ಅಕ್ಕಡಿ ಕಾಳು, ಗಿಣಿಗೇರಿಂದ ೧೫ ಪಾಕೇಟ್ ನೆಲ್ಲು, ೩ ಪಾಕೇಟ್ ಮೆಕ್ಕೆ ಜೋಳ, ತಳಕಲ್‌ದಿಂದ ಶಿವಪ್ಪ ಆದಾಪುರ ಇವರಿಂದ ೨ ಪಾಕೇಟ ಉಳ್ಳಾಗಡ್ಡಿ, ೧ ಚೀಲ ಮೆಕ್ಕೆಜೋಳ, ಲೇಬಗೇರಿಯ ಬಸಣ್ಣ ನಂದಿಬೇವುರ ಇವರಿಂದ ೪೫ ಕುಂಬಳಕಾ, ತಳಕಲ್‌ದ ಶಿವಣ್ಣ ಸೋಮಾಪುರ ಇವರಿಂದ ೫೦ ಕೆ.ಜಿ.ಉಳ್ಳಾಗಡ್ಡಿ, ಟಣಕಣಕಲ್ಲಿನಿಂದ ಆಟೋಗಾಡಿ ರೊಟ್ಟಿ, ೧೦ ಚೀಲ ಮೆಕ್ಕೆ ಜೋಳ, ನೆಲ್ಲು, ಸಜ್ಜೆ, ಮಂಗಳೂರ ಗ್ರಾಮದಿಂದ ೧೧,೦೦೦ ರೊಟ್ಟಿ, ೨೫ ಚೀಲ ದವಸಧಾನ್ಯ, ೨೦೦ ಕುಂಬಳಕಾ, ಹುಲಗಿ ಗ್ರಾಮದಿಂದ ೧ ಟ್ರ್ಯಾಕ್ಟರ್ ರೊಟ್ಟಿ, ಕಾಸನಕಂಡಿಂದ ೪೫ ಚೀಲ ನೆಲ್ಲು, ೫ ಚೀಲ ಮೆಕ್ಕೆಜೋಳ, ೧ ಚೀಲ ಸಜ್ಜಿ, ತಾಳಕನಕಾಪುರ ಗ್ರಾಮದಿಂದ ೨೦೦೦ ರೊಟ್ಟಿ, ೫೨ ಚೀಲ ದವಸಧಾನ್ಯ, ಹಿರೆ ಕಾಸನಕಂಡಿಂದ ೫ ಕ್ವಿಂಟಾಲ್ ಮೆಕ್ಕೆ ಜೋಳ, ೧ ಚೀಳ ಸಜ್ಜಿ, ೫೪ ಚೀಲ ನೆಲ್ಲು, ೩೦ ಕುಂಬಳಕಾ, ಕೋನಸಾಗರ ಗ್ರಾಮದಿಂದ ೧ ಟ್ರ್ಯಾಕ್ಟರ್ ಕಟ್ಟಿಗೆ, ೧ ಚೀಲ ನೆಲ್ಲು ಈ ಮೊದಲಾದ ದವಸ ಧಾನ್ಯಗಳು ಶ್ರೀ ಗವಿಮಠದ ಜಾತ್ರೆಯ ನಿಮಿತ್ಯ ನೆಡೆಯುವ ಮಹಾದಾಸೋಹಕ್ಕೆ ಅರ್ಪಿತವಾದವು. ಸದ್ಬಕ್ತರಿಗೆ ಪೂಜ್ಯ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳು ಶುಭಹಾರೈಸಿದ್ದಾರೆ.

ಮಿಟ್ಟಿಕೇರಿ ಮುಸ್ಲಿಂ ಬಾಂದವರಿಂದ ಶ್ರೀಮಠಕ್ಕೆ ರೊಟ್ಟಿಗಳ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಜಾತ್ರೆಯ ಮಹಾದಾಸೋಹಕ್ಕೆ ನಗರದ ಮಿಟ್ಟೀಕೇರಿಯ ಮುಸ್ಲಿಂ ಭಕ್ತ ಶ್ರೀ ಷರ್ಮಾಶಲಿ ತಂದೆ ಜಾಫರ್ ಹುಸೇನ್ ವರ್ಧಿ ಇವರು ೧೧,೦೦೦ ರೊಟ್ಟಿ ಹಾಗೂ ೨೫ ಕಿ.ಲೋ ಬೆಲ್ಲ ಹಾಗೂ ಮಿಟ್ಟೀಕೇರಿ ಓಣಿಯ ಭಕ್ತರು ೨೦೦೦ ರೊಟ್ಟಿಗಳನ್ನು ಶ್ರೀಮಠದ ಮಹಾ ದಾಸೋಹಕ್ಕೆ ಸಮರ್ಪಿಸುವದರ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆದಿದ್ದಾರೆ. ಪೂಜ್ಯ ಶ್ರೀಗಳು ಸದ್ಬಕ್ತರಿಗೆ ಶುಭಹಾರೈಸಿದ್ದಾರೆ.