ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಶುಕ್ರವಾರ, ಜನವರಿ 17, 2014

ಗವಿಮಠದಿಂದ ನೇರಪ್ರಸಾರ

http://gavimathkoppal.com/live.html

ಮಹಾ ರಥೋತ್ಸವ ಸಾಯಂಕಾಲ ೫ ಗಂಟೆಗೆ- ಇನ್ನಿತರ ಕಾರ್ಯಕ್ರಮಗಳ ವಿವರ

ಮಹಾ ರಥೋತ್ಸವ ಸಾಯಂಕಾಲ ೫ ಗಂಟೆಗೆ- ಇನ್ನಿತರ ಕಾರ್ಯಕ್ರಮಗಳ ವಿವರ

ಮಹಾರಥೋತ್ಸವ, ಅನುಭಾವಿಗಳ ಅಮೃತ- ಚಿಂತನ ಗೋಷ್ಠಿ ಹಾಗೂ ಸಂಗೀತ 


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ ದಿನಾಂಕ ೧೮-೦೧-೨೦೧೪ ರಂದು ಶನಿವಾರ ಮಹಾ ರಥೋತ್ಸವ ಸಾಯಂಕಾಲ  ೫ ಗಂಟೆಗೆ ಜರುಗುತ್ತದೆ. ಮುಂಡರಗಿ  ಪೂಜ್ಯರಾದ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಗಳು ರಥೋತ್ಸವಕ್ಕೆ ಚಾಲನೆ ನೀಡುವರು. ಅಂದು ಸಾಯಂಕಾಲ ೬-೩೦ಕ್ಕೆ ಶ್ರೀಗವಿಮಠದ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ- ಚಿಂತನ ಗೋಷ್ಠಿ ಜರುಗಲಿದೆ. ಸಾನಿಧ್ಯವನ್ನು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಮೂರುಸಾವಿರ ಮಠ ಹುಬ್ಬಳ್ಳಿ,  ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಕಾಗಿನೆಲೆ ಕನಕ ಗುರು ಪೀಠ ತಿಂಥಿಣಿ ಬ್ರಿಜ್, ಶ್ರೀಷ.ಬ್ರ. ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು iದ್ದಾನೀಶ್ವರ ಹಿರೇಮಠ ಕುಷ್ಟಗಿ, ಶ್ರೀಪರಮಪುಜ್ಯ ಸದ್ಗುರು ಸಂಪೂರ್ಣಾನಂದ ಮಹಾಸ್ವಾಮಿಗಳು ಇಬ್ರಾಹಿಂಪೂರ ವಹಿಸಲಿದ್ದಾರೆ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ನೇರ್ತೃತ್ವದಲ್ಲಿ ಈ ಎಲ್ಲ ಕಾರ್ಯಕ್ರಮಗಳು ಜರುಗುತ್ತವೆ. ಜೊತೆಗೆ  ಶ್ರೀಬಾಪು ಪದ್ಮನಾಭ್, ಹರಿಹರ ಹಾಗೂ ವೃಂದದವರಿಂದ ಸಂಗೀತ ಕಾರ್ಯಕ್ರಮ, ಸದಾಶಿವಪಾಟೀಲ ಕೊಪ್ಪಳ ಇವರಿಂದ ಸುಗಮ ಸಂಗೀತವಿರುತ್ತದೆ. 

ದಿನಾಂಕ ೧೮-೦೧-೨೦೧೪ ರಂದು ಶನಿವಾರ ಮಧ್ಯಾಹ್ನ ೧ ಗಂಟೆಗೆ ಡಾಲ ಪಟಾ ( ಕತ್ತಿ ವರಸೆ)
ಕೊಪ್ಪಳ :  ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ ರಥೋತ್ಸವ ದಿನದಂದು ದಿನಾಂಕ ೧೮-೦೧-೨೦೧೪ ರಂದು ಶನಿವಾರ ಶ್ರೀಗವಿಮಠದ ಆವರಣದಲ್ಲಿ ಮಧ್ಯಾಹ್ನ ೧ ಗಂಟೆಗೆ ಡಾಲ ಪಟಾ ( ಕತ್ತಿ ವರಸೆ) ಎಂಬ ರೋಚಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಶ್ರೀಮಲ್ಲಿಕಾರ್ಜುನ ಅಲೆಮಾರಿ ಸಂಘ, ಹುಬ್ಬಳ್ಳಿ ಈ ಸಾಹಸ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಕಾರಣ ಭಕ್ತಾಧಿಗಳು ಆಗಮಿಸಿ ಈ  ಕಲೆಗೆ ಪ್ರೋತ್ಸಾಹಿಸಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗಾಗಿ ವಿಜಯಕುಮಾರ ಕವಲೂರ ಮೊಬೈಲ್ ಸಂಖ್ಯೆ ೯೭೪೨೧೬೧೭೧೦ .

ವೆಬ್‌ಸೆಟ್‌ನಲ್ಲಿ ಜಾತ್ರಾ ನೇರ ಪ್ರಸಾರ
ಕೊಪ್ಪಳ :  ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ರಥೋತ್ಸವ ಹಾಗೂ ಇತರ ಕಾರ್ಯಕ್ರಮಗಳನ್ನು ದಿನಾಂಕ ೧೮-೦೧-೨೦೧೪ ರ  ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವರೆಗೂ gavimathkoppal.com   ವೆಬ್‌ಸೆಟ್‌ನಲ್ಲಿ ನೇರಪ್ರಸಾರವನ್ನು ಮಾಡಲಾಗುತ್ತದೆ.  ದಿನಾಂಕ  ೧೯ ಹಾಗೂ ೨೦ ರಂದು ಸಹ  ಕೈಲಾಸ ಮಂಟಪದಲ್ಲಿ ಜರುಗುವ  ಎಲ್ಲ  ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ. ಕಳೆದ ವರ್ಷ ೧೭ ರಾಷ್ಟ್ರಗಳಲ್ಲಿ ಭಕ್ತಾಧಿಗಳು ಈ ನೇರ ಪ್ರಸಾರ ವೀಕ್ಷಿಸಿದ್ದಾರೆ. ಈ ವರ್ಷವು ನೇರಪ್ರಸಾರವನ್ನು ಮಾಡಲಾಗುತ್ತದೆಂದು ವೆಬ್‌ಸಟ್ ರೂವಾರಿ  ಮಂಜುನಾಥ ಹುಲ್ಲತ್ತಿ ತಿಳಿಸಿದ್ದಾರೆ. 

ಅಜ್ಜನ ಜಾತ್ರೆ... ಅಕ್ಷಯ ಪಾತ್ರೆ

http://kannadanet.blogspot.in/2014/01/blog-post_3398.html

ಅಜ್ಜನ ಜಾತ್ರೆ... ಅಕ್ಷಯ ಪಾತ್ರೆ

ಅಜ್ಜನ ಜಾತ್ರೆ... ಅಕ್ಷಯ ಪಾತ್ರೆ 
ಧಾರ್ಮಿಕ ಚಿಂತನೆಯ ಜ್ಞಾನದ ಯಾತ್ರೆ 

ಹಾದು! ಎಲ್ಲಾ ಜಾತ್ರೆಗಳಂತೆ ನಮ್ಮೂರ ಅಜ್ಜನ ಜಾತ್ರೆ ಹಾಗಲ್ಲಾ. ಎಲ್ಲವನ್ನು ಎಲ್ಲರನ್ನು ಓರೆಗಲ್ಲಿಗಚ್ಚುವಯಾತ್ರೆ. ಎಷ್ಟು ಪರಮಾಮರ್ಷಿಸಿದರು. ಅಳೆದು, ತೂಗಿದರು ಸಿಗುವುದು ಒಂದೇ ಅದೇ ದೈವಶಕ್ತಿ. ದೈತ್ಯಭಕ್ತಿ.
ಇತಿಹಾಸ ನೆನಪಿಸುವ ಜಾತ್ರೆಯ ವೈಭವ. ಕಣ್ಣರಳಿಸಿದಷ್ಟು ಕಡೆಯೆಲ್ಲಾ ಜನಸಾಗರ, ದಿನವಿಡಿ ಧರ್ಮಜಾಗೃತಿಯ ಧಾರ್ಮಿಕ ಚಿಂತನೆ, ಸಾಮರಸ್ಯದ ಬದುಕಿಗೆ ಜ್ಯಾನಿಗಳಿಂದ ಜ್ಞಾನದ ಭೋದನೆ, ವೈವಿದ್ಯಮಯ ಕಾರ್ಯಕ್ರಮಗಳ ಜೊತೆಯಲಿ ಸಾಂಸ್ಕೃತಿಕ ವೈಭವ, ದಾಸೋಹದ ಜೊತೆ ಜೊತೆಯಲಿ ಜ್ಞಾನ, ಅಕ್ಷರದ ದಾಸೋಹ. ತೀರದ ದಾಹದ ನಡುವೆ ಮನೋರಂಜನೆ ಕಾರ್ಯಕ್ರಮ. ನಾಟಕ, ಜೋಕಾಲಿ, ಅಲಂಕೃತ ಜಾತ್ರೆಯ ಮಾರಾಟಮಳಿಗೆಗಳನ್ನು ನೋಡುವುದೇ ಒಂದು ಮೇರಗು. ಮೇಳಗಳ ವೈಭವ ಎಲ್ಲವನ್ನು ಓಟ್ಟಿಗೆ ಓಂದೇಡೆ ನೋಡಿದಾಗ ಇದು ನನ್ನೂರು ಕೊಪಣಾಚಲ ‘ಕೊಪ್ಪಳ’ ವೇ ಎಂದು ಆಶ್ಚರ್ಯ ಪಟ್ಟದ್ದು ಊಂಟು. ದಕ್ಷಿಣ ಭಾರತದ ಕುಂಬಮೇಳವೆಂದೆ ಪ್ರಸಿದ್ಧಿ ಪಡೆದ ಈ ಜಾತ್ರೆ ಪ್ರತಿ ವರ್ಷ ಹೊಸತನದೊಂದಿಗೆ ವಿಶೇಷ ಆಕರ್ಷಣೆಯೊಂದಿಗೆ ಎಲ್ಲರನ್ನು ಕೈಬಿಸಿ ಕರೆಯುತ್ತಿದೆ. ಸಮಗ್ರ ಹಬ್ಬಗಳ ಒಗ್ಗಟ್ಟೆ ನಮ್ಮೂರ ಜಾತ್ರೆಯ ಕಟ್ಟು, ನಿಗಂಟು. ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಹಾಗಾಗೀ ಅಜ್ಜನ ಜಾತ್ರೆ ಬೇಡಿದನ್ನು ನೀಡುವ ಅಕ್ಷಯ ಪಾತ್ರೆ...
ಯುಗದ ದಾರ್ಶನಿಕ: ೧೮ ನೇ ಪೀಠಾಧೀಶರಾದ ಸಂಸ್ಥಾನ ಗವಿಮಠದ ಅಭಿನವಗವಿಸಿದ್ದೇಶ್ವರ ಮಹಾಸ್ವಾಮಿಗಳು ಆರಂಭದಿಂದಲೂ ಭಕ್ತಾಧಿಗಳ ನಿರೀಕ್ಷೆಗೂ ಮೀರಿ ಮಠಕಟ್ಟುವ ನಿಟ್ಟಿನಲ್ಲಿ ಸಾಗಿರುವ ಹಾದಿ ಬಹುದೊಡ್ಡ ಸಾಧನೆ. ಅದರಲ್ಲೂ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದೇ ನೆಲೆಗಟ್ಟಿನಲ್ಲಿ ಕೊಂಡೋಯ್ಯುತ್ತಿರುವುದು ಅದ್ಭುತವಾದದ್ದು. ಅವರ ಈ ಚಿಕ್ಕ ವಯಸ್ಸಿನಲ್ಲಿಯೇ ಅವರು ಬೆಳೆಸಿಕೊಂಡ ವಿಶಾಲತೇ, ಅಪ್ರತಿಮವಿಚಾರ, ಜ್ಞಾನ ಅತ್ಯಂತ ಹಿರಿಯರಿಂದ ಚಿಕ್ಕವರಿಗೂ ಮುದುನಿಡುವ ಹಿತನುಡಿಗಳು ಮಾದರಿಯವಾದುವು. ಎಲ್ಲರಲ್ಲೂ ಗೌರವ ತರುವಂತ ಅವರ ನಡೆನುಡಿ. ನಡೆದಾಡುವ ದೇವರು ಈ ಯುಗದ ದಾರ್ಶನಿಕ, ದಾನಧರ್ಮದ ಚಿಂತಾಮಣಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಎಂದರೆ ತಪ್ಪಾಗಲಾರದು.
ಅಕ್ಷರ ದಾಸೋಹ: ಪ್ರತಿ ಅಮವಾಸ್ಯೆಯು ಹಲವು ಸಮಸ್ಯೆಗಳನ್ನು ಹೊತ್ತುಬರುವ ಭಕ್ತಾಧಿಗಳಿಗೆ ಸ್ವಾಮಿಜೀಯವರಿಂದ ಸಾಂತ್ವಾನ, ಸಮಾಧಾನದ ಹಾಗೂ ಸರಳ ಪರಿಹಾರ ಹಾಗೂ ಆಶೀರ್ವಾದ ನಂತರ ಸಂಜೆ ಬೆಳಕಿನೆಡೆ ಕಾರ್ಯಕ್ರಮದ ಮೂಲಕ ಅಕ್ಷರ ದಾಸೋಹವು ಸಣ್ಣ ಚಿಂತನೆಯು ಹೌದು. ಅದು ಈಗ ಜಾತ್ರೆಯಲ್ಲಿ ಎಲ್ಲ ಭಾಗದ ಜನತೆಗೂ ಎಲ್ಲರಿಗೂ ಅನ್ವಯವಾಗುವ "ಅಕ್ಷರ ದಾಸೋಹ" ಚಿಂತಕರ, ಶರಣರ ಹಿತನುಡಿ, ಹಿತವಚನಗಳು, ಅಗಮ್ಯ.. ಅಗೋಚರ.. ಅಪ್ರತಿಮ.. ಅದರ ಅಗಾದತೆಯನ್ನು ಅಕ್ಷರದಲ್ಲಿಡಿದಿಡುವುದೇ ಅಸಾಧ್ಯ. ಪ್ರತಿ ಜಾತ್ರೆಯನ್ನು ಒಬ್ಬೊಬ್ಬ ವಿಶೇಷ ಆಹ್ವಾನಿತರಿಂದ ಆರಂಭಗೊಳಿಸಿ ಅಷ್ಟೇ ಅಚ್ಚುಕಟ್ಟಾಗಿ ನಡೆಸುವ ಮೂಲಕ ಈಡೀ ರಾಷ್ಟ್ರ ಹಾಗೂ ರಾಜ್ಯದ ಗಮನ ಸೆಳೆದಿರುವ ನಮ್ಮಯ ಈ ಜಾತ್ರೆಯ ಹೆಮ್ಮೆ.
ದಾಸೋಹ: ಆರಂಭದಿಂದ ತಿಂಗಳಾಂತ್ಯದವರೆಗೂ ನಡೆದರೂ ನಿಗದ ಜಾತ್ರೆ ಉತ್ಸಾಹ, ಮುಗಿಯದ ದಾಸೋಹ. ದಿನಕ್ಕೊಂದು ರುಚಿರುಚಿಯಾದ ಬೋರಿ ಭೋಜನ. ಲಕ್ಷಾಂತರ ಜನತೆಗೆ ಒಂದೇ ಸೂರಿನಡಿ ಅಚ್ಚುಕಟ್ಟಾದ ಶಿಸ್ತುಬದ್ಧ ಊಟದ ವ್ಯವಸ್ಥೆಗೆ ಪ್ರವಾಸಿಗರನ್ನು ಹುಬ್ಬೆರಿಸುವಂತೆ ಮಾಡಿದೆ. ಉತ್ತರ ಕರ್ನಾಟಕ ರಸವತ್ತಾದ ಊಟ, ಬಗೆಬಗೆಯ ಮೃಷ್ಟಾನ್ನಬೋಜನ ಯಾರಿಗೂ ಹಿಡಿಸದಿರದು. ರೊಟ್ಟಿ, ಚಟ್ನಿ, ಪಲ್ಯೆ, ವಿಧವಿಧದ ತಿಂಡಿ, ತಿನಿಸು ಬಾಯಲ್ಲಿ ನೀರೊರಿಸುತ್ತೆ. ಭಕ್ತಾದಿಗಳಿಗೆ ಹಾಗಾಗ ಹಿತವಚನಗಳ ಸಿಂಚನ. ಪ್ರಸಾದದ ಮಹತ್ವ, ಪ್ರತಿಅಗುಳಿನ ಪರಿಶ್ರಮ, ಹಾಗೇಯೇ ಎಲ್ಲರ ಶ್ರಮವೂ ಅಲ್ಲಿಯ ದ್ವನಿವರ್ಧಕಗಳ ಮೂಲಕ ಜನತೆಗೆ ನೆನಪಿಸಲಾಗುತ್ತಿರುತ್ತದೆ. 
ದೀಪಾಲಂಕಾರದಿಂದ ಜಗಮಗಿಸುವ ಮಠ, ಎಲ್ಲದರಲ್ಲೂ ಈಗಿನ ಜನಕ್ಕೆ ಹೊಂದಿಕೊಳ್ಳುವಂತ ವೈಜ್ಞಾನಿಕ, ತಾಂತ್ರಿಕತೆಯ ಸ್ಪರ್ಷದ ಮೂಲಕ ಜಾತ್ರೆ ವಿಜ್ರಂಭಣೆಗೆ ಮತ್ತಷ್ಟು ಮೆರಗು ನೀಡಲಾಗುತ್ತಿದೆ. ಇಡೀ ಕ್ಷೇತ್ರವೇ ಜಾತ್ರೆಯಲ್ಲಿ ತಲ್ಲಿನವಾಗಿದ್ದು ಎಲ್ಲರೂ ನಿಶ್ಚಿಂತೆ, ನಿಷ್ಕಲ್ಮಶದಿಂದ ಸೌಹಾರ್ದಯುತವಾಗಿ ಒಂದೇಡೆ ಸೇರಿ ಆನಂದಿಸುವ ಆ ಕ್ಷಣ ಸ್ವರ್ಗಕ್ಕೆ ಸಮಾನ॒
ಭಣ್ಣಿಸಿದಷ್ಟು ಮುಗಿಯದ ನಮ್ಮಯ ಅಜ್ಜನ ಜಾತ್ರೆ ಗವಿಮಠ ಸ್ವರ್ಗದ ಪಾತ್ರೆ. 

ಪೀಠಾಧಿಪತಿಗಳ ಸಂಕ್ಷಿಪ್ತ ಪರಿಚಯ

http://kannadanet.blogspot.in/2014/01/blog-post_857.html

ಪೀಠಾಧಿಪತಿಗಳ ಸಂಕ್ಷಿಪ್ತ ಪರಿಚಯ


ವಿದ್ಯಾಧದಾತಿ ವಿನಯಂ :
ವಿನಯಾಧಾತಿ ಪಾತ್ರವಾಂ :
ಪಾತ್ರತ್ವಾತ್ ಧನಮಾನೋತಿ :
ಧನಾಧರ್ಮಂ ತತ್ ಸುಖಂ :
ಎಂಬ ಯುಕ್ತಿ ಅಕ್ಷರಂಶಯ ಶ್ರೀ ಅಭಿನವ ಶ್ರೀ ಗವಿಸಿದ್ಧೇಶ್ವ ಸ್ವಾಮಿಗಳಿಗೆ ಸಲ್ಲುತ್ತದೆ.  ಶ್ರೀ ಮ.ನಿ.ಪ್ರ.ಜ. ಶ್ರೀಗಳು ಮಹಾಪುರುಷರು, ಹೃದಯವಂತರು, ಶಕ್ತಿಸ್ವರೂಪರು ಹೊಸ, ಹೊಸ ವಿಚಾರ ಶೀಲರು ಭಕ್ತ ಸಮೂದಾಯವನ್ನು  ಕತ್ತಲಿಂದ  ಬೆಳೆಕೆನೆಡೆಗೆ  ನೆಡೆಸುವ ಹೃದಯ  ವೈಶಾಲರು . ಶ್ರೀ ಗವಿಸಿದ್ಧೇಶ  ಸ್ವಾಮಿಜಿಯವರು ೧೮ನೇ ಪಿಠಾಧಿಪತಿಗಳಾಗಿದ್ದು  ಶ್ರೀ ಮ.ನಿ.ಪ್ರ. ಜಗದ್ಗುರು  ಶ್ರೀ ಶಿವ ಶಾಂತಶಿವಯೋಗಿಗಳು ಮಮತೆಯ ಮಾನಸ ಪುತ್ರರು  ಶ್ರೀಗಳ ಕರ ಸಂಜಾತರು.
ಶ್ರೀ ಮ.ನಿ.ಪ್ರ. ಜ.ಶಿವ ಶಾಂತ ವೀರಶಿವಯೋಗಿಗಳು ತಮ್ಮ  ತಪೋಬಲ,ವಿದ್ವತ್,  ವಿನಯತೆ, ಶಾಂತತೆ, ತರ್ಕಬದ್ಧ ಜೀವನ, ಅನುಷ್ಠಾನ, ಅಂತ:ಕರುಣ ಅಮೃತ ಗುಣಗಳಿಂದ, ತನ್ನ ಭಕ್ತ ವೃಂದವನ್ನು ತಾವು ಮಮತೆ ವಾತ್ಸಲ್ಯದಿಂದ ನೋಡುತ್ತಿದ್ದರು. ಭಕ್ತಜನರ ಸಂಕಲ್ಪ  ಈಡೇರಿಸುವ ದೇವರಾಗಿದ್ದರು.  ಇವರು  ಶಾಂತಮೂರ್ತಿ ನೆಡೆದಾಡುವ ದೇವರೆಂದೇ  ಪ್ರಖ್ಯಾತರಾಗಿದ್ದರು. ಇಂಥವರ ಶಿಷ್ಯರೆ ಮಮತೆಯ ಕಂದನೇ ನಮ್ಮೆಲ್ಲರ ದೈವ ಶ್ರೀ ಅಭಿನವ ಗವಿಸಿದ್ಧೇಶ್ವರರು. 
ಶ್ರೀ ಅಭಿನವ ಶ್ರೀಗಳ  ಮೊದಲ ಹೆಸರು ’ಪರ್ವತ  ದೇವರು’ ಇವರು  ಗುಲಬರ್ಗಾ ಜಿಲ್ಲೆಯ ’ ಹಾಗರಗುಂಡಿ ’ ಎಂಬ ಪುಣ್ಯ ಭೂಮಿಯಲ್ಲಿ ೦೧.೦೬.೧೯೭೭ನೆಯ ಇಸ್ವಿ ಯಲ್ಲಿ  ವೀರ ಮಾಹೇಶ್ವರ ದಂಪತಿಗಳ ಪರಾಪುಣ್ಯ ಗರ್ಭದಲ್ಲಿ  ಜೇಷ್ಠರತ್ನರಾಗಿ ಜನಿಸಿದರು.  ಈ ಶ್ರೇಷ್ಠ ಜಂಗಮ ವರ್ಯ ಈ ಪುಣ್ಯಧರ್ಮಭೂಮಿಯ  ಮಡಿಲೊಡೆಯರಾಗಿ  ಈ ಭುವಿಗಿದುಸಿದರು.
ಇವರು  ಪ್ರಾಥಮಿಕ  ಶಿಕ್ಷಣವನ್ನು ಹಾಗರಗುಂಡಿಯಲ್ಲಿ  ಪ್ರೌಢಶಾಲಾ ಶಿಕ್ಷಣವನ್ನು   ಕೊಪ್ಪಳದಲ್ಲಿ ಕಲೆಯುತ್ತಾ ಶಾಲೆಯಲ್ಲಿ   ಪ್ರತಿಭಾವಂತ ವಿನಯತೆಯ ವಿದ್ಯಾರ್ಥಿಯಾಗಿ ತೆರ್ಗಡೆ ಹೊಂದಿ   ಬಿ.ಎ.[ಃ.ಂ.] ಪದವಿಯನ್ನು  ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ  ರ‍್ಯಾಂಕ ವಿಜೇತರಾಗಿ, ಎಂ.ಎ. .[ಒ.ಂ.]  ಇಂಗ್ಲೀಷ್ ಸ್ನಾತಕೋತ್ತರ   
ಪದವಿಯನ್ನು ಪೂನಾ ವಿಶ್ವವಿದ್ಯಾಲಯದಲ್ಲಿ  ಮೊದಲಿಗರಾಗಿ ತಮ್ಮ ಡಿಗ್ರಿ ಮುಗಿಸಿ  ಸಂಸ್ಕೃತ ಪದವಿಯ  ’ತಿರುಪತಿ’ ವಿಶ್ವವಿದ್ಯಾಲಯದಲ್ಲಿ ಕಲೆತು ತಮ್ಮ  ವಾಕ್ ಚತುರತೆ, ವಿದ್ವತ್, ತರ್ಕ ಬದ್ಧತೆ, ಚಿಂತನಾ ಶೀಲತೆ, ಸೃಜನ ಶೀಲತೆ, ಶೈಕ್ಷಣಿಕ ಚಿಂತನೆ  ಪ್ರಗತಿ ಪರಧೋರಣೆಯಿಂದ, ವಿಶಾಲ ಮನೋಭಾವದಿಂದ ಪ್ರಖ್ಯಾತರಾಗಿದ್ದಾರೆ. 
ಶ್ರೀ ಗವಿಶಿದ್ಧೇಶ್ವರಸ್ವಾಮಿಜಿಯವರು ತಾವು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಸ್ವಾಮಿ ವಿವೇಕಾನಂದರ  ಬಗ್ಗೆ   ನೆಡೆದ  ಭಾಷಣ [Sಠಿeeಛಿh] ಸ್ಪರ್ದೆಯಲ್ಲಿ ಭಾಗವಹಿಸಿ  ಮಾತನಾಡುವ  ಸಮಯದಲ್ಲಿ  ಪೇಠ್ ಭರ್‌ನೆತರ್‌ಖಾನಾ ಏ ಮಾನವ  ಸಂಸ್ಕೃತಿಹೈ, ಪೀಠಾಭರ್ ನೆರೆಬಾದ ಭೀ ಖಾನಾ ಏ ರಾಕ್ಷಸ್ ಸಂಸ್ಕೃತಿ ಹ್ವೆ   ಹೊಟ್ಟೆ ತುಂಬಾ  ಊಟ ಮಾಡುವುದು ಮಾನವನ ಸಹಜ ಸಂಸ್ಕೃತಿ, ಹೊಟ್ಟೆ ತುಂಬಿದ ಮೇಲೂ  ಊಟ ಮಾಡುವುದು ರಾಕ್ಷಸ ಸಂಸ್ಕೃತಿ ಆದರೆ  ಮತ್ತೊಬ್ಬರ ಹೊಟ್ಟೆ  ತುಂಬಿಸುವುದರ ಸಲುವಾಗಿ  ಸಾಯುವುದು ಭಾರತೀಯ ಸಂಸ್ಕೃತಿ ಎಂದು ಹೇಳಿದ  ಅಂದಿನ ಬಾಲಕನೇ  ಇಂದಿನ ದೇವ ಮಾನವ ಶ್ರೀ ಗವಿಶಿದ್ಧೇಶ್ವ ’ಬೆಳೆಯುವ ಸಿರಿ ಮೊಳೆಕೆಯಲ್ಲಿಯೇ ನೋಡು ಎಂಬ’ ಮಹತ್ಮರ ವಾಣಿಯಂತೆ  ಉನ್ನತ  ಆದರ್ಶಗಳನ್ನು  ಅರಿತ  ಮಹಾಪುರುಷ, ಬಾಲ್ಯದಲ್ಲಿಯೇ ನಯ, ವಿನಯದಿಂದ  ಭಕ್ತಿ ಭಾವದಿಂದ  ನೆಡೆಯುವ ಧಿಮಂತಿಕೆಯ  ವ್ಯಕ್ತಿತ್ವ.  ರಾಮಕೃಷ್ಣ ಪರಮಹಂಸರು ವಿವೇಕಾನಂದರನ್ನು  ಬೆಳೆಸಿದ ಹಾಗೆ ಶ್ರೀ  ಶಿವಶಾಂತ ಶಿವಯೋಗಿಗಳು ಶ್ರೀ ಅಭಿನವ ಗವಿಶಿದ್ಧೇಶ ಸ್ವಾಮಿಗಳನ್ನು ಬೆಳೆಸಿದರು. 
ಶ್ರೀ ಅಭಿನವ ಶ್ರೀಗಳು  ಗುರುಗಳಾಶಿರ್ವಾದದಿಂದ  ಶ್ರೀ ಮಠದ ೧೮ನೇ ಪೀಠಾಧಿಪತಿಯಾಗಿ  ’ಶಿಖರದ ಸೂರ್ಯರಾಗಿ’  ಈ ನಾಡ ಪುಣ್ಯಪುರುಷರಾಗಿ ; ಪರಂಜ್ಯೋತಿಯಾಗಿ  ಬೆಳಗುತ್ತಾ ’ ಬಾಳಲು ಆರೋಗ್ಯ, ಬದುಕಲು  ಅನ್ನ, ಬಾಳಿ ಬದುಕಲು ಶಿಕ್ಷಣ’ ಈ  ತ್ರಿವಿಧದಾಸೋಹಗಳನ್ನು  ಮಠದ ಸಂಸ್ಕೃತಿಯಂತೆ  ನೆಡೆಸುತ್ತಾ  ಇಷ್ಟಕ್ಕೆ  ಸಿಮಿತ ವಾಗದೆ  ಅತಿ ಚಿಕ್ಕ ವಯಸ್ಸಿನಲ್ಲಿಯೇ  ಪೀಠಾರೋಹಣವನ್ನೇರಿದ  ಸ್ವಾಮಿಜೀಯವರು ಕ್ರಾಂತಿ ಕಾರಿ  ಬೆಳವಣಿಗೆಯ ಹೆಜ್ಜೆ ಹಾಕುತ್ತಾ  ಐವತ್ತು ವರ್ಷಗಳಲ್ಲಿ  ಸಾಕಾರಗೊಳ್ಳಬಹುದಾದ ಕೆಲಸ  ಕಾರ್ಯಗಳನ್ನು ಕೇವಲ  ಐದೇ ವರುಷದಲ್ಲಿ   ಮಾಡಹತ್ತಿರುವರು. ಶ್ರೀ ಮಠ ಸಾವಿರಾರು ವರ್ಷದಲ್ಲಿ ಆಗದ ಬದಲಾವಣೆಯನ್ನು  ಮತ್ತು  ತನ್ನ ಬೌತಿಕ ಚಿತ್ರಣವನ್ನು  ಈ ಐದು ವರ್ಷದಲ್ಲಿ ಅಗಾಧ ಬದಲಾವಣೆ ಹೊಸ  ಹೊಸ ಕಟ್ಟಡ  ಹೊಂದಿ ಜೊತೆಗೆ  ಅಧ್ಯಾತ್ಮಿಕ ಶಿಕ್ಷಣ ,  ಪ್ರಾಕೃತಿಕ, ಬಡವರ ಉಸಿರಾಗಿ, ನೊಂದವರ ನಂದಾದೀಪವಾಗಿ, ಸಾಂಸ್ಕೃತಿಕ ಮೌಲ್ಯ ಗಳಿಂದ  ಶ್ರೀಮಂತವಾದ ಯೋಜನೆಗಳಿಂದ  ಶ್ರೀ ಮಠದ ಚಿತ್ರಣವನ್ನು  ಸಮೃದ್ದಗೊಳಿಸಿದ್ದಾರೆ,  ಸಮೃದ್ಧಗೊಳಿಸುತ್ತಿದ್ದಾರೆ. 

ಶ್ರೀಗಳು  ವಯಸ್ಸಿನಲ್ಲಿ  ಚಿಕ್ಕವರಾದರೂ ತಮ್ಮ ಮೌಲ್ಯಾಧರಿತ  ಗುಣಗಳಿಂದ  ದೊಡ್ಡವರಾಗಿದ್ದಾರೆ, ಶಿಕ್ಷಣ, ಸಂಸ್ಕೃತಿ, ಅಧ್ಯಾತ್ಮ , ನ್ಯಾಯ, ನೀತಿ, ಧರ್ಮ ಶ್ರೇಷ್ಟತೆಯಿಂದ  ತನ್ನ ಭಕ್ತ  ವೃಂದವನ್ನು   ಉದ್ಧರಿಸುತ್ತಾ, ತಮ್ಮ  ಗುರುಗಳು  ಹಾಕಿಕೊಟ್ಟ   ಮಾರ್ಗದಲ್ಲಿಯೇ  ಮುನ್ನೆಡೆಯುವ  ಸತ್ ಸಂಕಲ್ಪ ಹೊಂದಿದ್ದಾರೆ.  ಅನ್ನ ದಾಸೋಹದ ಜೊತೆಗೆ  ಜ್ಞಾನದಾಸೋಹಕ್ಕೆ  ಬಹಳ ಒತ್ತು  ಕೊಟ್ಟಿದ್ದಾರೆ.  ಅಂದು ಶ್ರೀ ಮರಿಶಾಂತಶಿವ ಯೋಗಿಗಳು ಹಚ್ಚಿದ  ’ಜ್ಞಾನದಾಸೋಹದ  ದೀಪ’ ಇಂದಿಗೂ  ನಿರಂತರವಾಗಿ  ನೆಡೆಯುತ್ತಿದೆ.   ಆ ಜ್ಞಾನದೀಪ ಶ್ರೀ ಅಭಿನವಗವಿಶಿದ್ಧೇಶ್ವರರ ಕಾಲದಲ್ಲಿ ಉತ್ತುಂಗ ಮಟ್ಟ ತಲುಪಿದೆ. 
ಒಂದಡೆ  ಸಮಾಜಿಕ  ಕಳಕಳಿ  ಇನ್ನೊಂದಡೆ ಧಾರ್ಮಿಕ  ಕಳಕಳಿ ಜನ ಸಾಮಾನ್ಯರಿಗೂ   ತಲುಪಿಸಲು  ಹಳ್ಳಿ ಹಳ್ಳಿಗಳ ಸುತ್ತಾಟ ಅಧ್ಯಾತ್ಮದ  ಔತಣ ಕೂಟ  ಏರ್ಪಡಿಸಿ ಜನಸಾಮಾನ್ಯರಿಗೆ ಧರ್ಮದ  ಜ್ಞಾನ ದಾಸೋಹ ನೀಡುವ  ’ಸತ್ ಸಂಕಲ್ಪ’ ಮಾಡುತ್ತಾ  ನೆಡಿದಿದ್ದಾರೆ.  ಶ್ರೀಗಳು  ಇಂಥಾ  ಪುಣ್ಯ ಪುರುಷ ಮಹತ್ವನನ್ನು  ನಮಗೆ ದೊರಕಿಸಿ ಕೊಟ್ಟ  ಶ್ರೀ ಗವಿಶಿದ್ದೇಶನ ರೂಪದಲ್ಲೇ  ತಮ್ಮದೊಡ್ಡಿ ಶ್ರೀಗಳು ಅನರ್ಥರತ್ನವನ್ನು   ತಂದು  ಶ್ರೀ ಶಿವಶಾಂತವೀರ ಶಿವಯೋಗಿಗಳ  ಮಡಲಿಗೆ  ಹಾಕಿ ಕೊಪ್ಪಳ ನಾಡನ್ನು   ಶ್ರೀ ಮಂತಗೊಳಿಸಲು  ತಮ್ಮ  ಕರಸಂಜಾತರನ್ನು  ಬೆಳೆಸಿಕೊಟ್ಟ  ಮಹತ್ಮರು.
ಭವ್ಯವಾದ  ಗುಡ್ಡದಲ್ಲಿ   ಸುಂದರ ಪ್ರಕೃತಿಯ ಮಡಿಲಲ್ಲಿ   ಶ್ರೀಗಳ ಸೃಜನಶೀಲ  ಕಾರ್ಯಗಳು ನಿರಂತರವಾಗಿ ನೆಡೆಯಲಿ  ಪೀಠಾರೊಹಣದ  ಸ್ವಲ್ಪ ಸಮಯದಲ್ಲಿ  ಸಮಾಜಮುಖಿ  ಕಾರ್ಯಕ್ರಮ ಮಾಡುತ್ತಾ  ಅಭಿವೃದ್ಧಿ ಹರಿಕಾರರಾಗಿದ್ದಾರೆ ಶ್ರೀ ಅಭಿನವ ಶ್ರೀ ಮ.ನಿ.ಪ್ರ.ಜಗದ್ಗುರು ಶ್ರೀ ಗವಿಶಿದ್ಧೇಶ್ವರ  ಸ್ವಾಮಿಗಳು. 

ಗವಿಮಠಕ್ಕೆ ಸಾಗರೋಪಾಧಿಯಲ್ಲಿ ಹರಿದು ಬಂದ ದವಸದಾನ್ಯ ಹಾಗೂ ರೊಟ್ಟಿಗಳು

ಗವಿಮಠಕ್ಕೆ ಸಾಗರೋಪಾಧಿಯಲ್ಲಿ ಹರಿದು ಬಂದ ದವಸದಾನ್ಯ ಹಾಗೂ ರೊಟ್ಟಿಗಳು

http://kannadanet.blogspot.in/2014/01/blog-post_2488.html
ಕೊಪ್ಪಳ: ಶ್ರೀಗವಿಮಠಕ್ಕೆ ಇಂದು ಮಂಗಳೂರು, ಹುಲಿಯಾಪುರ, ಅರಕೇರಿ, ಮಸಬಹಂಚನಾಳ, ಕೋನಾಪುರ, ಗಿಣಗೇರಿ, ಕಲ್ಲತಾವರಗೇರಿ, ಕಾಟ್ರಳ್ಲಿ, ಕದ್ರಳ್ಳಿ, ಕುಷ್ಟಗಿ, ಬೆಣಕಲ್, ನಿಟ್ಟಾಲಿ, ಗುಳದಳ್ಳಿ, ಕುಕ್ಕನಪಳ್ಳಿ, ಹನುಮನಹಳ್ಳಿ, ಕನಕಾಪುರ ತಾಂಡಾ, ಬಿನ್ನಾಳ, ಚಳ್ಳಾರಿ, ಕೊಪ್ಪಳದ ದೇವರಾಜರಸ ಕಾಲೋನಿ, ಗೌರಿಅಂಗಳ ಮೊದಾಲಾದ ಭಕ್ತಾಧಿಗಳಿಂದ ರೊಟ್ಟಿ, ಚಟ್ನಿ, ದವಸ ದಾನ್ಯಗಳು ಮಹಾದಾಸೋಹಕ್ಕೆ ಬಂದಿರುತ್ತವೆ.  

ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯ- ಭೋಜ್ಯಗಳು
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ನಿಮಿತ್ಯ ಜರುಗುವ ಮಹಾದಾಸೋಹಕ್ಕಾಗಿ ಭಕ್ತಾಧಿಗಳಿಂದ ಎಳ್ಳುಹಚ್ಚಿದ ಸಜ್ಜಿ ರೊಟ್ಟಿ, ತೆಳ್ಳನ ಬಿಳಿಜೋಳದ ರೊಟ್ಟಿ, ಉಪ್ಪು ತುಂಬಿದ ಕರದ ಮೆಣಸಿನಕಾಯಿ ಚಟ್ನಿ, ಶೇಂಗಾಚಟ್ನಿ, ಗುರಳ್ಳು ಚಟ್ನಿ, ಅಗಸಿಚಟ್ನಿ, ಕೆಂಪು ಹಸೆಮೆಣಸಿನಕಾಯಿಚಟ್ನಿ ಹಾಗೂ ಮಸಾಲಿ ಸವತೆಕಾಯಿಯಉಪ್ಪಿನಕಾಯಿ ಈ ಮೊದಲಾದ ರುಚಿರುಚಿಯಾದ ಖಾದ್ಯಗಳ ಜೊತೆಗೆ ಮಾದಲಿ, ಬೂಂದಿ ಲಾಡುಗಳಂತಹ ಸಿಹಿ ಪದಾರ್ಥಗಳು ಮಹಾದಾಸೋಹಕ್ಕೆ ಸಮರ್ಪಣೆಯಾದವು. 

ಮಹಾದಾಸೋಹಕ್ಕೆ ಮಂಗಳೂರ ಗ್ರಾಮಸ್ಥರ ಸೇವೆ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಗೆ ಮಂಗಳೂರ ಗ್ರಾಮದ ಭಕ್ರರು ಜಾತ್ರೆಯ ಮಹಾದಾಸೋಹಕ್ಕೆ ೧೫೫ ಕ್ವಿಂಟಲ್ ದವಸದಾನ್ಯ, ೧೦೦೦೦ ರೊಟ್ಟಿ, ೨೫೦ ಕುಂಬಳಕಾಯಿ ಜೊತೆಗೆ ಗ್ರಾಮದ ೫೦ ಜನ ಭಕ್ತರು ಜಾತ್ರಯ ದಿನದಿಂದ ನಿರಂತರವಾಗಿ ೫ ದಿನಗಳ ಕಾಲ ದಾಸೋಹದಲ್ಲಿ ಅಜ್ಜನ ಪ್ರಸಾದ ಹಾಗೂ ಸಾಂಬಾರು ತಯಾರಿಸುವಲ್ಲಿ ನಿರತರಾಗಿರುತ್ತಾರೆ.  
ಸೇವಾಲಾಲ್ ಭಕ್ತರ ಸೇವೆ
ಕೊಪ್ಪಳ: ಜಿನ್ನಾಪುರ ತಾಂಡಾದ ಲಂಬಾಣಿಗಳೇ ವಾಸಿಸುವ ಈ ಪುಟ್ಟ ಹಳ್ಳಿಯ ಸೇವಾಲಾಲ್ ಭಕ್ತರು ಮಹಾರಥೋತ್ಸವದ ೨ ದಿನ ಮುನ್ನ ಜಂಗಮೋತ್ಸವದ ದಿನದಂದು ಪ್ರತಿವರ್ಷ ತಮ್ಮ ಗ್ರಾಮದಿಂದ ಹಲವು ಲಂಬಾಣಿ ಮಹಿಳೆಯರು ಶ್ರೀಗವಿಮಠಕ್ಕೆ ಆಗಮಿಸಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಫಲಪುಷ್ಪಗಳನ್ನು ಅರ್ಪಿಸಿದರು






ಸೋಮವಾರ, ಜನವರಿ 28, 2013

ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ




  ದಿನಾಂಕ ೨೯-೦೧-೨೦೧೩ ಹಾಗೂ ೩೦-೦೧-೨೦೧೩ ರಂದು ಜರುಗಲಿರುವ ಶ್ರೀ ಗವಿಸಿದ್ದೇಶ್ವರ ಮಠದ ಜಾತ್ರಾ ಪ್ರಯುಕ್ತ ಈ ಕೆಳಕಂಡಂತೆ ಸಂಚಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದ್ದು, ಜಾತ್ರೆಗೆ ಬರುವ ಸಾರ್ವಜನಿಕರು ಸಹಕರಿಸಲು ಕೋರಿದೆ. ಲಾರಿ / ಟ್ರಕ್ / ಪಾರ್ಕಿಂಗ್, ಸಾರ್ವಜನಿಕ ಮೈದಾನ, ಟ್ರ್ಯಾಕ್ಟರ್ ಪಾರ್ಕಿಂಗ್ ಎ.ಪಿ.ಎಂ.ಸಿ, ಕಾರ್/ಜೀಪ್/ಟಂಟಂ ಪಾರ್ಕಿಂಗ್ ಗವಿಸಿದ್ದೇಶ್ವರ ಕಾಲೇಜ್ ಮೈದಾನ [ಎ.ಪಿ.ಎಂ.ಸಿ ಮತ್ತು ಪಾದಗಟ್ಟಿ ನಡುವಿನ ಸ್ಥಳ], ಎಲ್ಲಾ ದ್ವಿ-ಚಕ್ರ ವಾಹನಗಳ ಪಾರ್ಕಿಂಗ್ ಗವಿಸಿದ್ದೇಶ್ವರ ಬಿ.ಸಿ.ಎ ಕಾಲೇಜ್ [ಬಸವೇಶ್ವರ ವೃತ್ತದಿಂದ ಗವಿಮಠಕ್ಕೆ ಹೋಗುವ ರಸ್ತೆ ಎಡಕ್ಕೆ], ಗಣ್ಯ ವ್ಯಕ್ತಿಗಳ ವಾಹನಗಳ ಪಾರ್ಕಿಂಗ್ ಗವಿಸಿದ್ದೇಶ್ವರ ಡಿಗ್ರಿ ಕಾಲೆಜ್ ಕ್ಯಾಂಪಸ್, ಹಾಲವರ್ತಿ ಹಾಗೂ ಗಡಿಯಾರ ಕಂಬದಿಂದ ಬರುವ ಎಲ್ಲಾ ವಾಹನಗಳು ಹಾಲವರ್ತಿ ರಸ್ತೆಯ ಎಡ ಮತ್ತು ಬಲಕ್ಕೆ, ಕೆ.ಎಸ್.ಆರ್.ಟಿ.ಸಿ ಬಸ್‌ಗಳು  ಗವಿಸಿದ್ದೇಶ್ವರ ವೇ ಬ್ರಿಡ್ಜ್. ಈ ಮೇಲ್ಕಂಡ ಸಂಚಾರಿ ವ್ಯವಸ್ಥೆಯನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.

   ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಸವೇಶ್ವರ ವೃತ್ತ, ಗವಿಸಿದ್ದೇಶ್ವರ ಕಾಲೇಜ್ ಪಾರ್ಕಿಂಗ್ ಸ್ಥಳ, ಹಾಲವರ್ತಿ ಕ್ರಾಸ್, ಗವಿಮಠದ ಮಹಾದ್ವಾರ, ಗರ್ಭಗುಡಿ, ಸಭೆ ನಡೆಯುವ ಸ್ಥಳ, ಊಟದ ಸ್ಥಳ, ಗಡಿಯಾರ ಕಂಬ.

ಇದೂವರೆಗೂ ಶ್ರೀಗವಿಮಠದ ಮಹಾದಾಸೋಹಕ್ಕೆ ಹರಿದುಬಂದ ರೊಟ್ಟಿ ಹಾಗೂ ದವಸ ಧಾನ್ಯಗಳು,



ಕೊಪ್ಪಳ : ಸಂಸ್ಥಾನ ಶ್ರೀಗವಿಮಠದ ಜಾತ್ರೆಗಾಗಿ ನಡೆಯುತ್ತಿರುವ ಮಹಾದಾಸೋಹಕ್ಕಾಗಿ  ಶ್ರೀಮಠದಕ್ಕೆ ರೊಟ್ಟಿ ಹಾಗೂ ದವಸಧಾನ್ಯಗಳು  ಹರಿದು ಬರುತ್ತಲಿವೆ. ಮಹಾದಾಸೋಹಕ್ಕಾಗಿ ಇದೂವರೆಗೆ  ಚಿಲ್ಕಮುಕ್ಕಿ ಗ್ರಾಮದ ಸದ್ಭಕ್ತರೋರ್ವರಿಂದ  ರೊಟ್ಟಿ , ಹೀರೆಕಾಸನಕಂಡಿ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು, ಹುಣಸಿಹಾಳ ಗ್ರಾಮದ ಸದ್ಭಕ್ತರಿಂದ ರೊಟ್ಟಿಗಳು, ಭಾನಾಪುರ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಹನುಮನಟ್ಟಿ ಗ್ರಾಮದ ಸದ್ಭಕ್ತರಿಂದ ರೊಟ್ಟಿ, ದವಸ ಧಾನ್ಯಗಳು, ಸಿಹಿಬೂಂದಿ, ಗೋಸಲದೊಡ್ಡಿ ಗ್ರಾಮದ ಸದ್ಧಕ್ತರಿಂದ ದವಸ ಧಾನ್ಯಗಳು, ಹೊಸಳ್ಳಿ ಗ್ರಾಮದ ಸದ್ಧಕ್ತರಿಂದ ದವಸಧಾನ್ಯಗಳು,  ಟಣಕಣಕಲ್ ಗ್ರಾಮದ ಸದ್ಭಕ್ತರಿಂದ ದವಸಧಾನ್ಯಗಳು ಹಾಗೂ ರೊಟ್ಟಿ , ದದೇಗಲ್,ಆಗೋಲಿ,ಚೆನ್ನಾಳ, ವಜ್ರಬಂಡಿ ಹಾಗೂ ಇಂದರಗಿ ಗ್ರಾಮದಿಂದ ರೊಟ್ಟಿ ಹಾಗೂ ದವಸ ಧಾನ್ಯಗಳು, ನರೇಗಲ್ ಗ್ರಾಮದ ಸದ್ಭಕ್ತರಿಂದ ದವಸ ಧಾನ್ಯಗಳು ಹಾಗೂ ರೊಟ್ಟಿ, ಶ್ರೀಮಠದ ಮಹಾದಾಸೋಹಕ್ಕೆ ಹರಿದು ಬಂದಿವೆ. ಇನ್ನೂ ಮೂರ್‍ನಾಲ್ಕು ದಿನಗಳಲ್ಲಿ ಸಾಗರೋಪಾಧಿಯಾಗಿ ರೊಟ್ಟಿ ಹಾಗೂ ದವಸ ಧಾನ್ಯಗಳು ಹರಿದು ಬರಲಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.

ರೊಟ್ಟಿಗಳ ಸಪ್ಪಳ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ವಿಶೇಷತೆ ಎಂದರೆ ಮಹಾದಾಸೋಹ.          ದಿನಾಂಕ ೨೯-೦೧-೨೦೧೩  ರ ರಥೋತ್ಸವದ ದಿನದಿಂದ ಅಮವಾಸ್ಯೆಯ ತನಕ ನಿರಂತರವಾಗಿ ನಡೆಯಲಿರುವ ಮಹಾದಾಸೋಹ್ಕಾಗಿ ಜಿಲ್ಲೆಯದ್ಯಾಂತ ಭಕ್ತ ಜನರು  ತಮ್ಮ ಮನೆಮನೆಗಳಲ್ಲಿ ಹಾಗೂ 
ಹಳ್ಳಿಗಳಲ್ಲಿ ರೊಟ್ಟಿಗಳನ್ನು ಮಾಡಿಕೊಂಡು  ಶ್ರೀಮಠಕ್ಕ ಅರ್ಪಿಸುವ ತವಕದಲ್ಲಿದ್ದಾರೆ. ಈಗಾಗಲೇ ಭಾರೀ ಸಂಖ್ಯೆಯಷ್ಟು ರೊಟ್ಟಿ ಸಂಗ್ರಹವಾಗಿವೆ. ಇನ್ನೆರಡ್ಮೂರು ದಿನಗಳಲ್ಲಿ ರೊಟ್ಟಿಗಳೆಲ್ಲ ಮೆರವಣಿಗೆಯ ಸಪ್ಪಳದೊಂದಿಗೆ ಶ್ರೀಗವಿಮಠಕ್ಕೆ ಸಮರ್ಪಣೆಯಾಗಲಿವೆ. 

ಎತ್ತಿನ ಬಂಡಿಗಳ ಅಬ್ಬರ

ಕೊಪ್ಪಳ ಸಂಸ್ಥಾನ ಶ್ರೀಗವಿಮಠದ ಜಾತ್ರೆಯು ದಿನದಿಂದ ದಿನಕ್ಕೆ  ಭಕ್ತರ ಆಗಮನದಿಂದ ರಂಗು ಪಡೆದುಕೊಳ್ಳುತ್ತಿದೆ. ಪ್ರತಿ ದಿನ  ಮಹಾದಾಸೋಹಕ್ಕಾಗಿ ವಿವಿಧ ಗ್ರಾಮಗಳ ಭಕ್ತರು ಎತ್ತಿನ ಬಂಡಿಯಲ್ಲಿ ದವಸಧಾನ್ಯಗಳ  ಮಹಾಪುರವನ್ನೇ ತರುತ್ತಿದ್ದಾರೆ. ಬಂಡಿಯೊಳಗೆ ದವಸಧಾನ್ಯಗಳನ್ನು ತುಂಬಿಕೊಂಡು ರೊಟ್ಟಿ ತರಕಾರಿಗಳ ಸಮೇತ ಎತ್ತುಗಳಿಗೆ ಅಲಂಕಾರವನ್ನು ಮಾಡಿಕೊಂಡು  ಗೆಜ್ಜೆಯನ್ನು ಕಟ್ಟಿ ಶೃಂಗರಿಸಿಕೊಂಡು ಉತ್ಸಾಹದಿಂದ ಅಜ್ಜನ ಜಾತ್ರೆಯ ದಾಸೋಹಕ್ಕೆ ದಾನವನ್ನು ಕೊಡುತ್ತಿರುವದು ಶ್ರೀಮಠದ ಮೇಲಿನ ಭಕ್ತಿಯನ್ನು ತೋರಿಸುತ್ತಿದೆ. ಆಧುನಿಕತೆಯ ಭರಾಟೆಯಲ್ಲಿಯೂ ಟ್ರ್ಯಾಕ್ಟರ, ಟಾಂಟಾಂನ್ನುಕೈಬಿಟ್ಟು ನೂರಾರು ಎತ್ತಿನ ಬಂಡಿಗಳಲ್ಲಿ ಬರುತ್ತಿರುವದು ಜಾತ್ರೆಯ ವೈಶಿಷ್ಟ್ಯತೆಗೆ ಕಾರಣವಾಗಿದೆ.