ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಜನವರಿ 28, 2013

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯಗಳು,



ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇದೂವರೆಗೆ  ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ  ರೊಟ್ಟಿ , ಹೀರೆಕಾಸನಕಂಡಿ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು, ಹುಣಸಿಹಾಳ ಗ್ರಾಮದ ಸದ್ಭಕ್ತರಿಂದ ರೊಟ್ಟಿಗಳು, ಭಾನಾಪುರ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಹನುಮನಟ್ಟಿ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಸಿಹಿಬೂಂದಿ, ಗೋಸಲದೊಡ್ಡಿ ಗ್ರಾಮದ ಸದ್ಧಕ್ತರಿಂದ ದವಸ ಧಾನ್ಯಗಳು, ಹೊಸಳ್ಳಿ ಗ್ರಾಮದ ಸದ್ಧಕ್ತರಿಂದ ದವಸಧಾನ್ಯಗಳು,  ಟಣಕಣಕಲ್ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು ಹಾಗೂ ರೊಟ್ಟಿ , ದದೇಗಲ್,ಆಗೋಲಿ,ಚೆನ್ನಾಳ, ವಜ್ರಬಂಡಿ ಹಾಗೂ ಇಂದರಗಿ ಗ್ರಾಮದಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು, ನರೇಗಲ್ ಗ್ರಾಮದ ಸದ್ಭಕ್ತರಿಂದ ದವಸ ಧಾನ್ಯಗಳು ಹಾಗೂ ರೊಟ್ಟಿ, ಶ್ರೀಮಠದ ಮಹಾದಾಸೋಹಕ್ಕೆ ಹರಿದು ಬಂದಿವೆ. ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಸಾಗರೋಪಾಧಿಯಾಗಿ ರೊಟ್ಟಿ ಹಾಗೂ ದವಸ ಧಾನ್ಯಗಳು ಹರಿದು ಬರಲಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

ರೊಟ್ಟಿಗಳ ಸಪ್ಪಳ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ವಿಶೇಷತೆ ಎಂದರೆ ಮಹಾದಾಸೋಹ.          ದಿನಾಂಕ ೨೯-೦೧-೨೦೧೩  ರ ರಥೋತ್ಸವದ ದಿನದಿಂದ ಅಮವಾಸ್ಯೆಯ ತನಕ ನಿರಂತರವಾಗಿ ನಡೆಯಲಿರುವ ಮಹಾದಾಸೋಹ್ಕಾಗಿ ಜಿಲ್ಲೆಯದ್ಯಾಂತ ಭಕ್ತ ಜನರು  ತಮ್ಮ ಮನೆಮನೆಗಳಲ್ಲಿ ಹಾಗೂ 
ಹಳ್ಳಿಗಳಲ್ಲಿ ರೊಟ್ಟಿಗಳನ್ನು ಮಾಡಿಕೊಂಡು  ಶ್ರೀಮಠಕ್ಕ ಅರ್ಪಿಸುವ ತವಕದಲ್ಲಿದ್ದಾರೆ. ಈಗಾಗಲೇ ಭಾರೀ ಸಂಖ್ಯೆಯಷ್ಟು ರೊಟ್ಟಿ ಸಂಗ್ರಹವಾಗಿವೆ. ಇನ್ನೆರಡ್ಮೂರು ದಿನಗಳಲ್ಲಿ ರೊಟ್ಟಿಗಳೆಲ್ಲ ಮೆರವಣಿಗೆಯ ಸಪ್ಪಳದೊಂದಿಗೆ ಶ್ರೀಗವಿಮಠಕ್ಕೆ ಸಮರ್ಪಣೆಯಾಗಲಿವೆ. 

ಎತ್ತಿನ ಬಂಡಿಗಳ ಅಬ್ಬರ

ಕೊಪ್ಪಳ ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ದಿನದಿಂದ ದಿನಕ್ಕೆ  ಭಕ್ತರ ಆಗಮನದಿಂದ ರಂಗು ಪಡೆದುಕೊಳ್ಳುತ್ತಿದೆ. ಪ್ರತಿ ದಿನ  ಮಹಾದಾಸೋಹಕ್ಕಾಗಿ ವಿವಿಧ ಗ್ರಾಮಗಳ ಭಕ್ತರು ಎತ್ತಿನ ಬಂಡಿಯಲ್ಲಿ ದವಸಧಾನ್ಯಗಳ  ಮಹಾಪುರವನ್ನೇ ತರುತ್ತಿದ್ದಾರೆ. ಬಂಡಿಯೊಳಗೆ ದವಸಧಾನ್ಯಗಳನ್ನು ತುಂಬಿಕೊಂಡು ರೊಟ್ಟಿ ತರಕಾರಿಗಳ ಸಮೇತ ಎತ್ತುಗಳಿಗೆ ಅಲಂಕಾರವನ್ನು ಮಾಡಿಕೊಂಡು  ಗೆಜ್ಜೆಯನ್ನು ಕಟ್ಟಿ ಶೃಂಗರಿಸಿಕೊಂಡು ಉತ್ಸಾಹದಿಂದ ಅಜ್ಜನ ಜಾತ್ರೆಯ ದಾಸೋಹಕ್ಕೆ ದಾನವನ್ನು ಕೊಡುತ್ತಿರುವದು ಶ್ರೀಮಠದ ಮೇಲಿನ ಭಕ್ತಿಯನ್ನು ತೋರಿಸುತ್ತಿದೆ. ಆಧುನಿಕತೆಯ ಭರಾಟೆಯಲ್ಲಿಯೂ ಟ್ರ್ಯಾಕ್ಟರ, ಟಾಂಟಾಂನ್ನುಕೈಬಿಟ್ಟು ನೂರಾರು ಎತ್ತಿನ ಬಂಡಿಗಳಲ್ಲಿ ಬರುತ್ತಿರುವದು ಜಾತ್ರೆಯ ವೈಶಿಷ್ಟ್ಯತೆಗೆ ಕಾರಣವಾಗಿದೆ.  


ಕಾಮೆಂಟ್‌ಗಳಿಲ್ಲ: