ಗುರುವಾರ, ಜನವರಿ 12, 2012
ಬುಧವಾರ, ಜನವರಿ 11, 2012
ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಸಾಯಂಕಾಲ:05:00 ಗಂಟೆಗೆ
Shri Gavisiddeshwara Car Festival 2012
Live
ದಿನಾಂಕ:11-01-2012 (ಬುಧವಾರ) ಸಾಯಂಕಾಲ:05:00 ಗಂಟೆಗೆ
ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ
ಜಾತ್ರೆಯ ನೇರ ಪ್ರಸಾರಕ್ಕೆ ಇಲ್ಲಿ ಕ್ಲಿಕ್ ಮಾಡಿ
gavimathkoppal.com
ದೇವಿಗೆ ಉಡಿತುಂಬುವ ಕಾರ್ಯಕ್ರಮ ಲಘು ರಥೋತ್ಸವ ಸಂಗೀತ ಕಾರ್ಯಕ್ರಮ
ಜಾತ್ರೆಗಾಗಿಯೇ ಮೊಬೈಲ್ ಟವರ್ ಸ್ಥಾಪನೆ |
ಮದುವೆ, ಮುಂಜುವೆ ಮುಂತಾದ ಕಾರ್ಯಕ್ರಮಗಳಲ್ಲಿ ಮನೆಯಲ್ಲಿ ಹಿರಿಯರನ್ನು ಹಾಗೂ ಲಕ್ಷ್ಮೀ ಪೂಜೆಗಳನ್ನು ನೇರವೇರಿಸುವಂತೆ ಶ್ರೀ ಮಠದದಲ್ಲಿಯೂ ಸಹಿತ ಶ್ರೀಮಠದಲ್ಲಿಯ ಅನ್ನಪೂರ್ಣೇಶ್ವರಿ ದೇವಿಗೆ ಸುಮಂಗಲೆಯರು ಮಂಗಲ ದ್ರವ್ಯಗಳೊಂದಿಗೆ ಉಡಿತುಂಬುವ ಕಾರ್ಯಕ್ರಮ ಅನೂಚಾನವಾಗಿ ನಡೆದು ಬಂದಿದೆ. ಇಂದೂ ಸಹ ಸಹಸ್ರಾರು ಸುಮಂಗಲೆಯರು ಉಡಿತುಂಬುವ ಕಾರ್ಯಕ್ರಮಗಳಲ್ಲಿ ಭಕ್ತಿ ಭಾವದೊಂದಿಗೆ ಸೇವೆಗೈದರು ದೇವಿಗೆ ಉಡಿ ತುಂಬುವದರಿಂದ ಸಂತಾನಫಲ, ಕಂಕಣಬಲ,ಧನಧಾನ್ಯಾಧಿಗಳು ಲಭಿಸುತ್ತವೆ ಎಂಬ ಶ್ರದ್ಧೇ ಮತ್ತು ಬಲವಾದ ನಂಬಿಕೆ ಸುಮಂಗಲೆಯರಲ್ಲಿ ಮನೆಮಾಡಿದೆ. ಹಾಗೂ ಇದು ಶ್ರೀಮಠದ ಸತ್ಸಂಪ್ರದಾಯವಾಗಿದೆ.
ಲಘು ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮ
ಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಉಚ್ಚಾಯ (ಲಘು ರಥೋತ್ಸವ ) ಪೂಜ್ಯ ಶ್ರೀಗಳ ಸನ್ನಿಧಿಯಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ಜರುಗಿತು. ಇದು ರಥೋತ್ಸವದ ಮುನ್ನಾದಿನ ನಡೆಯುವ ಸಂಪ್ರದಾಯವಾಗಿದೆ. ಜಾತ್ರೆಯಷ್ಟು ಜನರು ಇದರಲ್ಲಿ ಬಾಗಿಯಾಗಿದ್ದರು. ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೆರಗನ್ನ ತಂದರು.ವೇದಿಕೆ ಮೇಲೆ ನಾಡಿನ ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು.
ಮಹಾದಾಸೋಹದ ಪ್ರಸಾದ ತಯಾರಿಕೆಗೆ ಪೂಜ್ಯಶ್ರೀಗಳಿಂದ ಚಾಲನೆಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಶ್ರೀ Uವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಮಹಾದಾಸೋಹದಲ್ಲಿನ ಪ್ರಸಾದ ತಯಾರಿಕೆಗೆ ವಿದ್ಯೂಕ್ತ ಚಾಲನೆ ಮಾಡಿದರು. ಪೂಜ್ಯರ ಜೋತೆಗೆ ಎಸ್.ಮಲ್ಲಿಕಾರ್ಜುನ, ಚಂಪಾಲಾಲ್ಜೀ ಮೆಹತಾ, ಫಕೀರಪ್ಪ ಗಡ್ಡಿ, ಸಿದ್ದಣ್ಣ ನಾಲ್ವಾಡ, ಪ್ರಕಾಶ ಚಿನ್ನವಾಲರ, ಸಂಜಯ ಕೊತ್ಬಾಳ, ಪರಮೇಶಪ್ಪ ಕೊಪ್ಪಳ, ರಾಜು ಶೆಟ್ಟರ, ಶಿವು ಕೊಣಂಗಿ ಮೊದಲಾದ ಪುರ ಪ್ರಮುಖರು ಉಪಸ್ಥಿತರಿದ್ದರು.
ಮಂಗಳವಾರ, ಜನವರಿ 10, 2012
ಅನುಭಾವಿಗಳ ಅಮೃತ ಸಿಂಚನ
ಈ ಶ್ರೀಮಠದ ಜಾತ್ರೆ ಬಸವಪಟ್ಟ, ಬನದ ಹುಣ್ಣಿಮೆ ದಿವಸ ಕಳಸಾರೋಹಣ, ಅಡ್ಡಪಲ್ಲಕ್ಕಿ ಮಹೋತ್ಸವ, ದೇವಿಗೆ ಊಡಿ ತುಂಬುವ ಕಾರ್ಯಕ್ರಮ, ಲಘುರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.
ಶ್ರೀ ಮ. ನಿ. ಪ್ರ. ಜ. ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ ಅನುಭಾವಿಗಳ ಅಮೃತವಾಣಿಯ ಚಿಂತನಗೋಷ್ಠಿ ಕಾರ್ಯಕ್ರಮ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಿಂದೆ ಒಂದು ಜಾತ್ರಾ ಮಹೋತ್ಸವದಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಡಾ.ಚಂದ್ರಶೇಖರ ಕಂಬಾರ ರವರು ತಮ್ಮ ಅಮೃತವಾಣಿಯಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳುತ್ತಾ ತಾಯಿಯು ತನ್ನ ಮಗ ಹೇಗಿರಬೇಕೆಂದು ಅಪೇಕ್ಷಿಸುತ್ತಾಳೆಂದರೆ ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ನೀನಾಗು ಚಾಣಕ್ಯ, ಎಂಬ ನುಡಿವಾಣಿಯನ್ನು ತಾಯಂದಿರಿಗೆ ತಮ್ಮ ಮಕ್ಕಳನ್ನು ಹೀಗೆ ಬೆಳೆಸಬೇಕೆಂದು ಅನುಭವಿಯ ವಾಣಿಯನ್ನು ನಿಡಿದರು.
ಹಾಗೆಯೇ ಒಂದು ಸಲ ಜಾತ್ರಾ ಮಹೋತ್ಸವದ ಸಮಯದಲ್ಲಿ ರಾಮ್ ದೇವ್ ಗುರೂಜಿ ಬಂದಾಗ ಈ ಜಾತ್ರಾ ಮಹೋತ್ಸವದ ಜನಸಾಗರವನ್ನು ಕಂಡು ಆಶ್ಚರ್ಯಚಕಿತರಾಗಿ ಹೃದಯತುಂಬಿ ನುಡಿದಂತಹ ಮಾತುಗಳೆಂದರೆ ಉತ್ತರ ಹಿಂದೂಸ್ಥಾನದಲ್ಲಿ ೧೨ ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಈ ಜನಸಾಗರವನ್ನು ಕಾಣುತ್ತೇವೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಈ ಕೊಪ್ಪಳ ಜಾತ್ರಾ ಮಹೋತ್ಸವದ ಜನಸಾಗರವನ್ನು ನೋಡಿದರೆ ನನಗೆ ಆನಂದಾಶ್ಚರ್ಯಗಳೊಂದಿಗೆ ಈ ಪೀಠದ ತಪಸ್ವಿಗಳ ಪುಣ್ಯದ ಫಲವೋ, ಈ ನಾಡ ಜನರು ಭಯ, ಭಕ್ತಿ, ಭಾವನೆಗಳೊಂದಿಗೆ ಈ ಪೀಠಕ್ಕೆ ನಡೆದುಕೊಳ್ಳುತ್ತಿದ್ದಾರೆ. ತಪಸ್ವಿಗಳ ತಪಸ್ಸಿನ ಫಲವೇ ಇದನ್ನೆಲ್ಲಾ ನಡೆಸುತ್ತದೆ.
ಹಿಂದಿನ ಜಾತ್ರಾ ಮಹೋತ್ಸವದಲ್ಲಿ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಬಂದಾಗ ಶ್ರೀ ಮಠವನ್ನು ಅಭಿನವ ಶ್ರೀಗಳೊಂದಿಗೆ ನೋಡುತ್ತಾ ನೋಡುತ್ತಾ ಈ ಮಠದ ಕಲ್ಲು ಕಲ್ಲಿನಲ್ಲಿಯೂ ಆಧ್ಯಾತ್ಮಿಕ ಯೋಗ ತಪಸ್ಸಿನ ಫಲವಿದೆ. ಇಲ್ಲಿ ಬೇಡಿ ಬಂದ ಭಕ್ತ ಸಮೂಹಕ್ಕೆ ಕಾಮಧೇನು, ಕಲ್ಪವೃಕ್ಷ ಈ ಮಠ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಮಠದ ಜಾತ್ರಾ ಮಹೋತ್ಸವ ಧರ್ಮ ಮತ್ತು ಭಕ್ತಿಯ ಪ್ರತೀಕವಾಗಿದೆ. ಈ ಜಾತ್ರೆ ಇಡೀ ಭಾರತ ದೇಶದ ಪ್ರಸಿದ್ದ ಜಾತ್ರೆಗಳಲ್ಲೊಂದಾಗಿದೆ. ತಪಸ್ವಿಗಳ ತಪಸ್ಸಿನಿಂದ ಪವಾಡ ಪುರುಷರು ಆದಂತಹ ಕರ್ತೃವಿನ ಆಶೀರ್ವಾದ ಈ ಪೀಠಕ್ಕಿದೆ. ಈ ಪೀಠಾಧಿಪತಿಗಳು ತಮ್ಮ ಕರುಣಾಹೃದಯದಿಂದ ಭಕ್ತರ ಮನಗೆದ್ದಿದ್ದಾರೆ. ಈ ನಾಡು ಭಕ್ತ ಭಕ್ತಿಯ ಜನಸಾಗರವಾಗಿದೆ. ಇಂತಹ ಭಕ್ತಿ ಕೇಂದ್ರಗಳಲ್ಲಿ ತಿರುಪತಿ, ಧರ್ಮಸ್ಥಳ ಸನ್ನಿಧಾನ ಕ್ಷೇತ್ರಗಳಾಗಿವೆ. ಅದರಲ್ಲಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರನ ಕ್ಷೇತ್ರವು ಪವಿತ್ರ ತಾಣವೊಂದಾಗಿದೆ ಎಂದು ಪದ್ಮಭೂಷಣ, ಪದ್ಮಶ್ರೀ ಡಾ. ವಿರೇಂದ್ರ ಹೆಗ್ಗಡೆಯವರು ಹೇಳಿದಾಗ ಜನಸ್ಥೋಮ ಚಪ್ಪಾಳೆಗಳೊಂದಿಗೆ ಸ್ವಾಗತಿಸಿತು.
ಇಷ್ಟೆಲ್ಲಾ ಪ್ರಸಿದ್ದಿಗೆ ಭಕ್ತಿ ಕೇಂದ್ರವಾಗಿ ನಡೆಯಲು ಆರೋಗ್ಯ, ಅನ್ನ, ಶೈಕ್ಷಣಿಕ, ಆದ್ಯಾತ್ಮ, ಅಂಧ ಅಂಗವಿಕಲರಿಗೆ ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ತಾಯ್ಹೃದಯದಿಂದ ಬರಮಾಡಿಕೊಳ್ಳುವ ಪೀಠಾಧಿಪತಿಗಳ ನಡೆನುಡಿಗಳಿಂದ ಕೊಪ್ಪಳ ಶ್ರೀ ಗವಿಮಠ ಈ ನಾಡಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ.
ಲೇಖಕರು: ಶ್ರೀಮತಿ ಸರ್ವಮಂಗಳಾ ಜಿ. ಪಾಟೀಲ, ಹಲಗೇರಿ.ಶ್ರೀ ಕತೃವಿಗೆ ಅರ್ಪಣೆ
ಗವಿಯ ಸಿದ್ಧೇಶ ಬೇಗ ಬಾರೋ
ಪಾದವನೀಗ ತೋರಿರಯ್ಯ || ಪ ||
ಆದಿಯೋಳು ಶಿವನ ಅವತಾರ
ವೇದಾಗನಿದೊಡಿ ಪೂರ
ಸತ್ತ ಆಕಳು ಬದುಕಿಸಿದ ಧೀರ
ಧೀರ ಪಾರ ವೀರ
ವೇದಾಂತ ಸಾರದಿರೋ ಬಾರೋ || ೧ ||
ಅರಸನ ಭಕುತಿಗೆ ಒಲಿದು
ಅಂಬು ಜಾಡುವ ಕಳೆದು
ಸತ್ತ ಆಕಳು ಬದುಕಿಸಿ
ಆದಿ ದೇವನಾಗಿ ಮೆರೆದಿಹ
ಶಿವಯೋಗಿ ತಾನಾದ || ೨ ||
ಕೋಪಣಗಿರಿಯ ವಾಸ
೩೦ ಟ್ರ್ಯಾಕ್ಟರ್ ಕಲ್ಲು ಕಾಣಿಕೆ
ಕೊಪ್ಪಳ: ಕೊಪ್ಪಳದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಕೊಳ್ಳುತ್ತಾ ಕೊಪ್ಪಳ ನಾಡಿನ ಉತ್ಸವವಾಗಿ ಜರುಗುತ್ತಿರುವುದು ಶ್ರೀಗವಿಮಠದ ವೈಶಿಷ್ಟತೆಗೆ ಸಾಕ್ಷಿಯಾಗಿದೆ. ಶ್ರೀ ಗವಿಮಠದ ಮಹಾದಾಸೋಹಕ್ಕೆ ಮಹಾಪೂರದಂತೆ ಕಾಣಿಕೆ, ದೇಣಿಗೆಗಳು ಹರಿದುಬರುತ್ತಿರುವುದು ಶ್ರೀಗವಿಮಠದ ಪ್ರಸಿದ್ಧಿಗೆ ಪ್ರೇರಕವಾಗಿದೆ. ಈ ವರ್ಷದ ಮಹಾದಾಸೋಹಕ್ಕೆ ಎಲ್ಲಾ ಸ್ವರೂಪದ ದಾನಗಳು ಬರುತ್ತಿವೆ. ಬರದ ನಡುವೆ ಬರಪೂರದಂತೆ ಜಾತ್ರೆಯ ದಾಸೋಹಕ್ಕೆ ಕಾಣಿಕೆಗಳು ಬರುತ್ತಿವೆ ಕೊಪ್ಪಳದ ವಡ್ಡರ ಸಮಾಜದ ಭಕ್ತರು ಮೆರವಣಗೆ ಮೂಲಕ ೩೦ ಟ್ರ್ಯಾಕ್ಟರ್ ಕಲ್ಲುಗಳನ್ನು ಶ್ರೀಮಠಕ್ಕೆ ಕಾಣಿಕೆಯಾಗಿ ನೀಡಿದ್ದಾರೆ.
ಶ್ರೀ ಗವಿಮಠಕ್ಕೆ ಹರಿದುಬರುತ್ತಿರುವ ದವಸ ಧಾನ್ಯ ರೊಟ್ಟಿ ತರಕಾರಿ ಹಾಗೂ ಕುಂಬಳಕಾಯಿ
ಕೊಪ್ಪಳ: ಉತ್ತರ ಕರ್ನಾಟಕ ಭಾಗದ ಸಿದ್ಧಗಂಗೆಯೆಂದೇ ಖ್ಯಾತಿ ಪಡೆದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾ ದಾಸೋಹಕ್ಕಾಗಿ ಇಂದು ಸ್ಥಳೀಯ ಹಾಗೂ ಹೊರಗಿನ ಸದ್ಭಕ್ತರಿಂದ ದವಸಧಾನ್ಯ ಹಾಗೂ ರೊಟ್ಟಿ, ತರಕಾರಿಗಳ ಮಹಾಪೂರ ಹರಿದು ಬರುತ್ತಿದೆ. ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಆಟೋ ಚಾಲಕರ ಸಂಘದ ವತಿಯಿಂದ: ೧೭೫೦ ರೊಟ್ಟಿ, ೨ ಪಾಕೇಟು ಅಕ್ಕಿ, ಶ್ರೀ ಗಜಾನನ ಸೇವಾ ಸಮಿತಿ ಆಶ್ರಯ ಕಾಲೋನಿ ಹೂವಿನಾಳ ರಸ್ತೆಯ ಭಕ್ತರಿಂದ: ೩೧,೧೯೩.೦೦ ರೂಪಾಯಿ ಹಣ, ೧ ಕ್ವಿಂಟಾಲ್ ಅಕ್ಕಿ, ೨೫೦೦ ರೊಟ್ಟಿಗಳು, ಕಂದಕೂರ ಗ್ರಾಮಧ ಭಕ್ತರಿಂದ: ೭೦೦೧ ರೊಟ್ಟಿಗಳು, ಚಿಕ್ಕಬೊಮ್ಮನಾಳ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨೫ ಪಾಕೇಟು ದವಸಧಾನ್ಯಗಳು, ೧ ಪಾಕೇಟು ಅಕ್ಕಿ, ೨ ಕ್ವಿಂಟಾಲ್ ಮಾದಲಿ, ಕೊಳೂರು ಗ್ರಾಮದ ಭಕ್ತರಿಂದ: ೨ ಕ್ವಿಂಟಾಲ್ ಮಾದಲಿ, ೩ ಕ್ವಿಂಟಾಲ್ ಅಕ್ಕಿ, ೨ ಕ್ವಿಂಟಾಲ್ ಮೆಕ್ಕೆಜೋಳ, ೧ ಚೀಲ ಉಳ್ಳಾಗಡ್ಡಿ, ಯಾಪಲದಿನ್ನಿ ಗ್ರಾಮದ ಭಕ್ತರಿಂದ: ೨೫೦೦ ರೊಟ್ಟಿಗಳು, ಮಾಟಲದಿನ್ನಿ ಗ್ರಾಮದ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಪಾಕೇಟು ಅಕ್ಕಿ, ೧ ಪಾಕೇಟು ಈರುಳ್ಳಿ, ಮಸಬಹಂಚನಾಳ ಗ್ರಾಮದ ಭಕ್ತರಿಂದ: ೫೦೦೦ ರೊಟ್ಟಿಗಳು, ೬ ಪಾಕೇಟು ಅಕ್ಕಿ, ೨ ಪಾಕೇಟು ಈರುಳ್ಳಿ, ೨ ಪಾಕೇಟು ಜೋಳ, ೨ ಚೀಲ ಬದನೆಕಾಯಿ, ಕಲ್ಲತಾವರಗೇರಿ ಗ್ರಾಮದಿಂದ: ೩೦೦೦ ರೊಟ್ಟಿಗಳು, ಹೀರೇಸೂಳಿಕೇರಿ ಗ್ರಾಮದ ಭಕ್ತರಿಂದ: ೩೦೦೦ ರೊಟ್ಟಿಗಳು, ೨ ಚೀಲ ನೆಲ್ಲು, ಹ್ಯಾಟಿ ಗ್ರಾಮದ ಭಕ್ತರಿಂದ: ೩೫೦೦ ರೊಟ್ಟಿಗಳು, ೨೩ ಚೀಲ ದವಸಧಾನ್ಯಗಳು, ಬೈರನಾಯಕನ ಹಳ್ಳಿಯಿಂದ ೫೦೦೦ ರೊಟ್ಟಿ ೧೫ ಚೀಲ ದವಸಧಾನ್ಯ, ಬೆಳವನಾಳ ಗ್ರಾಮದಿಂದ ೭ ಚೀಲ ದವಸಧಾನ್ಯ, ಮಂಗಳೂರು ಗ್ರಾಮದ ಭಕ್ತರಿಂದ: ೮೦ ಚೀಲ ದವಸ ಧಾನ್ಯ, ೧೧೦೦೦ ರೊಟ್ಟಿ, ಬಿನ್ನಾಳ ಗ್ರಾಮದವರಿಂದ ೧೦೦೦೦ ರೊಟ್ಟಿ, ೪ ಚೀಲ ಉಳ್ಳಾಗಡ್ಡಿ, ೨ ಚೀಲ ಮೆಣಸಿನಕಾಯಿ, ಗೊಂಡಬಾಳ ಗ್ರಾಮಸ್ಥರಿಂದ ೬೦೦೦ ರೊಟ್ಟಿ ೧೦ ಚೀಲ ಕಾಳು ಕಡಿ, ೨ ಚೀಲ ಮೆಕ್ಕೆ ಜೋಳ, ೨ ಚೀಲ ಉಳ್ಳಾಗಡ್ಡಿ, ಅರಸಿಕೇರೆ ಗ್ರಾಮದಿಂದ ೪೦೦೦ ರೊಟ್ಟಿ, ೬ ಚೀಲ ಉಳ್ಳಾಗಡ್ಡಿ, ಹಿರೇಸಿಂದೋಗಿ ಗ್ರಾಮಸ್ಥರಿಂದ ೫೦೦೦ ರೊಟ್ಟಿ, ೨ ಪಾಕೀಟ ಅಕ್ಕಿ, ೩ ಪಾಕೀಟು ಮೆಕ್ಕೆಜೋಳ, ೩ ಗಾಡಿ ಉಸುಕು, ಕುಟುಗನಹಳ್ಳಿ ಗ್ರಾಮಸ್ಥರಿಂದ ೧೦ ಪಾಕೀಟ್ ಮೆಕ್ಕೆ ಜೋಳ, ೩ ಪಾಕೀಟ್ ದವಸ ಧಾನ್ಯ, ಯಲಮಗೇರಿ ಗ್ರಾಮದವರಿಂದ ೯ ಚೀಲ ದವಸ ಧಾನ್ಯ, ಕಾಮನೂರು ಗ್ರಾಮದವರಿಂದ ೧೦ ಚೀಲ ದವಸ ಧಾನ್ಯ, ಚನ್ನಪಟ್ಟನಹಳ್ಳಿ ಗ್ರಾಮದಿಂದ ೪ ಚೀಲ ಜೋಳ, ದೇವರಾಜ ಅರಸ ಕಾಲೋನಿ, ನಂದಿನಗರ, ಸಿದ್ದೇಶ್ವರ ಸರ್ಕಲ್ ಹಾಗೂ ಕವಲೂರು ಓಣಿ ಭಕ್ತರಿಂದ ೨೦೦೦೦ ರೊಟ್ಟಿಗಳು, ೧ ಟ್ರ್ಯಾಕ್ಟರ್ ದವಸ ಧಾನ್ಯ, ಗುಡದಳ್ಳಿ ಗ್ರಾಮದ ಭಕ್ತರಿಂದ ೫ ಟ್ರ್ಯಾಕ್ಟರ್ ಕಟ್ಟಿಗಿ, ೬೬ ಚೀಲ ದವಸ ಧಾನ್ಯಗಳು, ಕುಡಗುಂಟಿ ಗ್ರಾಮದವರಿಂಧ ೬೦೦೦ ರೊಟ್ಟಿ, ೨ ಪಾಕೀಟ್ ಉಳ್ಳಾಗಡ್ಡಿ, ೨ ಟ್ರ್ಯಾಕ್ಟರ್ ಕಟ್ಟಿಗೆ, ೧೬೧೦೧ ರೂ ನಗದು ಕಾಣಿಕೆ, ತಳಕಲ್ ಗ್ರಾಮದವರಿಂದ ೧೦೦೦೦ ರೊಟ್ಟಿ, ೨ ಪಾಕೀಟ್ ಕಾಳು, ಕುಣಿಕೇರಿ ಗ್ರಾಮದಿಂಧ ೫೦೦೦ ರೊಟ್ಟಿ ೭೦ ಪಾಕೀಟ್ ದವಸಧಾನ್ಯ, ಉದಯಶೆಟ್ಟಿ ಕೊಪ್ಪಳ ಇವರಿಂದ ೫ ಪಾಕೀಟ್ ಅಕ್ಕಿ, ಹೀಗೆ ಶ್ರೀಗವಿಮಠಕ್ಕೆ ದಾಸೋಹಕ್ಕಾಗಿ ಸಾಗರೋಪಾದಿಯಲ್ಲಿ ದವಸಧಾನ್ಯಗಳು, ರೊಟ್ಟಿಗಳು, ಸಿಹಿಯಾದ ಮಾದಲಿ, ತರಕಾರಿಗಳು ಹರಿದುಬಂದಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
ದೊಡ್ಡ ಗಂಟೆ ಕಾಣಿಕೆ
ಕೊಪ್ಪಳ: ಶ್ರೀ ಗವಿಮಠಕ್ಕೆ ಕಲತಾವರಗೇರಿ ಗ್ರಾಮದ ಭಕ್ತರಾದ ಶ್ರೀ ಭರಮಣ್ಣ ವಿರುಪಣ್ಣ ಲಳಗಿ ಇವರು ೪೫ ಕೆ.ಜಿ ತೂಕವಿರುವ ಹಿತ್ತಾಳೆಯ ಗಂಟೆಯನ್ನು ಸುಮಾರು ೨೦,೦೦೦ ರೂಪಾಯಿ ವೆಚ್ಚದಲ್ಲಿ ತಯಾರಿಸಿ ಶ್ರೀಮಠಕ್ಕೆ ಕಾಣಿಕೆ ಅರ್ಪಿಸಿದರು. ಪೂಜ್ಯ ಶ್ರೀಗಳು ದಾನಿಗಳಿಗೆ ಆಶೀರ್ವದಿಸಿದರು.
ಆಕಾಶವಾಣಿಯಲ್ಲಿ ರಥೋತ್ಸವದ ವೀಕ್ಷಕ ವಿವರಣೆ
ಕೊಪ್ಪಳ : ದಿನಾಂಕ ೧೧-೦೧-೨೦೧೨ ರಂದು ಬುಧವಾರಂದು ಸಂಜೆ ಜರುಗುವ ರಥೋತ್ಸವದ ವೀಕ್ಷಕ ವಿವರಣೆಯನ್ನು ಹಾಗೂ ದಿನಾಂಕ ೧೨-೦೧-೨೦೧೨ ರಂದು ಸಂಜೆ ೪-೩೦ ಕ್ಕೆ ಬಳಗಾನೂರು ಪೂಜ್ಯ ಶ್ರೀ ಶಿವಶಾಂತವೀರ ಶರಣರ ಧೀರ್ಘದಂಡ ನಮಸ್ಕಾರ ಈ ಕಾರ್ಯಕ್ರಮದ ನೇರ ವೀಕ್ಷಕ ವಿವರಣೆಯನ್ನು ಆಯಾ ದಿನಗಳಲ್ಲಿ ಮಧ್ಯಾಹ್ನ ೪-೩೦ ರಿಂದ ಸಂಜೆ ೬-೩೦ ರ ವರೆಗೇ ಹೊಸಪೇಟೆ ಆಕಾಶವಾಣಿಯು (ಎಫ್.ಎಂ. ಬ್ಯಾಂಡ್) ೧೦೦.೫ರ ಕಂಪನಾಂಕದ ಅಡಿಯಲ್ಲಿ ನೇರ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡಲಾಗುತ್ತದೆ. ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಕಲ್ಲು ಕಲ್ಲುಗಳಿಗೂ ಜೀವಸಲೆ
ಕೊಪ್ಪಳ: ಶ್ರೀಗವಿಮಠದ ಜಾತ್ರೆಗೆ ಇನ್ನು ಎರಡೇ ದಿನ ಬಾಕಿ ಇರುವಾಗ ಶ್ರೀಮಠವು ವಿದ್ಯೂತ್ ದೀಪಗಳಿಂದ ಸಿಂಗಾರಗೊಂಡು ಭಕ್ತರ ಕಣ್ಮನಗಳನ್ನು ತಣಿಸುತ್ತಲಿದೆ. ಶ್ರೀಮಠದ ಪ್ರತಿಯೊಂದು ಕಲ್ಲು ಕಲ್ಲುಗಳಿಗೂ ಜೀವಸಲೆ ಬಂದಂತೆ ಬಣ್ಣ ಬಣ್ಣದ ಚಿತ್ತಾರಗಳ ಚಲುವಿನಿಂದ ಕೂಡಿದ ಈ ವಿದ್ಯೂತ್ ದೀಪಗಳು ನೋಡುಗರ ಮನಸ್ಸಿಗೆ ಮುದವನ್ನು ನೀಡುತ್ತಲಿವೆ.
ಹಟ್ಟಿ ಗ್ರಾಮದ ಭಕ್ತರಿಂದ ತರಕಾರಿ ಹಾಗೂ ದಾನ್ಯಗಳ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಮಹಾಪೂರದಂತೆ ದವಸಧಾನ್ಯಗಳು,ತರಕಾರಿಗಳು ಶ್ರೀಮಠಕ್ಕೆ ಕಾಣಿಕೆಯಾಗಿ ಹರಿದು ಬರುತ್ತಿವೆ.ಇಂದು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಭಕ್ತರ ಕಾಣಿಕೆಯು ಅಪೂರ್ವವಾವಾಗಿದೆ. ೨ ಟ್ರ್ಯಾಕ್ಟರ್ ಕುಂಬಳಕಾಯಿ, ೨ ಟ್ರ್ಯಾಕ್ಟರ್ ಟಮ್ಯಾಟೋ, ೬೦೦೦ ರೊಟ್ಟಿಗಳು, ೫೦ ಚೀಲ ದವಸಧಾನ್ಯಗಳು, ೧ ಚೀಲ ಒಣ ಮೆಣಸಿನಕಾಯಿ ಹೀಗೆ ಶ್ರೀ ಗವಿಮಠದ ಜಾತ್ರಾ ದಾಸೋಹಕ್ಕಾಗಿ ವಿಶೇಷ ಕಾಣಿಕೆಗಳು ಶ್ರೀಮಠಕ್ಕೆ ಅರ್ಪಿತವಾಗಿವೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ಶ್ರೀಗವಿಮಠದ ಮಹಾದಾಸೋಹಕ್ಕೆ ಅಕ್ಕಿ ದೇಣಿಗೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀಗವಿಸಿದ್ಧೇಶ್ವರ ಮಹಾಜಾತ್ರೆಯ ಅಂಗವಾಗಿ ೧೧-೦೧-೨೦೧೨ ರಿಂದ ೨೩-೦೧-೨೦೧೨ ರ ಅಮವಾಸ್ಯೆಯ ತನಕ ನಡೆಯುವ ಮಹಾದಾಸೋಹಕ್ಕಾಗಿ ಕಾರಟಗಿ ಸುತ್ತಮುತ್ತಲಿನ ಗ್ರಾಮದಿಂದ ೨೫ ಕೆ.ಜಿಯ ೪೧೩ ಪಾಕೇಟು, ಶ್ರೀ ಸಿ.ಚಂದ್ರಶೇಖರ ನಿರ್ಮಿತಿ ಕೇಂದ್ರ ಇವರು ೨೫ ಕೆ.ಜಿಯ ೪೦೦ ಪಾಕೇಟು, ಶ್ರೀ ಎಂ.ಕೆ. ಮಿಲ್ ಕಾರಟಗಿಯಿಂದ ೨೫ ಕೆ.ಜಿಯ ೧೦೦ ಅಕ್ಕಿಪಾಕೇಟುಗಳು ಶ್ರೀಮಠಕ್ಕೆ ಅರ್ಪಿತವಾಗಿವೆ.
೫ ಕ್ವಿಂಟಾಲ್ ಬೆಲ್ಲ ದೇಣಿಗೆ : ಸಂಸ್ಥಾನ ಶ್ರೀ ಗವಿಮಠದ ಶ್ರೀಗವಿಸಿದ್ಧೇಶ್ವರ ಮಹಾಜಾತ್ರೆಯ ಮಹಾದಾಸೋಹಕ್ಕಾಗಿ ಶ್ರೀಪಾರಿಜಾತ ಹೋಟೆಲ ಮಾಲಕರು ೧ ಕ್ವಿಂಟಾಲ್ ಬೆಲ್ಲ, ಶ್ರೀವಿ.ಜಿ.ಕೊತಬಾಳರು ೧ ಕ್ವಿಂಟಾಲ ಬೆಲ್ಲ, ವೀರಣ್ಣ ಬುಳ್ಳಣ್ಣವರ ೧ ಕ್ವಿಂಟಾಲ್ ಬೆಲ್ಲ, ಡಾ.ಬುಳ್ಳಣ್ಣವರ ೨ ಕ್ವಿಂಟಾಲ್ ಬೆಲ್ಲ ಮತ್ತು ಹೊಸಪೇಟೆ ಬೆಲ್ಲದ ವ್ಯಾಪಾರಿಗಳಿಂದ ೧೦ ಕ್ವಿಂಟಾಲ್ ಬೆಲ ,೨೦ಕೆ.ಜಿ. ಹುಣಸೆಹಣ್ಣು ಹೀಗೆ ಒಟ್ಟು ೫ ಕ್ವಿಂಟಾಲ್ ಬೆಲ್ಲ ಶ್ರೀಮಠಕ್ಕೆ ಅರ್ಪಿತವಾಗಿದೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ದವಸಧಾನ್ಯಗಳ ದೇಣಿಗೆ: ಕುಷ್ಟಗಿ ತಾಲೂಕಾ ತಳವಗೇರಿ ಗ್ರಾಮದ ಭಕ್ತರಿಂದ ೭೦೦೧ ರೊಟ್ಟಿಗಳು, ೨ ಪಾಕೇಟು ಉಳ್ಳಾಗಡ್ಡಿ, ವದಗನಾಳ ಗ್ರಾಮದ ಭಕ್ತರಿಂದ ೧೫೦೦೦ ರೊಟ್ಟಿಗಳು, ಗಿಣಗೇರಿ ಗ್ರಾಮದ ಭಕ್ತರಿಂದ ೪೦೦೦ ರೊಟ್ಟಿಗಳು ಹಾಗೂ ೨೬ ಚೀಲ ದವಸಧಾನ್ಯಗಳು, ಭಾಣಾಪುರ ಗ್ರಾಮದ ಭಕ್ತರಿಂದ ೨೦೦೦ ರೊಟ್ಟಿಗಳು ಹಾಗೂ ೨ ಚೀಲಮೆಕ್ಕೆಜೋಳ, ೪ ಚೀಲ ಜೋಳ, ೩ ಪಾಕೇಟು ಅಕ್ಕಿ, ೩ ಚೀಲ ಉಳ್ಳಾಗಡ್ಡಿ, ಕನಕಗಿರಿಯಿಂದ ೫೦೦೦ ರೊಟ್ಟಿಗಳು, ೪ಚೀಲ ದವಸಧಾನ್ಯಗಳು, ೧ ಚೀಲ ತರಕಾರಿ, ೧ ಚೀಲಮೆಣಸಿನಕಾಯಿ, ೧ ಕ್ವಿಂಟಾಲ್ ಬೆಲ್ಲ, ಸಿದ್ನೆಕೊಪ್ಪ ಗ್ರಾಮದವ ಭಕ್ತರಿಂದ ೪೦೦೦ ರೊಟ್ಟಿಗಳು, ಚಿನ್ನಾಪುರ ಗ್ರಾಮದ ಭಕ್ತರಿಂದ ೧೦ ಚೀಲ ನೆಲ್ಲು, ೧ ಪಾಕೇಟು ಜೋಳ, ಬೂದಗುಂಪಾ ಗ್ರಾಮದ ಭಕ್ತರಿಂದ ೪ ಚೀಲ ನೆಲ್ಲು, ೧ ಚೀಲ ಜೋಳ, ಬೇವೂರು ಗ್ರಾಮದ ಭಕ್ತರಿಂದ ೫೦೦೦ ರೊಟ್ಟಿಗಳು, ೨ ಚೀಲ ದವಸಧಾನ್ಯಗಳು, ಗುಡಗೇರಿ ಗ್ರಾಮದ ಭಕ್ತರಿಂದ ೪೦೦೦ ರೊಟ್ಟಿಗಳು, ೧ ಟ್ರ್ಯಾಕ್ಟರ್ ಕಟ್ಟಿಗೆ,
ಎಸ್.ಎಂ.ಎಸ್ ನಲ್ಲಿ ಕೊಪ್ಪಳ ಜಾತ್ರೆಯ ಮಾಹಿತಿ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಸಂಪೂರ್ಣ ಮಾಹಿತಿಗಾಗಿ ಭಕ್ತರು ಪರದಾಡಬೇಕಿಲ್ಲ. ತಮ್ಮ ಮೊಬೈಲನ ಮೂಲಕ gavimath ಎಂದು ಟೈಪ್ ಮಾಡಿ ಈ ೮೦೫೦೯೩೦೨೬೮ ಸಂಖ್ಯೆಗೆ ಎಸ.ಎಮ್.ಎಸ್ ಕಳುಹಿಸಿ ತಕ್ಷಣ ಅಂದಿನ ಜಾತ್ರಾ ಕಾರ್ಯಕ್ರಮಗಳ ಮಾಹಿತಿ ನಿಮ್ಮ ಮೊಬೈಲ್ಗೆ ಲಭ್ಯ. ಅಷ್ಟೆ ಅಲ್ಲದೇ ನಿಮ್ಮ ಮೊಬೈಲ್ ಸಂಖ್ಯೆಗೆ ೨೦೧೨ರ ಜಾತ್ರೆಯ ಪ್ರತಿದಿನದ ಕಾರ್ಯಕ್ರಮಗಳ ವಿವರಣೆ ನಿತ್ಯವು ಎಸ್.ಎಮ್.ಎಸ್ ಮೂಲಕ ಕಳುಹಿಸಲಾಗುವದು. ಶ್ರೀಗವಿಮಠದ ಜಾತ್ರೆಯು ವಿನೂತನ ಪ್ರಯೋಗಗಳನ್ನು ಹುಟ್ಟು ಹಾಕುವದರ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ದಿಯಾಗುತ್ತಿದೆ. ಈಗಾಗಲೇ ಭಕ್ತರು ನೀಡಿದ ಮೊಬೈಲ್ಸ ಸಂಖ್ಯೆಗಳಿಗೆ ಜಾತ್ರಾ ಮಾಹಿತಿಯ ೧೭ ಸಾವಿರ ಎಸ್.ಎಂ.ಎಸ್ ಗಳನ್ನು ಕಳುಹಿಸಲಾಗಿದೆ. ಇದರ ಉಸ್ತುವಾರಿಯ ಸೇವೆಯನ್ನು ಕೊಪ್ಪಳದ ಕಿಯೋನಿಕ್ಸ ಪ್ರಾಂಚಾಯಸೀ ಕೇಂದ್ರದ ಮಂಜುನಾಥ ಉಲ್ಲತ್ತಿಯವರು ನಿರ್ವಹಿಸುತ್ತಿದ್ದಾರೆ.
ದಾಸೋಹಕ್ಕಾಗಿ ದವಸ-ಧಾನ್ಯಗಳು ಹಾಗೂ ರೊಟ್ಟಿಗಳು
ಕೊಪ್ಪಳ; ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯುವ ಮಹಾದಾಸೋಹಕ್ಕಾಗಿ ಜಿಲ್ಲೆಯಾಧ್ಯಂತ ಧವಸ-ಧಾನ್ಯಗಳು,ರೊಟ್ಟಿಗಳು ಶ್ರೀಮಠಕ್ಕೆ ಅರ್ಪಿತವಾಗುತ್ತಲಿವೆ.
ದವಸ-ಧಾನ್ಯಗಳು -. ಕನಕಗಿರಿಯಿಂದ ೧೭೭ ಪಾಕೇಟು ಸಜ್ಜಿ, ೪ ಪಾಕೇಟು ಜೋಳ, ೧ ಪಾಕೇಟು ಸಕ್ರಿ, ೧ ಪಾಕೇಟು ಬೆಲ್ಲ, ೨೫ ಪಾಕೇಟು ಅಕ್ಕಿ, ಕಟಗಿಹಳ್ಳಿ ಗ್ರಾಮದಿಂದ ೨ ಚೀಲ ಸಜ್ಜೆ, ನಿಲೋಗಲ್ ಗ್ರಾಮದಿಂದ, ೨ ಚೀಲ ಸಜ್ಜೆ, ೧ ಚೀಲ ಮೆಕ್ಕೆ ಜೋಳ, ೨ ಪಾಕೇಟ ಅಕ್ಕಿ, ಯಡ್ಡೋಣಿ ಗ್ರಾಮದಿಂದ ೮ ಚೀಲ ನೆಲ್ಲು, ನರೇಗಲ್ ಗ್ರಾಮದಿಂದ ೩೦ ಚೀಲ ನೆಲ್ಲು, ೬ ಚೀಲ ಮೆಕ್ಕೆ ಜೋಳ,ಕಂಪಸಾಗರ ಗ್ರಾಮದಿಂದ ೧೧ ಚೀಲ ನೆಲ್ಲು, ಅಗಳಕೇರಾಗ್ರಾಮದಿಂದ ೨೦ ಚೀಲ ನೆಲ್ಲು, ಹಿಟ್ನಾಳ ಗ್ರಾಮದಿಂದ ೪೭ ಚೀಲ ನೆಲ್ಲು,ಹುಣಸಿಹಾಳ ಗ್ರಾಮದಿಂದ ೨ ಪಾಕೇಟು ಅಕ್ಕಿ, ೬ ಪಾಕೇಟು ಉಳ್ಳಾಗಡ್ಡಿ, ಶ್ರೀ ಗವಿಸಿದ್ಧೇಶ್ವರ ಶೆಂಗಾಬೀಜ ವರ್ತಕರ ಸಂಘವು ೪ ಕ್ವಿಂಟಾಲ್ ೨೦ ಕೆ.ಜಿ ಶೇಂಗಾ ಬೀಜ,ಶಿವಪೂ ಗ್ರಾಮದಿಂದ ೨೪ ಚೀಲ ನೆಲ್ಲು, ೩ ಪಾಕೇಟು ಅಕ್ಕಿ, ಮುಸಲಾಪುರ ಗ್ರಾಮದಿಂದ ೪೦ ಪಾಕೇಟು ದವಸ-ಧಾನ್ಯ ನಿಟ್ಟಾಲಿ ಗ್ರಾಮದಿಂದ ೩೦ ಚೀಲ ದವಸಧಾನ್ಯಗಳು,೨ ಚೀಲ ಹಸೆಮೆಣಸಿನಕಾಯಿ, ೧ ಚೀಲ ತೆಂಗಿನಕಾಯಿ, ೬ ಪಾಕೇಟು ಈರುಳ್ಳಿ, ಶ್ರೀಮಠಕ್ಕೆ ಅರ್ಪಿಸಿದ್ದಾರೆ.
ರೊಟ್ಟಿಗಳು - ಯಡ್ಡೋಣಿ ಗ್ರಾಮದ ಭಕ್ತರಿಂದ ೫೦೦೦,ಕೋನಸಾಗರ ಗ್ರಾಮದಿಂದ ೨೩೫೦,ನಿಲೂಗಲ್ ಗ್ರಾಮದಿಂದ ೨೫೦೦, ಕಟಗಿಹಳ್ಳಿ ಗ್ರಾಮದಿಂದ ೩೫೦೦, ಬೆಟಗೇರಿ ಗ್ರಾಮದಿಂದ ೨೦೦೦, ಗುತ್ತೂರು ಗ್ರಾಮದಿಂದ ೧೧೦೦೦, ಗುನ್ನಾಳ ಗ್ರಾಮದಿಂದ ೩೦೦೦, ಚಂಡೂರ ಗ್ರಾಮದಿಂದ ೨೫೦೦, ಅರಕೇರಿ ಗ್ರಾಮದಿಂದ ೨೫೦೦,ಚಂಡಿಹಾಳ ಗ್ರಾಮದಿಂದ ೨೦೦,ಹುಣಸಿಹಾಳ ಗ್ರಾಮದಿಂದ ೧೦೦೦೦, ಮುಸಲಾಪುರ ಗ್ರಾಮದಿಂದ ೧೨೦೦೦, ನಿಟ್ಟಾಲಿ ಗ್ರಾಮದಿಂದ ೪೦೦೦ ರೊಟ್ಟಿಗಳನ್ನು ಶ್ರೀಮಠಕ್ಕೆ ಅರ್ಪಿಸಿದ್ದಾರೆ. ದಾನಿಗಳಿಗೆಲ್ಲ ಪೂಜ್ಯ ಶ್ರೀಗವಿಸಿದ್ಧೇಶ್ವರ ಶ್ರೀಗಳು ಆಶಿರ್ವದಿಸಿದ್ದಾರೆ.
ದಾಸೋಹಕ್ಕಾಗಿ ೧೧೧ ಕ್ವಿಂಟಾಲ್ ಮಾದಲಿ- ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ವರ್ಷದಿಂದ ವರ್ಷಕ್ಕೆ ನೂತನ ಕಳೆಯಿಂದ ಕಂಗೊಳಿಸುತ್ತಿರುವದು ನಿಜಕ್ಕ್ಕೂ ಅಚ್ಚರಿಯಾಗಿದೆ. ಈ ಭಾಗದ ಸಿದ್ದಗಂಗೆಯೆಂದು ಹೆಸರಾಗುತ್ತಿರುವ ಶ್ರೀ ಗವಿಮಠದ ಮಹಾದಾಸೋಹವು ಭಕ್ತಕುಲಕ್ಕೆ ಒಂದು ಪವಾಡ ಎನ್ನುವಂತಿದೆ. ದಿನಾಲು ೧೫ ರಿಂದ ೨೦ ಸಾವಿರದಷ್ಟು ಭಕ್ತರು ಪ್ರಸಾದದ ಸವಿಯನ್ನು ಅನುಭವಿಸುತಾರೆ. ಈ ಮಹಾದಾಸೋಹಕ್ಕಾಗಿ ಅನೇಕ ಭಕ್ತರು ತನುಮನಧನದಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಗರದ ನಂದಿನಗರದ ಶ್ರೀ ಶಿವಪ್ಪ ಶೆಟ್ಟರ್ ಮಿಲ್ಲ್ನಲ್ಲಿ ಶ್ರೀ ಗವಿಸಿದ್ಧೇಶ್ವರ ಸೇವಾಸಮಿತಿಯ ಗೆಳೆಯರ ಬಳಗವು ಸೇರಿಕೊಂಡು ಭಕ್ತಾಧಿದಳಿಗೆ ಒಟ್ಟು ೧೧೧ ಕ್ವಿಂಟಾಲ್ ಮಾದಲಿಯನ್ನು ತಯಾರಿಸುವ ಹೊಣೆ ಹೊತ್ತಿದೆ.
ಬಳಸಲ್ಪಟ್ಟ ವಸ್ತುಗಳು: ೪೧ ಕ್ವಿಂಟಾಲ್ ಗೋಧಿ, ೨ ಕ್ವಿಂಟಾಲ್ ಕಡ್ಲಿಬೇಳೆ,೬೪ ಕ್ವಿಂಟಲ್ ಬೆಲ್ಲ,೭೦ ಕೆ.ಜಿ. ಕಸಕಸಿ,೨೫ ಕೆ.ಜಿ. ಸೊಂಟಿ,೧೦ ಕೆ.ಜಿ.ಯಾಲಕ್ಕಿ, ೨ ಕ್ವಿಂಟಾಲ್ ಗಿಟುಗ ಕೊಬ್ಬರಿ, ೧ಕ್ವಿಂಟಾಲ್ ೨೦ ಕೆ.ಜಿ ಪುಠಾಣಿ ಈ ಎಲ್ಲ ವಸ್ತುಗಳನ್ನು ಬಳಸಿಕೊಂಡು ಒಟ್ಟು ೧೧೧ ಕ್ವಿಂಟಾಲ್ ಮಾದಲಿಯನ್ನು ತಯಾರಿಸುವ ಗುರುತರ ಜವಾಬ್ದಾರಿಯನ್ನು ಶ್ರೀ ಗವಿಸಿದ್ಧೇಶ್ವರ ಸೇವಾಸಮಿತಿಯ ಗೆಳೆಯರ ಬಳಗವು ಹೊಂದಿದೆ. ತಯಾರಿ: ಹಲಗೇರಿ,ಕೋಳುರು,ಬನ್ನಿಕೊಪ್ಪ,ವದ್ನಾಳ.ಕಾಟ್ರಳ್ಳಿ,ಕವಲೂರು,ಮೈನಳ್ಳಿ, ಹಿರೇಸಿಂಧೋಗಿ, ಹಂದ್ರಾಳ ಈಮೊದಲಾದ ಗ್ರಾಮಗಳ ಸದ್ಭಕ್ತರು ಹಿಟ್ಟನ್ನು ಮಾಡಿಕೊಂಡು ರೊಟ್ಟಿಗಳನ್ನು ತಯಾರಿಸಿಕೊಂಡು ಶಿವಪ್ಪ ಶೆಟ್ಟರ ಮಿಲ್ಲಿನಲ್ಲಿ ತಂದುಕೊಡುತ್ತಾರೆ. ಅಲ್ಲಿ ದಿನಾಲೂ ನೂರಾರು ಮಹಿಳೆಯರು ಉಚಿತವಾಗಿ ಪುಡಿಮಾಡಿ ಬೆಲ್ಲವನ್ನು ಬೆರೆಸಿ,ಇತರೇ ಪದಾರ್ಥಗಳನ್ನು ಸಮ್ಮಿಶ್ರಣ ಮಾಡಿ ಸಿಹಿಯಾದ ಮಾದಲಿಯನ್ನು ತಯಾರಿಸುವ ಕಾರ್ಯ ಚುರುಕಾಗಿ ನಡೆಯುತ್ತಿದೆ. ಶ್ರೀಗವಿಸಿದ್ಧೇಶ್ವರ ಸೇವಾಸಮಿತಯ ಗೆಳೆಯರ ಬಳಗದ ಗವಿ ಸಿದ್ದಪ್ಪತಳಕಲ್,ರಾಜುಶೆಟ್ಟರ್,ಪತ್ರೆಪ್ಪಪಲ್ಲೇದ,ರೇಣುಕಾರಾಧ್ಯಕೊಂಡದಕಟ್ಟಿಮಠ,ಬಸವರಾಜರಾಜೂರು,ಅಶೋಕಬಜಾರಮಠ,ಚಂದ್ರಶೇಖರಕವಲೂರ,ಮಹೇಂದ್ರಚೋಪ್ರಾ ಈ ಮೊದಲಾದ ಗೆಳೆಯರಬಳಗವು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಈ ಸಿಹಿಯಾದ ಮಾದಲಿಯನ್ನು ದಿನಾಂಕ ೦೯-೦೧-೨೦೧೨ ರಂದು ಸೋಮವಾರ ಶ್ರೀಮಠಕ್ಕ ತಲುಪಿಸಲಾಗುವದೆಂದು ಯಜಮಾನರಾದ ಶಿವಪ್ಪಶೆಟ್ಟರು, ಮತ್ತು ಗವಿಸಿದ್ದಪ್ಪ ತಳಕಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಶ್ರೀಮಠದ ತುಂಬೆಲ್ಲಾ ರೊಟ್ಟಿಗಳ ಸಪ್ಪಳ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಶ್ರೀಮಠಕ್ಕೆ ಧವಸ-ಧಾನ್ಯಗಳು, ರೊಟ್ಟಿಗಳು, ಸಿಹಿಮಾದಲಿ, ತುಪ್ಪ, ಹಾಲು ಮೊದಲಾದವುಗಳು ಅರ್ಪಿತವಾಗುತ್ತಲಿವೆ. ಇಂದು ಹಿರೇಮನ್ನಾಪುರ ಗ್ರಾಮದಿಂದ ೧೦೦೦೦,ಕಾಟ್ರಳ್ಳಿ ಗ್ರಾಮದಿಂದ ೨೦೦೦, ಹಿರೇಬೊಮ್ಮನಾಳ ಗ್ರಾಮದಿಂದ ೫೦೦೦, ಕಲ್ಲೂರು ಗ್ರಾಮದಿಂದ ೧೫೦೦ ರೊಟ್ಟಿ,೪ ಚೀಲ ಉಳ್ಳಾಗಡ್ಡಿ, ನರೇಗಲ್ ಗ್ರಾಮದಿಂದ ೧೦೦೦ ರೊಟ್ಟಿ, ೩೪ ಚೀಲ ದವಸಧಾನ್ಯಗಳು,ಹುಲಗಿ ಗ್ರಾಮದಿಂದ ೨೦೦೦ ರೊಟ್ಟಿ ಹಾಗೂ ಗಿಣಗೇರಿ ಗ್ರಾಮದಿಂದ ಒಂದು ಕ್ವಿಂಟಾಲ್ ಮಾದಲಿ ಹೀಗೆ ರೊಟ್ಟಿಗಳು ಶ್ರೀಮಠದ ತುಂಬೆಲ್ಲ ಸಪ್ಪಳ ಮಾಡುತ್ತಿವೆ. ವಿವಿಧ ಗ್ರಾಮಗಳಿಂದ ಭಕ್ತರು ಡೊಳ್ಳು ಕುಣಿತ,ನಂದಿಕೋಲು ಕುಣಿತ, ಭಜನೆಯೊಂದಿಗೆ ಶ್ರೀಮಠಕ್ಕೆ ಆಗಮಿಸುತ್ತಿರುವದು ಜಾತ್ರೆಯ ವಿಶೇಷವಾಗಿದೆ.
ದುರ್ಗಾದೇವಿಮಿತ್ರ ಮಂಡಳಿಯಿಂದ ೫೧೦೦೦ ರೂಪಾಯಿ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಗರದ ದುರ್ಗಾದೇವಿಮಿತ್ರ ಮಂಡಳಿ(ರಿ) ಗಡಿಯಾರಕಂಭ ಈ ಸಮಿತಿಯು ೫೧೦೦೦ ರೂಪಾಯಿಗಳನ್ನು ಶ್ರೀಮಠದ ವಿದ್ಯಾರ್ಥಿನಿಲಯಕ್ಕೆ ಕಾಣಿಕೆಯನ್ನಾಗಿನೀಡಿದೆ. ಸಮಿತಿಯ ಆಧ್ಯಕ್ಷರಾದ ದಾಮೋದರ್ ವೆರ್ಣೆಕರ್,ಈರಣ್ಣ ಸಂಡೂರು, ಉಮೇಶ ಕುರಡೇಕರ್,ಅಜ್ಜಪ್ಪ ಚರಂತಿಮಠ, ರಾಘವೇಂದ್ರ,ಶಿವುಕೋಣಂಗಿ, ಶಿವು ಹಕ್ಕಾಪಕ್ಕಿ, ರಾಜು ಬೆಳವಣಕಿ, ಮಂಜು ಬೋಧಾ, ಮೊದಲಾದ ಪದಾಧಿಕಾರಿಗಳು ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳಿಗೆ ಕಾಣಿಕಯನ್ನು ಸಮರ್ಪಿಸಿದರು. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ಬಸವಪಟ ಆರೋಹಣ ಕಾರ್ಯಕ್ರಮ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಧೀಕೃತ ಕಾರ್ಯಕ್ರಮವು ದಿನಾಂಕ ೦೭-೦೧-೨೦೧೨ ಶನಿವಾರ ಸಂಜೆ ೬ Wಂಟೆಗೆ ಬಸವಪಟ ಆರೋಹಣ ಹಾಗೂ ಜಂಗಮ ದಾಸೋಹದ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದೆ.ಈಕಾರ್ಯಕ್ರಮದಲ್ಲಿ ಸದ್ಭಕ್ತರು ಭಾಗಿಯಾಗಿ ಶ್ರೀಗವಿಸಿದ್ಧೇಶ್ವರರ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಗವಿಮಠದ ಜಾತ್ರೆಗೆ ದವಸ ಧಾನ್ಯ & ರೊಟ್ಟಿಗಳ ಕಾಣಿಕೆ
ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ಕೊಪ್ಪಳ ನಾಡಿನ ಉತ್ಸವವಾಗಿ ರೂಪಿತವಾಗುತ್ತಿರುವುದು ಸಂತೋಷಕರ ವಿಷಯ. ಅಜ್ಜನ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ದವಸ ಧ್ಯಾನ್ಯ ಹಾಗೂ ರೊಟ್ಟಿಗಳ ಕಾಣಿಕೆಯು ಹರಿದು ಬಂದಿದೆ. ಯಲಬುರ್ಗಾ ತಾಲ್ಲೂಕಿನ ನೆಲಜೇರಿ ಗ್ರಾಮದ ಭಕ್ತರು ೫೦೦೦ ರೊಟ್ಟಿ ಹಾಗೂ ೩೦ ಪಾಕೇಟ್ ಜೋಳ, ಬುಡಶೆಟ್ನಾಳ ಗ್ರಾಮದವರಿಂದ ೧೦೦೦೦ ರೊಟ್ಟಿಗಳು, ನಗದು, ೬೫೦೦ ರೊಟ್ಟಿ, ೪೫ ಚೀಲ ಧಾನ್ಯ, ಬಹಾದ್ದೂರ ಬಂಡಿ ಹೊಸಳ್ಳಿ ಗ್ರಾಮದ ಸದ್ಭಕ್ತರು ೫೦೦೦ ರೊಟ್ಟಿ ೩ ಚೀಲ ಧಾನ್ಯ ಕುಣಿಕೇರಿ ತಾಂಡದ ಭಕ್ತರಿಂದ ೧೭ ಪಾಕೇಟ್ ಮೆಕ್ಕೆ ಜೋಳ, ೨ ಚೀಲ ಜೋಳವನ್ನು ಶ್ರೀ ಗವಿಮಠದ ಜಾತ್ರೆಯ ದಾಸೋಹಕ್ಕಾಗಿ ದವಸ ಧಾನ್ಯ, ರೊಟ್ಟಿಗಳ ಕಾಣಿಕೆಗಳು ಭಕ್ತರಿಂದ ಹರಿದು ಬರುತ್ತಿವೆ.
ವಾಸ್ತು ಶಿಲ್ಪದ ಕಂಬಗಳ ಸಾಲು
ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಸಮಾಜಮುಖಿ ಸ್ಪಂದನೆಗಳಿಗೆ ಸಾಕ್ಷಿಯಾಗುತ್ತಿದೆ. ಈ ವರ್ಷದ ಪ್ರಮುಖವಾದ ಕಾರ್ಯಶೀಲತೆಯ ಪ್ರತೀಕವೇ ವಾಸ್ತುಶಿಲ್ಪ ವಿನ್ಯಾಸಗಳ ಮೂಲಕ ಸಿದ್ಧಗೊಳ್ಳುತ್ತಿರುವ ಕಲ್ಲಿನ ಕಂಬಗಳ ಸಾಲುಗಳು ಈ ವರ್ಷದ ಭಕ್ತರ ಆಕರ್ಷಣೆಯಾಗಿದೆ. ಗದ್ದುಗೆಯ ಸ್ಥಳದಲ್ಲಿ ಈ ವರ್ಷದಿಂದ ಅದ್ಭುತವಾಗಿ ಸಿದ್ದಗೊಳ್ಳುತ್ತಿರುವ ಚರಿತ್ರೆಯ ಹಿನ್ನಲೆಯ ಕಂಬಗಳ ಸಾಲು, ಭಕ್ತರನ್ನು ಮನಸೂರೆಗೊಳ್ಳುತ್ತಿವೆ. ಇಂತಹ ಚರಿತ್ರಾರ್ಹ ಕಾರ್ಯಶೀಲ, ಕ್ರಿಯಾಶೀಲತೆಯ ಮೂಲಕ ಶ್ರೀ ಶ್ರೀ ಮ. ನಿ. ಪ್ರ. ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಾಂಸ್ಕೃತಿಕ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಮಠದ ಭಕ್ತರೊಬ್ಬರು ಹೇಳುತ್ತಾರೆ.
ಅಜ್ಜನ ಜಾತ್ರೆಗೆ ಸ್ವಾಗತ ಕೋರುವ ಪ್ಲೆಕ್ಸಗಳು
ಸಂಸ್ಥಾನ ಶ್ರೀಗವಿಮಠದ ಶ್ರೀ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಯು ಇದೇ ದಿನಾಂಕ ೧೧-೦೧-೨೦೧೧ ರಂದು ಜರುಗುತ್ತಿರುವ ಹಿನ್ನಲೆಯಲ್ಲಿ ನಗರದ ತುಂಬೆಲ್ಲಾ ಜಾತ್ರೆಗೆ ಆಗಮಿಸುತ್ತಿರುವ ಜನರನ್ನು ಸ್ವಾಗತಿಸಲಿಕ್ಕಾಗಿ ಬಣ್ಣ ಬಣ್ಣದ ಪ್ಲೆಕ್ಸಗಳುಗಳು ರಾರಾಜಿಸುತ್ತವೆ. ಪುರದ ಪ್ರಮುಖರು, ರಾಜಕೀಯ ಮುಖಂಡರು,ಸಂಘ ಸಂಸ್ಥೆಯ ಪದಾಧಿಕಾರಿಗಳು ಈ ಮೊದಲಾದವರು ಈ ನೆಲದ ಪಾವನ ಪುರುಷ ಶ್ರೀಗವಿಸಿದ್ಧೇಶ್ವರರ ಜಾತ್ರೆಗೆ ತುಂಬು ಮನಸ್ಸಿನಿಂದ ಸ್ವಾಗತ ಕೋರುತ್ತಿರುವ ಪ್ಲೆಕ್ಸಗಳು ಜಾತ್ರೆಯ ಮುನ್ನಾ ದಿನಗಳ ಆಕರ್ಷಣೆಗಳಲ್ಲಿ ಒಂದಾಗಿದೆ.
ಅಜ್ಜನ ಜಾತ್ರೆಯ ದಾಸೋಹಕ್ಕಾಗಿ ೨೫೦೦ ಲೀಟರ್ ಹಾಲು
ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಯ ಮಹಾದಾಸೋಹಕ್ಕಾಗಿ ಭಕ್ತರಿಂದ ೨೫೦೦ ಲೀಟರು ಹಾಲು ಅರ್ಪಿತವಾಗುತ್ತಲಿದೆ. ಪ್ರಾರಂಭದಿಂದ ಐದು ದಿನಗಳ ಕಾಲ ಭಕ್ತಾಧಿಗಳಿಗೆ ಸಿಹಿ ಮಾದಲಿಯ ಪ್ರಸಾದವಿರುವದರಿಂದ ಹಾಲಿನ ಅವಶ್ಯಕತೆಯಿರುವದನ್ನು ಮನಗಂಡು ಇದರ ವ್ಯವಸ್ಥೆಯನ್ನು ಭಕ್ತರು ಮಾಡಿದ್ದಾರೆ. ಈಗಾಗಲೇ ಹೊಸಪೇಟೆಯ ಸಿ.ಓ.ಎಸ್.ಎಲ್.ಆರ್ ಮೆಟಲಿಕ್ಸ ಕಂಪನಿಯ ಕೆ.ಸಿ.ಸಿದ್ದಪ್ಪ ೫೦೦ ಲೀಟರು, ಕೆಸರಟ್ಟಿಯ ಬಸವರಾಜ iಳಗಿ ೫೦೦ ಲೀಟರ್, ಆಂದ್ರದ ಗೋವಿಂದ ಹೊಳಗುಂದಿ ೨೫೦ ಲೀಟರು, ಹೊಸಪೇಟೆಯ ಸುಬ್ಬಾರಾವ್ ೨೫೦ ಲೀಟರು, ಕೊಪ್ಪಳದ ದೇವಿ ವೈನ್ ಶಾಪ್ನ ಮಾಲಕ ಬಸವನಗೌಡ ಶಿವನಗೌಡ ನರೆಗಲ್ ರಿಂದ ೨೫೦ ಲೀಟರು ಹಾಲು ಅರ್ಪಣಾಸೇವೆಯನ್ನು ಮಾಡಿದ್ದಾರೆಂದು ಹಾಗೂ ಇನ್ನು ೧೨೫೦ ಲೀಟರು ಹಾಲನ್ನು ಸಂಗ್ರಹಿಸುವ ಯೋಜನೆ ಇದೆಯೆಂದು ದಾಸೋಹ ಸಮಿತಿಯ ಶಿವಕುಮಾರ ಕೋಣಂಗಿ,ಪ್ರಕಾಶ ಚಿನಿವಾಲರು, ರಾಜು ಶಿವಪ್ಪ ಶೆಟ್ರು,ಬಸವರಾಜ ಗೌರಾ ಮಾಧ್ಯಮಕೇಂದ್ರಕ್ಕೆ ತಿಳಿಸಿದ್ದಾರೆ.
ಸೋಮವಾರ, ಜನವರಿ 2, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)