http://kannadanet.blogspot.in/2014/01/blog-post_3398.html
ಅಜ್ಜನ ಜಾತ್ರೆ... ಅಕ್ಷಯ ಪಾತ್ರೆ
ಅಜ್ಜನ ಜಾತ್ರೆ... ಅಕ್ಷಯ ಪಾತ್ರೆ
ಧಾರ್ಮಿಕ ಚಿಂತನೆಯ ಜ್ಞಾನದ ಯಾತ್ರೆ
ಹಾದು! ಎಲ್ಲಾ ಜಾತ್ರೆಗಳಂತೆ ನಮ್ಮೂರ ಅಜ್ಜನ ಜಾತ್ರೆ ಹಾಗಲ್ಲಾ. ಎಲ್ಲವನ್ನು ಎಲ್ಲರನ್ನು ಓರೆಗಲ್ಲಿಗಚ್ಚುವಯಾತ್ರೆ. ಎಷ್ಟು ಪರಮಾಮರ್ಷಿಸಿದರು. ಅಳೆದು, ತೂಗಿದರು ಸಿಗುವುದು ಒಂದೇ ಅದೇ ದೈವಶಕ್ತಿ. ದೈತ್ಯಭಕ್ತಿ.
ಇತಿಹಾಸ ನೆನಪಿಸುವ ಜಾತ್ರೆಯ ವೈಭವ. ಕಣ್ಣರಳಿಸಿದಷ್ಟು ಕಡೆಯೆಲ್ಲಾ ಜನಸಾಗರ, ದಿನವಿಡಿ ಧರ್ಮಜಾಗೃತಿಯ ಧಾರ್ಮಿಕ ಚಿಂತನೆ, ಸಾಮರಸ್ಯದ ಬದುಕಿಗೆ ಜ್ಯಾನಿಗಳಿಂದ ಜ್ಞಾನದ ಭೋದನೆ, ವೈವಿದ್ಯಮಯ ಕಾರ್ಯಕ್ರಮಗಳ ಜೊತೆಯಲಿ ಸಾಂಸ್ಕೃತಿಕ ವೈಭವ, ದಾಸೋಹದ ಜೊತೆ ಜೊತೆಯಲಿ ಜ್ಞಾನ, ಅಕ್ಷರದ ದಾಸೋಹ. ತೀರದ ದಾಹದ ನಡುವೆ ಮನೋರಂಜನೆ ಕಾರ್ಯಕ್ರಮ. ನಾಟಕ, ಜೋಕಾಲಿ, ಅಲಂಕೃತ ಜಾತ್ರೆಯ ಮಾರಾಟಮಳಿಗೆಗಳನ್ನು ನೋಡುವುದೇ ಒಂದು ಮೇರಗು. ಮೇಳಗಳ ವೈಭವ ಎಲ್ಲವನ್ನು ಓಟ್ಟಿಗೆ ಓಂದೇಡೆ ನೋಡಿದಾಗ ಇದು ನನ್ನೂರು ಕೊಪಣಾಚಲ ‘ಕೊಪ್ಪಳ’ ವೇ ಎಂದು ಆಶ್ಚರ್ಯ ಪಟ್ಟದ್ದು ಊಂಟು. ದಕ್ಷಿಣ ಭಾರತದ ಕುಂಬಮೇಳವೆಂದೆ ಪ್ರಸಿದ್ಧಿ ಪಡೆದ ಈ ಜಾತ್ರೆ ಪ್ರತಿ ವರ್ಷ ಹೊಸತನದೊಂದಿಗೆ ವಿಶೇಷ ಆಕರ್ಷಣೆಯೊಂದಿಗೆ ಎಲ್ಲರನ್ನು ಕೈಬಿಸಿ ಕರೆಯುತ್ತಿದೆ. ಸಮಗ್ರ ಹಬ್ಬಗಳ ಒಗ್ಗಟ್ಟೆ ನಮ್ಮೂರ ಜಾತ್ರೆಯ ಕಟ್ಟು, ನಿಗಂಟು. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಹಾಗಾಗೀ ಅಜ್ಜನ ಜಾತ್ರೆ ಬೇಡಿದನ್ನು ನೀಡುವ ಅಕ್ಷಯ ಪಾತ್ರೆ...
ಯುಗದ ದಾರ್ಶನಿಕ: ೧೮ ನೇ ಪೀಠಾಧೀಶರಾದ ಸಂಸ್ಥಾನ ಗವಿಮಠದ ಅಭಿನವಗವಿಸಿದ್ದೇಶ್ವರ ಮಹಾಸ್ವಾಮಿಗಳು ಆರಂಭದಿಂದಲೂ ಭಕ್ತಾಧಿಗಳ ನಿರೀಕ್ಷೆಗೂ ಮೀರಿ ಮಠಕಟ್ಟುವ ನಿಟ್ಟಿನಲ್ಲಿ ಸಾಗಿರುವ ಹಾದಿ ಬಹುದೊಡ್ಡ ಸಾಧನೆ. ಅದರಲ್ಲೂ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದೇ ನೆಲೆಗಟ್ಟಿನಲ್ಲಿ ಕೊಂಡೋಯ್ಯುತ್ತಿರುವುದು ಅದ್ಭುತವಾದದ್ದು. ಅವರ ಈ ಚಿಕ್ಕ ವಯಸ್ಸಿನಲ್ಲಿಯೇ ಅವರು ಬೆಳೆಸಿಕೊಂಡ ವಿಶಾಲತೇ, ಅಪ್ರತಿಮವಿಚಾರ, ಜ್ಞಾನ ಅತ್ಯಂತ ಹಿರಿಯರಿಂದ ಚಿಕ್ಕವರಿಗೂ ಮುದುನಿಡುವ ಹಿತನುಡಿಗಳು ಮಾದರಿಯವಾದುವು. ಎಲ್ಲರಲ್ಲೂ ಗೌರವ ತರುವಂತ ಅವರ ನಡೆನುಡಿ. ನಡೆದಾಡುವ ದೇವರು ಈ ಯುಗದ ದಾರ್ಶನಿಕ, ದಾನಧರ್ಮದ ಚಿಂತಾಮಣಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಎಂದರೆ ತಪ್ಪಾಗಲಾರದು.
ಅಕ್ಷರ ದಾಸೋಹ: ಪ್ರತಿ ಅಮವಾಸ್ಯೆಯು ಹಲವು ಸಮಸ್ಯೆಗಳನ್ನು ಹೊತ್ತುಬರುವ ಭಕ್ತಾಧಿಗಳಿಗೆ ಸ್ವಾಮಿಜೀಯವರಿಂದ ಸಾಂತ್ವಾನ, ಸಮಾಧಾನದ ಹಾಗೂ ಸರಳ ಪರಿಹಾರ ಹಾಗೂ ಆಶೀರ್ವಾದ ನಂತರ ಸಂಜೆ ಬೆಳಕಿನೆಡೆ ಕಾರ್ಯಕ್ರಮದ ಮೂಲಕ ಅಕ್ಷರ ದಾಸೋಹವು ಸಣ್ಣ ಚಿಂತನೆಯು ಹೌದು. ಅದು ಈಗ ಜಾತ್ರೆಯಲ್ಲಿ ಎಲ್ಲ ಭಾಗದ ಜನತೆಗೂ ಎಲ್ಲರಿಗೂ ಅನ್ವಯವಾಗುವ "ಅಕ್ಷರ ದಾಸೋಹ" ಚಿಂತಕರ, ಶರಣರ ಹಿತನುಡಿ, ಹಿತವಚನಗಳು, ಅಗಮ್ಯ.. ಅಗೋಚರ.. ಅಪ್ರತಿಮ.. ಅದರ ಅಗಾದತೆಯನ್ನು ಅಕ್ಷರದಲ್ಲಿಡಿದಿಡುವುದೇ ಅಸಾಧ್ಯ. ಪ್ರತಿ ಜಾತ್ರೆಯನ್ನು ಒಬ್ಬೊಬ್ಬ ವಿಶೇಷ ಆಹ್ವಾನಿತರಿಂದ ಆರಂಭಗೊಳಿಸಿ ಅಷ್ಟೇ ಅಚ್ಚುಕಟ್ಟಾಗಿ ನಡೆಸುವ ಮೂಲಕ ಈಡೀ ರಾಷ್ಟ್ರ ಹಾಗೂ ರಾಜ್ಯದ ಗಮನ ಸೆಳೆದಿರುವ ನಮ್ಮಯ ಈ ಜಾತ್ರೆಯ ಹೆಮ್ಮೆ.
ದಾಸೋಹ: ಆರಂಭದಿಂದ ತಿಂಗಳಾಂತ್ಯದವರೆಗೂ ನಡೆದರೂ ನಿಗದ ಜಾತ್ರೆ ಉತ್ಸಾಹ, ಮುಗಿಯದ ದಾಸೋಹ. ದಿನಕ್ಕೊಂದು ರುಚಿರುಚಿಯಾದ ಬೋರಿ ಭೋಜನ. ಲಕ್ಷಾಂತರ ಜನತೆಗೆ ಒಂದೇ ಸೂರಿನಡಿ ಅಚ್ಚುಕಟ್ಟಾದ ಶಿಸ್ತುಬದ್ಧ ಊಟದ ವ್ಯವಸ್ಥೆಗೆ ಪ್ರವಾಸಿಗರನ್ನು ಹುಬ್ಬೆರಿಸುವಂತೆ ಮಾಡಿದೆ. ಉತ್ತರ ಕರ್ನಾಟಕ ರಸವತ್ತಾದ ಊಟ, ಬಗೆಬಗೆಯ ಮೃಷ್ಟಾನ್ನಬೋಜನ ಯಾರಿಗೂ ಹಿಡಿಸದಿರದು. ರೊಟ್ಟಿ, ಚಟ್ನಿ, ಪಲ್ಯೆ, ವಿಧವಿಧದ ತಿಂಡಿ, ತಿನಿಸು ಬಾಯಲ್ಲಿ ನೀರೊರಿಸುತ್ತೆ. ಭಕ್ತಾದಿಗಳಿಗೆ ಹಾಗಾಗ ಹಿತವಚನಗಳ ಸಿಂಚನ. ಪ್ರಸಾದದ ಮಹತ್ವ, ಪ್ರತಿಅಗುಳಿನ ಪರಿಶ್ರಮ, ಹಾಗೇಯೇ ಎಲ್ಲರ ಶ್ರಮವೂ ಅಲ್ಲಿಯ ದ್ವನಿವರ್ಧಕಗಳ ಮೂಲಕ ಜನತೆಗೆ ನೆನಪಿಸಲಾಗುತ್ತಿರುತ್ತದೆ.
ದೀಪಾಲಂಕಾರದಿಂದ ಜಗಮಗಿಸುವ ಮಠ, ಎಲ್ಲದರಲ್ಲೂ ಈಗಿನ ಜನಕ್ಕೆ ಹೊಂದಿಕೊಳ್ಳುವಂತ ವೈಜ್ಞಾನಿಕ, ತಾಂತ್ರಿಕತೆಯ ಸ್ಪರ್ಷದ ಮೂಲಕ ಜಾತ್ರೆ ವಿಜ್ರಂಭಣೆಗೆ ಮತ್ತಷ್ಟು ಮೆರಗು ನೀಡಲಾಗುತ್ತಿದೆ. ಇಡೀ ಕ್ಷೇತ್ರವೇ ಜಾತ್ರೆಯಲ್ಲಿ ತಲ್ಲಿನವಾಗಿದ್ದು ಎಲ್ಲರೂ ನಿಶ್ಚಿಂತೆ, ನಿಷ್ಕಲ್ಮಶದಿಂದ ಸೌಹಾರ್ದಯುತವಾಗಿ ಒಂದೇಡೆ ಸೇರಿ ಆನಂದಿಸುವ ಆ ಕ್ಷಣ ಸ್ವರ್ಗಕ್ಕೆ ಸಮಾನ॒
ಭಣ್ಣಿಸಿದಷ್ಟು ಮುಗಿಯದ ನಮ್ಮಯ ಅಜ್ಜನ ಜಾತ್ರೆ ಗವಿಮಠ ಸ್ವರ್ಗದ ಪಾತ್ರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ