ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಮಾರ್ಚ್ 16, 2010

ಶ್ರೀ ಗವಿಮಠದಲ್ಲಿ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ ಸಂಸ್ಥಾನ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ಪ್ರತಿ ಅಮವಾಸ್ಯೆಯ ನಿಮಿತ್ಯ ನಡೆಯುವ 'ಬೆಳಕಿನೆಡೆಗೆ' ಕಾರ್ಯಕ್ರಮದ ಅಂಗವಾಗಿ ಯುಗಾದಿ ಅಮವಾಸ್ಯೆಯ ನಿಮಿತ್ಯ ೫ನೇಯ ಬೆಳಕಿನೆಡೆಗೆ ಕಾರ್ಯಕ್ರಮ ಶ್ರೀ ಗವಿಮಠದ ಕೆರೆಯ ದಂಡೆಯ ಮೇಲಿನ ವೇದಿಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಕೊಳ್ಳೆಗಾಲದ ಶ್ರೀ ಅನಂತನರಸಿಂಹ ಶಾಸ್ತ್ರಿಗಳು ಅತಿಥಿಗಳಾಗಿ ಆಗಮಿಸಿ ಶ್ರೀ ನಿಜಗುಣ ಶಿವಯೋಗಿಗಳ 'ಪಾರ್ವತಿ ಪ್ರಣಯ ಕಲಹ' ಈ ವಿಷಯ ಕುರಿತು ಉಪನ್ಯಾಸ ಮಾಡುತ್ತಾ ನಿಜಗುಣ ಶಿವಯೋಗಿಗಳ ಕಾವ್ಯದಲ್ಲಿ ಪಾರಮಾರ್ಥಿಕ ಚಿಂತನೆ ಇರುತ್ತದೆ. ಇದನ್ನು ಅರ್ಥೈಸಿಕೊಂಡು ಬದುಕು ಸಾಗಿಸಬೇಕು. ಇವರು ಕನ್ನಡ ಸಾಹಿತ್ಯಕ್ಕೆ ೬ ಪ್ರಮುಖ ಶಾಸ್ತ್ರಗಳನ್ನ ನೀಡಿದ್ದಾರೆ ಎಂದು ಹೇಳುತ್ತಾ ನಿಜಗುಣ ಶಿವಯೋಗಿಗಳ ಸಾಹಿತ್ಯದ ವಿವಿಧ ಮುಖಗಳನ್ನು ಹೇಳಿದರು. ಅಧ್ಯಕ್ಷತೆಯನ್ನ ಶ್ರೀ ಶರಣ ವೀರಭದ್ರಪ್ಪನವರು ಕುರಕುಂದಿ ವಹಿಸಿ ಆಧ್ಯರ ವಚನಗಳು ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತವೆ. ಶರಣರ ವಚನ ಸಾಹಿತ್ಯದ ಕಡೆಗೆ ನಾವೆಲ್ಲ ಹೋದಾಗ ನಾವು ಖಂಡಿತವಾಗಿ ಬೆಳಕಿನ ಕಡೆಗೆ ಹೋಗುತ್ತೇವೆ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಸಮಾರಂಭದ ಸಾನಿಧ್ಯವನ್ನ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ಗುಡ್ಡದ ವಿರಕ್ತಮಠ, ನಿಲಗುಂದ ಇವರು ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ೫ನೇ ಈ ಮಾಸಿಕ ಕಾರ್ಯಕ್ರಮವನ್ನು ಆಯೋಜಿಸಿ ಭಕ್ತಿಸೇವೆಗೈದ ಶ್ರೀ ರಮೇಶ ಕುಮಾರ ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಗುಲಬುರ್ಗಾ ಇವರನ್ನು ಸಾನಿಧ್ಯ ವಹಿಸಿದ ಶ್ರೀಗಳು ಸನ್ಮಾನಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಗವಿಸಿದ್ಧಪ್ಪ ಕೊಪ್ಪಳ, ಪ್ರಾರ್ಥನೆಯನ್ನು ದೀಪ್ತಿ ನರಸಿಂಹಶಾಸ್ತ್ರಿ, ಕಾರ್ಯಕ್ರಮಕ್ಕೆ ಮುಂಚೆ ಶ್ರೀ ಗವಿಮಠದ ಸಂಗೀತ ಪಾಠಶಾಲೆಯ ವಿದ್ಯಾರ್ಥಿಬಳಗದಿಂದ ಸಂಗೀತ ಕಾರ್ಯಕ್ರಮ ನಡೆತು. ಸಭೆಯಲ್ಲಿ ಶ್ರೀ ಮ.ನಿ.ಪ್ರ. ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಹಾಗೆಯೇ ಅಪಾರ ಸದ್ಭಕ್ತರು ಸಭೆಗೆ ಮೆರಗನ್ನು ತಂದುಕೊಟ್ಟರು.

ಕಾಮೆಂಟ್‌ಗಳಿಲ್ಲ: