ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಜನವರಿ 10, 2012

ಅನುಭಾವಿಗಳ ಅಮೃತ ಸಿಂಚನ



ಈ ಶ್ರೀಮಠದ ಜಾತ್ರೆ ಬಸವಪಟ್ಟ, ಬನದ ಹುಣ್ಣಿಮೆ ದಿವಸ ಕಳಸಾರೋಹಣ, ಅಡ್ಡಪಲ್ಲಕ್ಕಿ ಮಹೋತ್ಸವ, ದೇವಿಗೆ ಊಡಿ ತುಂಬುವ ಕಾರ್ಯಕ್ರಮ, ಲಘುರಥೋತ್ಸವದೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಗುತ್ತದೆ.
ಶ್ರೀ ಮ. ನಿ. ಪ್ರ. ಜ. ಗವಿಸಿದ್ಧೇಶ್ವರ ಮಹಾರಥೋತ್ಸವದಲ್ಲಿ ಅನುಭಾವಿಗಳ ಅಮೃತವಾಣಿಯ ಚಿಂತನಗೋಷ್ಠಿ ಕಾರ್ಯಕ್ರಮ ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಿಂದೆ ಒಂದು ಜಾತ್ರಾ ಮಹೋತ್ಸವದಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತರಾದ ಡಾ.ಚಂದ್ರಶೇಖರ ಕಂಬಾರ ರವರು ತಮ್ಮ ಅಮೃತವಾಣಿಯಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳುತ್ತಾ ತಾಯಿಯು ತನ್ನ ಮಗ ಹೇಗಿರಬೇಕೆಂದು ಅಪೇಕ್ಷಿಸುತ್ತಾಳೆಂದರೆ ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ನೀನಾಗು ಚಾಣಕ್ಯ, ಎಂಬ ನುಡಿವಾಣಿಯನ್ನು ತಾಯಂದಿರಿಗೆ ತಮ್ಮ ಮಕ್ಕಳನ್ನು ಹೀಗೆ ಬೆಳೆಸಬೇಕೆಂದು ಅನುಭವಿಯ ವಾಣಿಯನ್ನು ನಿಡಿದರು. 
ಹಾಗೆಯೇ ಒಂದು ಸಲ ಜಾತ್ರಾ ಮಹೋತ್ಸವದ ಸಮಯದಲ್ಲಿ ರಾಮ್ ದೇವ್ ಗುರೂಜಿ ಬಂದಾಗ ಈ ಜಾತ್ರಾ ಮಹೋತ್ಸವದ ಜನಸಾಗರವನ್ನು ಕಂಡು ಆಶ್ಚರ್ಯಚಕಿತರಾಗಿ ಹೃದಯತುಂಬಿ ನುಡಿದಂತಹ ಮಾತುಗಳೆಂದರೆ ಉತ್ತರ ಹಿಂದೂಸ್ಥಾನದಲ್ಲಿ ೧೨ ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಈ ಜನಸಾಗರವನ್ನು ಕಾಣುತ್ತೇವೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಈ ಕೊಪ್ಪಳ ಜಾತ್ರಾ ಮಹೋತ್ಸವದ ಜನಸಾಗರವನ್ನು ನೋಡಿದರೆ ನನಗೆ ಆನಂದಾಶ್ಚರ್ಯಗಳೊಂದಿಗೆ ಈ ಪೀಠದ ತಪಸ್ವಿಗಳ ಪುಣ್ಯದ ಫಲವೋ, ಈ ನಾಡ ಜನರು ಭಯ, ಭಕ್ತಿ, ಭಾವನೆಗಳೊಂದಿಗೆ ಈ ಪೀಠಕ್ಕೆ ನಡೆದುಕೊಳ್ಳುತ್ತಿದ್ದಾರೆ. ತಪಸ್ವಿಗಳ ತಪಸ್ಸಿನ ಫಲವೇ ಇದನ್ನೆಲ್ಲಾ ನಡೆಸುತ್ತದೆ. 
ಹಿಂದಿನ ಜಾತ್ರಾ ಮಹೋತ್ಸವದಲ್ಲಿ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರು ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಬಂದಾಗ ಶ್ರೀ ಮಠವನ್ನು ಅಭಿನವ ಶ್ರೀಗಳೊಂದಿಗೆ ನೋಡುತ್ತಾ ನೋಡುತ್ತಾ ಈ ಮಠದ ಕಲ್ಲು ಕಲ್ಲಿನಲ್ಲಿಯೂ ಆಧ್ಯಾತ್ಮಿಕ ಯೋಗ ತಪಸ್ಸಿನ ಫಲವಿದೆ. ಇಲ್ಲಿ ಬೇಡಿ ಬಂದ ಭಕ್ತ ಸಮೂಹಕ್ಕೆ ಕಾಮಧೇನು, ಕಲ್ಪವೃಕ್ಷ ಈ ಮಠ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುವ ಈ ಮಠದ ಜಾತ್ರಾ ಮಹೋತ್ಸವ ಧರ್ಮ ಮತ್ತು ಭಕ್ತಿಯ ಪ್ರತೀಕವಾಗಿದೆ. ಈ ಜಾತ್ರೆ ಇಡೀ ಭಾರತ ದೇಶದ ಪ್ರಸಿದ್ದ ಜಾತ್ರೆಗಳಲ್ಲೊಂದಾಗಿದೆ. ತಪಸ್ವಿಗಳ ತಪಸ್ಸಿನಿಂದ ಪವಾಡ ಪುರುಷರು ಆದಂತಹ ಕರ್ತೃವಿನ ಆಶೀರ್ವಾದ ಈ ಪೀಠಕ್ಕಿದೆ. ಈ ಪೀಠಾಧಿಪತಿಗಳು ತಮ್ಮ ಕರುಣಾಹೃದಯದಿಂದ ಭಕ್ತರ ಮನಗೆದ್ದಿದ್ದಾರೆ. ಈ ನಾಡು ಭಕ್ತ ಭಕ್ತಿಯ ಜನಸಾಗರವಾಗಿದೆ. ಇಂತಹ ಭಕ್ತಿ ಕೇಂದ್ರಗಳಲ್ಲಿ ತಿರುಪತಿ, ಧರ್ಮಸ್ಥಳ ಸನ್ನಿಧಾನ ಕ್ಷೇತ್ರಗಳಾಗಿವೆ. ಅದರಲ್ಲಿ ಕೊಪ್ಪಳ ಶ್ರೀ ಗವಿಸಿದ್ಧೇಶ್ವರನ ಕ್ಷೇತ್ರವು ಪವಿತ್ರ ತಾಣವೊಂದಾಗಿದೆ ಎಂದು ಪದ್ಮಭೂಷಣ, ಪದ್ಮಶ್ರೀ ಡಾ. ವಿರೇಂದ್ರ ಹೆಗ್ಗಡೆಯವರು ಹೇಳಿದಾಗ ಜನಸ್ಥೋಮ ಚಪ್ಪಾಳೆಗಳೊಂದಿಗೆ ಸ್ವಾಗತಿಸಿತು. 
ಇಷ್ಟೆಲ್ಲಾ ಪ್ರಸಿದ್ದಿಗೆ ಭಕ್ತಿ ಕೇಂದ್ರವಾಗಿ ನಡೆಯಲು ಆರೋಗ್ಯ, ಅನ್ನ, ಶೈಕ್ಷಣಿಕ, ಆದ್ಯಾತ್ಮ, ಅಂಧ ಅಂಗವಿಕಲರಿಗೆ ಬಡವ ಬಲ್ಲಿದರೆನ್ನದೆ ಎಲ್ಲರನ್ನೂ ತಾಯ್‌ಹೃದಯದಿಂದ ಬರಮಾಡಿಕೊಳ್ಳುವ ಪೀಠಾಧಿಪತಿಗಳ ನಡೆನುಡಿಗಳಿಂದ ಕೊಪ್ಪಳ ಶ್ರೀ ಗವಿಮಠ ಈ ನಾಡಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ. 
                                            ಲೇಖಕರು: ಶ್ರೀಮತಿ ಸರ್ವಮಂಗಳಾ ಜಿ. ಪಾಟೀಲ, ಹಲಗೇರಿ.
ಶ್ರೀ ಕತೃವಿಗೆ ಅರ್ಪಣೆ

ಗವಿಯ ಸಿದ್ಧೇಶ ಬೇಗ ಬಾರೋ
ಪಾದವನೀಗ ತೋರಿರಯ್ಯ || ಪ ||

ಆದಿಯೋಳು ಶಿವನ ಅವತಾರ
ವೇದಾಗನಿದೊಡಿ ಪೂರ
ಸತ್ತ ಆಕಳು ಬದುಕಿಸಿದ ಧೀರ
ಧೀರ ಪಾರ ವೀರ
ವೇದಾಂತ ಸಾರದಿರೋ ಬಾರೋ || ೧ ||

ಅರಸನ ಭಕುತಿಗೆ ಒಲಿದು
ಅಂಬು ಜಾಡುವ ಕಳೆದು
ಸತ್ತ ಆಕಳು ಬದುಕಿಸಿ
ಆದಿ ದೇವನಾಗಿ ಮೆರೆದಿಹ
ಶಿವಯೋಗಿ ತಾನಾದ || ೨ ||

ಕೋಪಣಗಿರಿಯ ವಾಸ

ಕಾಮೆಂಟ್‌ಗಳಿಲ್ಲ: