http://kannadanet.blogspot.in/2013/01/blog-post_7665.html
ದಾಸೋಹ ಅಂಗಳಕ್ಕೆ ಕೊಂಡೊಯ್ಯುವ ಕಟ್ಟಿಗೆಗಳು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ಸಮೀಪಿಸುತ್ತಿದ್ದಂತೆ ಶ್ರೀಮಠದಲ್ಲಿನ ಚಟುವಟಿಕೆಗಳು ಆರಂಭಗೊಂಡಿ. ಈಗಾಗಲೇ ಶ್ರೀಮಠದ ಆವರಣ ಶೃಂಗಾರಗೊಳ್ಳುತ್ತಲಿದ್ದೂ ಬೃಹತ್ ದಾಸೋಹ ಮಂಟಪವು ಹಾಗೂ ಧಾರ್ಮಿಕ ಚಿಂತನ ಮಂತನಗಳು ನಡೆಯುವ ಕೈಲಾಸ ಮಂಟಪವು ಸಿದ್ಧವಾಗಿ ಪರಿಪೂರ್ಣವಾಗುವ ಹಂತದಲ್ಲಿದೆ. ಇಂದು ಶ್ರೀಗವಿಮಠದ ಮಹಾದಾಸೋಹದ ಪ್ರಸಾದ ತಯಾರಿಕೆಗಾಗಿ ಬಳಕೆಯಾಗುವ ದೊಡ್ಡ ದೊಡ್ಡ ಕೊರೆದ ಕಟ್ಟಿಗೆಗಳ ತುಂಡುಗಳನ್ನು ಶ್ರೀಮಠದ ವಿದ್ಯಾರ್ಥಿಗಳು ಬೃಹತ್ ದಾಸೋಹಮಂಟಪಗೊಳಗೆ ಕೊಂಡೊಯ್ಯುವ ಕಾರ್ಯ ವೇಗವಾಗಿ ಜರುಗಿತು. ಪೂಜ್ಯ ಶ್ರೀಗಳಾದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಸ್ವತ: ಕೆಲಸದಲ್ಲಿ ತೊಡಗಿಸಿಕೊಂಡು ಮುತುವರ್ಜಿ ವಹಿಸಿ ಕಾರ್ಯ ಮಾಡುವದು ಶ್ರೀಮಠದಲ್ಲಿ ಕಂಡುಬಂದಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ