ಗುರುವಾರ 12 ಜನವರೀ 2012
ಬುಧವಾರ 11 ಜನವರೀ 2012
ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಸಾಯಂಕಾಲ:05:00 ಗಂಟೆಗೆ
Shri Gavisiddeshwara Car Festival 2012
Live
ದಿನಾಂಕ:11-01-2012 (ಬುಧವಾರ) ಸಾಯಂಕಾಲ:05:00 ಗಂಟೆಗೆ
ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ
ಜಾತ್ರೆಯ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ ಮಾಡಿ
gavimathkoppal.com
ದೇವಿಗೆ ಉಡಿತುಂಬುವ ಕಾರ್ಯಕ್ರಮ ಲಘು ರಥೋತ್ಸವ ಸಂಗೀತ ಕಾರ್ಯಕ್ರಮ
ಜಾತ್ರೆಗಾಗಿಯೇ ಮೊಬೈಲ್ ಟವರ್ ಸ್ಥಾಪನೆ |
ಮದುವೆ, ಮುಂಜುವೆ ಮುಂತಾದ ಕಾರ್ಯಕ್ರಮಗಳಲ್ಲಿ ಮನೆಯಲ್ಲಿ ಹಿರಿಯರನ್ನು ಹಾಗೂ ಲಕ್ಷ್ಮೀ ಪೂಜೆಗಳನ್ನು ನೇರವೇರಿಸುವಂತೆ ಶ್ರೀ ಮಠದದಲ್ಲಿಯೂ ಸಹಿತ ಶ್ರೀಮಠದಲ್ಲಿಯ ಅನ್ನಪೂರ್ಣೇಶ್ವರಿ ದೇವಿಗೆ ಸುಮಂಗಲೆಯರು ಮಂಗಲ ದ್ರವ್ಯಗಳೊಂದಿಗೆ ಉಡಿತುಂಬುವ ಕಾರ್ಯಕ್ರಮ ಅನೂಚಾನವಾಗಿ ನಡೆದು ಬಂದಿದೆ. ಇಂದೂ ಸಹ ಸಹಸ್ರಾರು ಸುಮಂಗಲೆಯರು ಉಡಿತುಂಬುವ ಕಾರ್ಯಕ್ರಮಗಳಲ್ಲಿ ಭಕ್ತಿ ಭಾವದೊಂದಿಗೆ ಸೇವೆಗೈದರು ದೇವಿಗೆ ಉಡಿ ತುಂಬುವದರಿಂದ ಸಂತಾನಫಲ, ಕಂಕಣಬಲ,ಧನಧಾನ್ಯಾಧಿಗಳು ಲಭಿಸುತ್ತವೆ ಎಂಬ ಶ್ರದ್ಧೇ ಮತ್ತು ಬಲವಾದ ನಂಬಿಕೆ ಸುಮಂಗಲೆಯರಲ್ಲಿ ಮನೆಮಾಡಿದೆ. ಹಾಗೂ ಇದು ಶ್ರೀಮಠದ ಸತ್‌ಸಂಪ್ರದಾಯವಾಗಿದೆ.
ಲಘು ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮ
ಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಉಚ್ಚಾಯ (ಲಘು ರಥೋತ್ಸವ ) ಪೂಜ್ಯ ಶ್ರೀಗಳ ಸನ್ನಿಧಿಯಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ಜರುಗಿತು. ಇದು ರಥೋತ್ಸವದ ಮುನ್ನಾದಿನ ನಡೆಯುವ ಸಂಪ್ರದಾಯವಾಗಿದೆ. ಜಾತ್ರೆಯಷ್ಟು ಜನರು ಇದರಲ್ಲಿ ಬಾಗಿಯಾಗಿದ್ದರು. ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೆರಗನ್ನ ತಂದರು.ವೇದಿಕೆ ಮೇಲೆ ನಾಡಿನ ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು.
ಮಹಾದಾಸೋಹದ ಪ್ರಸಾದ ತಯಾರಿಕೆಗೆ ಪೂಜ್ಯಶ್ರೀಗಳಿಂದ ಚಾಲನೆಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಶ್ರೀ Uವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಮಹಾದಾಸೋಹದಲ್ಲಿನ ಪ್ರಸಾದ ತಯಾರಿಕೆಗೆ ವಿದ್ಯೂಕ್ತ ಚಾಲನೆ ಮಾಡಿದರು. ಪೂಜ್ಯರ ಜೋತೆಗೆ ಎಸ್.ಮಲ್ಲಿಕಾರ್ಜುನ, ಚಂಪಾಲಾಲ್‌ಜೀ ಮೆಹತಾ, ಫಕೀರಪ್ಪ ಗಡ್ಡಿ, ಸಿದ್ದಣ್ಣ ನಾಲ್ವಾಡ, ಪ್ರಕಾಶ ಚಿನ್ನವಾಲರ, ಸಂಜಯ ಕೊತ್ಬಾಳ, ಪರಮೇಶಪ್ಪ ಕೊಪ್ಪಳ, ರಾಜು ಶೆಟ್ಟರ, ಶಿವು ಕೊಣಂಗಿ ಮೊದಲಾದ ಪುರ ಪ್ರಮುಖರು ಉಪಸ್ಥಿತರಿದ್ದರು.
ಮಂಗಳವಾರ 10 ಜನವರೀ 2012
ಅನುಭಾವಿಗಳ ಅಮೃತ ಸಿಂಚನ
ಈ ಶ್ರೀಮಠದ ಜಾತ್ರೆ ಬಸವಪಟ್ಟ, ಬನದ ಹುಣ್ಣಿಮೆ ದಿವಸ ಕಳಸಾರೋಹಣ, ಅಡ್ಡಪಲ್ಲಕ್ಕಿ ಮಹೋತ್ಸವ, ದೇವಿಗೆ ಊಡಿ ತುಂಬುವ ಕಾರ್ಯಕ್ರಮ, ಲಘುರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.
ಶ್ರೀ ಮ. ನಿ. ಪ್ರ. ಜ. ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ ಅನುಭಾವಿಗಳ ಅಮೃತವಾಣಿಯ ಚಿಂತನಗೋಷ್ಠಿ ಕಾರ್ಯಕ್ರಮ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಿಂದೆ ಒಂದು ಜಾತ್ರಾ ಮಹೋತ್ಸವದಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಡಾ.ಚಂದ್ರಶೇಖರ ಕಂಬಾರ ರವರು ತಮ್ಮ ಅಮೃತವಾಣಿಯಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳುತ್ತಾ ತಾಯಿಯು ತನ್ನ ಮಗ ಹೇಗಿರಬೇಕೆಂದು ಅಪೇಕ್ಷಿಸುತ್ತಾಳೆಂದರೆ ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ನೀನಾಗು ಚಾಣಕ್ಯ, ಎಂಬ ನುಡಿವಾಣಿಯನ್ನು ತಾಯಂದಿರಿಗೆ ತಮ್ಮ ಮಕ್ಕಳನ್ನು ಹೀಗೆ ಬೆಳೆಸಬೇಕೆಂದು ಅನುಭವಿಯ ವಾಣಿಯನ್ನು ನಿಡಿದರು.
ಹಾಗೆಯೇ ಒಂದು ಸಲ ಜಾತ್ರಾ ಮಹೋತ್ಸವದ ಸಮಯದಲ್ಲಿ ರಾಮ್ ದೇವ್ ಗುರೂಜಿ ಬಂದಾಗ ಈ ಜಾತ್ರಾ ಮಹೋತ್ಸವದ ಜನಸಾಗರವನ್ನು ಕಂಡು ಆಶ್ಚರ್ಯಚಕಿತರಾಗಿ ಹೃದಯತುಂಬಿ ನುಡಿದಂತಹ ಮಾತುಗಳೆಂದರೆ ಉತ್ತರ ಹಿಂದೂಸ್ಥಾನದಲ್ಲಿ ೧೨ ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಈ ಜನಸಾಗರವನ್ನು ಕಾಣುತ್ತೇವೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಈ ಕೊಪ್ಪಳ ಜಾತ್ರಾ ಮಹೋತ್ಸವದ ಜನಸಾಗರವನ್ನು ನೋಡಿದರೆ ನನಗೆ ಆನಂದಾಶ್ಚರ್ಯಗಳೊಂದಿಗೆ ಈ ಪೀಠದ ತಪಸ್ವಿಗಳ ಪುಣ್ಯದ ಫಲವೋ, ಈ ನಾಡ ಜನರು ಭಯ, ಭಕ್ತಿ, ಭಾವನೆಗಳೊಂದಿಗೆ ಈ ಪೀಠಕ್ಕೆ ನಡೆದುಕೊಳ್ಳುತ್ತಿದ್ದಾರೆ. ತಪಸ್ವಿಗಳ ತಪಸ್ಸಿನ ಫಲವೇ ಇದನ್ನೆಲ್ಲಾ ನಡೆಸುತ್ತದೆ.
ಹಿಂದಿನ ಜಾತ್ರಾ ಮಹೋತ್ಸವದಲ್ಲಿ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಬಂದಾಗ ಶ್ರೀ ಮಠವನ್ನು ಅಭಿನವ ಶ್ರೀಗಳೊಂದಿಗೆ ನೋಡುತ್ತಾ ನೋಡುತ್ತಾ ಈ ಮಠದ ಕಲ್ಲು ಕಲ್ಲಿನಲ್ಲಿಯೂ ಆಧ್ಯಾತ್ಮಿಕ ಯೋಗ ತಪಸ್ಸಿನ ಫಲವಿದೆ. ಇಲ್ಲಿ ಬೇಡಿ ಬಂದ ಭಕ್ತ ಸಮೂಹಕ್ಕೆ ಕಾಮಧೇನು, ಕಲ್ಪವೃಕ್ಷ ಈ ಮಠ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಮಠದ ಜಾತ್ರಾ ಮಹೋತ್ಸವ ಧರ್ಮ ಮತ್ತು ಭಕ್ತಿಯ ಪ್ರತೀಕವಾಗಿದೆ. ಈ ಜಾತ್ರೆ ಇಡೀ ಭಾರತ ದೇಶದ ಪ್ರಸಿದ್ದ ಜಾತ್ರೆಗಳಲ್ಲೊಂದಾಗಿದೆ. ತಪಸ್ವಿಗಳ ತಪಸ್ಸಿನಿಂದ ಪವಾಡ ಪುರುಷರು ಆದಂತಹ ಕರ್ತೃವಿನ ಆಶೀರ್ವಾದ ಈ ಪೀಠಕ್ಕಿದೆ. ಈ ಪೀಠಾಧಿಪತಿಗಳು ತಮ್ಮ ಕರುಣಾಹೃದಯದಿಂದ ಭಕ್ತರ ಮನಗೆದ್ದಿದ್ದಾರೆ. ಈ ನಾಡು ಭಕ್ತ ಭಕ್ತಿಯ ಜನಸಾಗರವಾಗಿದೆ. ಇಂತಹ ಭಕ್ತಿ ಕೇಂದ್ರಗಳಲ್ಲಿ ತಿರುಪತಿ, ಧರ್ಮಸ್ಥಳ ಸನ್ನಿಧಾನ ಕ್ಷೇತ್ರಗಳಾಗಿವೆ. ಅದರಲ್ಲಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರನ ಕ್ಷೇತ್ರವು ಪವಿತ್ರ ತಾಣವೊಂದಾಗಿದೆ ಎಂದು ಪದ್ಮಭೂಷಣ, ಪದ್ಮಶ್ರೀ ಡಾ. ವಿರೇಂದ್ರ ಹೆಗ್ಗಡೆಯವರು ಹೇಳಿದಾಗ ಜನಸ್ಥೋಮ ಚಪ್ಪಾಳೆಗಳೊಂದಿಗೆ ಸ್ವಾಗತಿಸಿತು.
ಇಷ್ಟೆಲ್ಲಾ ಪ್ರಸಿದ್ದಿಗೆ ಭಕ್ತಿ ಕೇಂದ್ರವಾಗಿ ನಡೆಯಲು ಆರೋಗ್ಯ, ಅನ್ನ, ಶೈಕ್ಷಣಿಕ, ಆದ್ಯಾತ್ಮ, ಅಂಧ ಅಂಗವಿಕಲರಿಗೆ ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ತಾಯ್‌ಹೃದಯದಿಂದ ಬರಮಾಡಿಕೊಳ್ಳುವ ಪೀಠಾಧಿಪತಿಗಳ ನಡೆನುಡಿಗಳಿಂದ ಕೊಪ್ಪಳ ಶ್ರೀ ಗವಿಮಠ ಈ ನಾಡಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ.
ಲೇಖಕರು: ಶ್ರೀಮತಿ ಸರ್ವಮಂಗಳಾ ಜಿ. ಪಾಟೀಲ, ಹಲಗೇರಿ.ಶ್ರೀ ಕತೃವಿಗೆ ಅರ್ಪಣೆ
ಗವಿಯ ಸಿದ್ಧೇಶ ಬೇಗ ಬಾರೋ
ಪಾದವನೀಗ ತೋರಿರಯ್ಯ || ಪ ||
ಆದಿಯೋಳು ಶಿವನ ಅವತಾರ
ವೇದಾಗನಿದೊಡಿ ಪೂರ
ಸತ್ತ ಆಕಳು ಬದುಕಿಸಿದ ಧೀರ
ಧೀರ ಪಾರ ವೀರ
ವೇದಾಂತ ಸಾರದಿರೋ ಬಾರೋ || ೧ ||
ಅರಸನ ಭಕುತಿಗೆ ಒಲಿದು
ಅಂಬು ಜಾಡುವ ಕಳೆದು
ಸತ್ತ ಆಕಳು ಬದುಕಿಸಿ
ಆದಿ ದೇವನಾಗಿ ಮೆರೆದಿಹ
ಶಿವಯೋಗಿ ತಾನಾದ || ೨ ||
ಕೋಪಣಗಿರಿಯ ವಾಸ
೩೦ ಟ್ರ್ಯಾಕ್ಟರ್ ಕಲ್ಲು ಕಾಣಿಕೆ
ಕೊಪ್ಪಳ: ಕೊಪ್ಪಳದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಾ ಕೊಪ್ಪಳ ನಾಡಿನ ಉತ್ಸವವಾಗಿ ಜರುಗುತ್ತಿರುವುದು ಶ್ರೀಗವಿಮಠದ ವೈಶಿಷ್ಟತೆಗೆ ಸಾಕ್ಷಿಯಾಗಿದೆ. ಶ್ರೀ ಗವಿಮಠದ ಮಹಾದಾಸೋಹಕ್ಕೆ ಮಹಾಪೂರದಂತೆ ಕಾಣಿಕೆ, ದೇಣಿಗೆಗಳು ಹರಿದುಬರುತ್ತಿರುವುದು ಶ್ರೀಗವಿಮಠದ ಪ್ರಸಿದ್ಧಿಗೆ ಪ್ರೇರಕವಾಗಿದೆ. ಈ ವರ್ಷದ ಮಹಾದಾಸೋಹಕ್ಕೆ ಎಲ್ಲಾ ಸ್ವರೂಪದ ದಾನಗಳು ಬರುತ್ತಿವೆ. ಬರದ ನಡುವೆ ಬರಪೂರದಂತೆ ಜಾತ್ರೆಯ ದಾಸೋಹಕ್ಕೆ ಕಾಣಿಕೆಗಳು ಬರುತ್ತಿವೆ ಕೊಪ್ಪಳದ ವಡ್ಡರ ಸಮಾಜದ ಭಕ್ತರು ಮೆರವಣಗೆ ಮೂಲಕ ೩೦ ಟ್ರ್ಯಾಕ್ಟರ್ ಕಲ್ಲುಗಳನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಶ್ರೀ ಗವಿಮಠಕ್ಕೆ ಹರಿದುಬರುತ್ತಿರುವ ದವಸ ಧಾನ್ಯ ರೊಟ್ಟಿ ತರಕಾರಿ ಹಾಗೂ ಕುಂಬಳಕಾಯಿ
ಕೊಪ್ಪಳ: ಉತ್ತರ ಕರ್ನಾಟಕ ಭಾಗದ ಸಿದ್ಧಗಂಗೆಯೆಂದೇ ಖ್ಯಾತಿ ಪಡೆದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾ ದಾಸೋಹಕ್ಕಾಗಿ ಇಂದು ಸ್ಥಳೀಯ ಹಾಗೂ ಹೊರಗಿನ ಸದ್ಭಕ್ತರಿಂದ ದವಸಧಾನ್ಯ ಹಾಗೂ ರೊಟ್ಟಿ, ತರಕಾರಿಗಳ ಮಹಾಪೂರ ಹರಿದು ಬರುತ್ತಿದೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಆಟೋ ಚಾಲಕರ ಸಂಘದ ವತಿಯಿಂದ: ೧೭೫೦ ರೊಟ್ಟಿ, ೨ ಪಾಕೇಟು ಅಕ್ಕಿ, ಶ್ರೀ ಗಜಾನನ ಸೇವಾ ಸಮಿತಿ ಆಶ್ರಯ ಕಾಲೋನಿ ಹೂವಿನಾಳ ರಸ್ತೆಯ ಭಕ್ತರಿಂದ: ೩೧,೧೯೩.೦೦ ರೂಪಾಯಿ ಹಣ, ೧ ಕ್ವಿಂಟಾಲ್ ಅಕ್ಕಿ, ೨೫೦೦ ರೊಟ್ಟಿಗಳು, ಕಂದಕೂರ ಗ್ರಾಮಧ ಭಕ್ತರಿಂದ: ೭೦೦೧ ರೊಟ್ಟಿಗಳು, ಚಿಕ್ಕಬೊಮ್ಮನಾಳ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨೫ ಪಾಕೇಟು ದವಸಧಾನ್ಯಗಳು, ೧ ಪಾಕೇಟು ಅಕ್ಕಿ, ೨ ಕ್ವಿಂಟಾಲ್ ಮಾದಲಿ, ಕೊಳೂರು ಗ್ರಾಮದ ಭಕ್ತರಿಂದ: ೨ ಕ್ವಿಂಟಾಲ್ ಮಾದಲಿ, ೩ ಕ್ವಿಂಟಾಲ್ ಅಕ್ಕಿ, ೨ ಕ್ವಿಂಟಾಲ್ ಮೆಕ್ಕೆಜೋಳ, ೧ ಚೀಲ ಉಳ್ಳಾಗಡ್ಡಿ, ಯಾಪಲದಿನ್ನಿ ಗ್ರಾಮದ ಭಕ್ತರಿಂದ: ೨೫೦೦ ರೊಟ್ಟಿಗಳು, ಮಾಟಲದಿನ್ನಿ ಗ್ರಾಮದ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಪಾಕೇಟು ಅಕ್ಕಿ, ೧ ಪಾಕೇಟು ಈರುಳ್ಳಿ, ಮಸಬಹಂಚನಾಳ ಗ್ರಾಮದ ಭಕ್ತರಿಂದ: ೫೦೦೦ ರೊಟ್ಟಿಗಳು, ೬ ಪಾಕೇಟು ಅಕ್ಕಿ, ೨ ಪಾಕೇಟು ಈರುಳ್ಳಿ, ೨ ಪಾಕೇಟು ಜೋಳ, ೨ ಚೀಲ ಬದನೆಕಾಯಿ, ಕಲ್ಲತಾವರಗೇರಿ ಗ್ರಾಮದಿಂದ: ೩೦೦೦ ರೊಟ್ಟಿಗಳು, ಹೀರೇಸೂಳಿಕೇರಿ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨ ಚೀಲ ನೆಲ್ಲು, ಹ್ಯಾಟಿ ಗ್ರಾಮದ ಭಕ್ತರಿಂದ: ೩೫೦೦ ರೊಟ್ಟಿಗಳು, ೨೩ ಚೀಲ ದವಸಧಾನ್ಯಗಳು, ಬೈರನಾಯಕನ ಹಳ್ಳಿಯಿಂದ ೫೦೦೦ ರೊಟ್ಟಿ ೧೫ ಚೀಲ ದವಸಧಾನ್ಯ, ಬೆಳವನಾಳ ಗ್ರಾಮದಿಂದ ೭ ಚೀಲ ದವಸಧಾನ್ಯ, ಮಂಗಳೂರು ಗ್ರಾಮದ ಭಕ್ತರಿಂದ: ೮೦ ಚೀಲ ದವಸ ಧಾನ್ಯ, ೧೧೦೦೦ ರೊಟ್ಟಿ, ಬಿನ್ನಾಳ ಗ್ರಾಮದವರಿಂದ ೧೦೦೦೦ ರೊಟ್ಟಿ, ೪ ಚೀಲ ಉಳ್ಳಾಗಡ್ಡಿ, ೨ ಚೀಲ ಮೆಣಸಿನಕಾಯಿ, ಗೊಂಡಬಾಳ ಗ್ರಾಮಸ್ಥರಿಂದ ೬೦೦೦ ರೊಟ್ಟಿ ೧೦ ಚೀಲ ಕಾಳು ಕಡಿ, ೨ ಚೀಲ ಮೆಕ್ಕೆ ಜೋಳ, ೨ ಚೀಲ ಉಳ್ಳಾಗಡ್ಡಿ, ಅರಸಿಕೇರೆ ಗ್ರಾಮದಿಂದ ೪೦೦೦ ರೊಟ್ಟಿ, ೬ ಚೀಲ ಉಳ್ಳಾಗಡ್ಡಿ, ಹಿರೇಸಿಂದೋಗಿ ಗ್ರಾಮಸ್ಥರಿಂದ ೫೦೦೦ ರೊಟ್ಟಿ, ೨ ಪಾಕೀಟ ಅಕ್ಕಿ, ೩ ಪಾಕೀಟು ಮೆಕ್ಕೆಜೋಳ, ೩ ಗಾಡಿ ಉಸುಕು, ಕುಟುಗನಹಳ್ಳಿ ಗ್ರಾಮಸ್ಥರಿಂದ ೧೦ ಪಾಕೀಟ್ ಮೆಕ್ಕೆ ಜೋಳ, ೩ ಪಾಕೀಟ್ ದವಸ ಧಾನ್ಯ, ಯಲಮಗೇರಿ ಗ್ರಾಮದವರಿಂದ ೯ ಚೀಲ ದವಸ ಧಾನ್ಯ, ಕಾಮನೂರು ಗ್ರಾಮದವರಿಂದ ೧೦ ಚೀಲ ದವಸ ಧಾನ್ಯ, ಚನ್ನಪಟ್ಟನಹಳ್ಳಿ ಗ್ರಾಮದಿಂದ ೪ ಚೀಲ ಜೋಳ, ದೇವರಾಜ ಅರಸ ಕಾಲೋನಿ, ನಂದಿನಗರ, ಸಿದ್ದೇಶ್ವರ ಸರ್ಕಲ್ ಹಾಗೂ ಕವಲೂರು ಓಣಿ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಟ್ರ್ಯಾಕ್ಟರ್ ದವಸ ಧಾನ್ಯ, ಗುಡದಳ್ಳಿ ಗ್ರಾಮದ ಭಕ್ತರಿಂದ ೫ ಟ್ರ್ಯಾಕ್ಟರ್ ಕಟ್ಟಿಗಿ, ೬೬ ಚೀಲ ದವಸ ಧಾನ್ಯಗಳು, ಕುಡಗುಂಟಿ ಗ್ರಾಮದವರಿಂಧ ೬೦೦೦ ರೊಟ್ಟಿ, ೨ ಪಾಕೀಟ್ ಉಳ್ಳಾಗಡ್ಡಿ, ೨ ಟ್ರ್ಯಾಕ್ಟರ್ ಕಟ್ಟಿಗೆ, ೧೬೧೦೧ ರೂ ನಗದು ಕಾಣಿಕೆ, ತಳಕಲ್ ಗ್ರಾಮದವರಿಂದ ೧೦೦೦೦ ರೊಟ್ಟಿ, ೨ ಪಾಕೀಟ್ ಕಾಳು, ಕುಣಿಕೇರಿ ಗ್ರಾಮದಿಂಧ ೫೦೦೦ ರೊಟ್ಟಿ ೭೦ ಪಾಕೀಟ್ ದವಸಧಾನ್ಯ, ಉದಯಶೆಟ್ಟಿ ಕೊಪ್ಪಳ ಇವರಿಂದ ೫ ಪಾಕೀಟ್ ಅಕ್ಕಿ, ಹೀಗೆ ಶ್ರೀಗವಿಮಠಕ್ಕೆ ದಾಸೋಹಕ್ಕಾಗಿ ಸಾಗರೋಪಾದಿಯಲ್ಲಿ ದವಸಧಾನ್ಯಗಳು, ರೊಟ್ಟಿಗಳು, ಸಿಹಿಯಾದ ಮಾದಲಿ, ತರಕಾರಿಗಳು ಹರಿದುಬಂದಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
ದೊಡ್ಡ ಗಂಟೆ ಕಾಣಿಕೆ
ಕೊಪ್ಪಳ: ಶ್ರೀ ಗವಿಮಠಕ್ಕೆ ಕಲತಾವರಗೇರಿ ಗ್ರಾಮದ ಭಕ್ತರಾದ ಶ್ರೀ ಭರಮಣ್ಣ ವಿರುಪಣ್ಣ ಲಳಗಿ ಇವರು ೪೫ ಕೆ.ಜಿ ತೂಕವಿರುವ ಹಿತ್ತಾಳೆಯ ಗಂಟೆಯನ್ನು ಸುಮಾರು ೨೦,೦೦೦ ರೂಪಾಯಿ ವೆಚ್ಚದಲ್ಲಿ ತಯಾರಿಸಿ ಶ್ರೀಮಠಕ್ಕೆ ಕಾಣಿಕೆ ಅರ್ಪಿಸಿದರು. ಪೂಜ್ಯ ಶ್ರೀಗಳು ದಾನಿಗಳಿಗೆ ಆಶೀರ್ವದಿಸಿದರು.
ಆಕಾಶವಾಣಿಯಲ್ಲಿ ರಥೋತ್ಸವದ ವೀಕ್ಷಕ ವಿವರಣೆ
ಕೊಪ್ಪಳ : ದಿನಾಂಕ ೧೧-೦೧-೨೦೧೨ ರಂದು ಬುಧವಾರಂದು ಸಂಜೆ ಜರುಗುವ ರಥೋತ್ಸವದ ವೀಕ್ಷಕ ವಿವರಣೆಯನ್ನು ಹಾಗೂ ದಿನಾಂಕ ೧೨-೦೧-೨೦೧೨ ರಂದು ಸಂಜೆ ೪-೩೦ ಕ್ಕೆ ಬಳಗಾನೂರು ಪೂಜ್ಯ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ ಈ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆಯನ್ನು ಆಯಾ ದಿನಗಳಲ್ಲಿ ಮಧ್ಯಾಹ್ನ ೪-೩೦ ರಿಂದ ಸಂಜೆ ೬-೩೦ ರ ವರೆಗೇ ಹೊಸಪೇಟೆ ಆಕಾಶವಾಣಿಯು (ಎಫ್.ಎಂ. ಬ್ಯಾಂಡ್) ೧೦೦.೫ರ ಕಂಪನಾಂಕದ ಅಡಿಯಲ್ಲಿ ನೇರ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಕಲ್ಲು ಕಲ್ಲುಗಳಿಗೂ ಜೀವಸಲೆ
ಕೊಪ್ಪಳ: ಶ್ರೀಗವಿಮಠದ ಜಾತ್ರೆಗೆ ಇನ್ನು ಎರಡೇ ದಿನ ಬಾಕಿ ಇರುವಾಗ ಶ್ರೀಮಠವು ವಿದ್ಯೂತ್ ದೀಪಗಳಿಂದ ಸಿಂಗಾರಗೊಂಡು ಭಕ್ತರ ಕಣ್ಮನಗಳನ್ನು ತಣಿಸುತ್ತಲಿದೆ. ಶ್ರೀಮಠದ ಪ್ರತಿಯೊಂದು ಕಲ್ಲು ಕಲ್ಲುಗಳಿಗೂ ಜೀವಸಲೆ ಬಂದಂತೆ ಬಣ್ಣ ಬಣ್ಣದ ಚಿತ್ತಾರಗಳ ಚಲುವಿನಿಂದ ಕೂಡಿದ ಈ ವಿದ್ಯೂತ್ ದೀಪಗಳು ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತಲಿವೆ.
ಇದಕ್ಕೆ ಚಂದಾದಾರರಾಗಿ:
ಪೋಸ್ಟ್ಗಳು (Atom)

