ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಜನವರಿ 10, 2012

ಗವಿಮಠದ ಜಾತ್ರೆಗೆ ದವಸ ಧಾನ್ಯ & ರೊಟ್ಟಿಗಳ ಕಾಣಿಕೆ

ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ಕೊಪ್ಪಳ ನಾಡಿನ ಉತ್ಸವವಾಗಿ ರೂಪಿತವಾಗುತ್ತಿರುವುದು ಸಂತೋಷಕರ ವಿಷಯ. ಅಜ್ಜನ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇಂದು ದವಸ ಧ್ಯಾನ್ಯ ಹಾಗೂ ರೊಟ್ಟಿಗಳ ಕಾಣಿಕೆಯು ಹರಿದು ಬಂದಿದೆ. ಯಲಬುರ್ಗಾ ತಾಲ್ಲೂಕಿನ ನೆಲಜೇರಿ ಗ್ರಾಮದ ಭಕ್ತರು ೫೦೦೦ ರೊಟ್ಟಿ ಹಾಗೂ ೩೦ ಪಾಕೇಟ್ ಜೋಳ, ಬುಡಶೆಟ್ನಾಳ ಗ್ರಾಮದವರಿಂದ ೧೦೦೦೦ ರೊಟ್ಟಿಗಳು, ನಗದು, ೬೫೦೦ ರೊಟ್ಟಿ, ೪೫ ಚೀಲ ಧಾನ್ಯ, ಬಹಾದ್ದೂರ ಬಂಡಿ ಹೊಸಳ್ಳಿ ಗ್ರಾಮದ ಸದ್ಭಕ್ತರು ೫೦೦೦ ರೊಟ್ಟಿ ೩ ಚೀಲ ಧಾನ್ಯ ಕುಣಿಕೇರಿ ತಾಂಡದ ಭಕ್ತರಿಂದ ೧೭ ಪಾಕೇಟ್ ಮೆಕ್ಕೆ ಜೋಳ, ೨ ಚೀಲ ಜೋಳವನ್ನು ಶ್ರೀ ಗವಿಮಠದ ಜಾತ್ರೆಯ ದಾಸೋಹಕ್ಕಾಗಿ ದವಸ ಧಾನ್ಯ, ರೊಟ್ಟಿಗಳ ಕಾಣಿಕೆಗಳು ಭಕ್ತರಿಂದ ಹರಿದು ಬರುತ್ತಿವೆ.

ವಾಸ್ತು ಶಿಲ್ಪದ ಕಂಬಗಳ ಸಾಲು

ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ, ಸಮಾಜಮುಖಿ ಸ್ಪಂದನೆಗಳಿಗೆ ಸಾಕ್ಷಿಯಾಗುತ್ತಿದೆ. ಈ ವರ್ಷದ ಪ್ರಮುಖವಾದ ಕಾರ್ಯಶೀಲತೆಯ ಪ್ರತೀಕವೇ ವಾಸ್ತುಶಿಲ್ಪ ವಿನ್ಯಾಸಗಳ ಮೂಲಕ ಸಿದ್ಧಗೊಳ್ಳುತ್ತಿರುವ ಕಲ್ಲಿನ ಕಂಬಗಳ ಸಾಲುಗಳು ಈ ವರ್ಷದ ಭಕ್ತರ ಆಕರ್ಷಣೆಯಾಗಿದೆ. ಗದ್ದುಗೆಯ ಸ್ಥಳದಲ್ಲಿ ಈ ವರ್ಷದಿಂದ ಅದ್ಭುತವಾಗಿ ಸಿದ್ದಗೊಳ್ಳುತ್ತಿರುವ ಚರಿತ್ರೆಯ ಹಿನ್ನಲೆಯ ಕಂಬಗಳ ಸಾಲು, ಭಕ್ತರನ್ನು ಮನಸೂರೆಗೊಳ್ಳುತ್ತಿವೆ. ಇಂತಹ ಚರಿತ್ರಾರ್ಹ ಕಾರ್ಯಶೀಲ, ಕ್ರಿಯಾಶೀಲತೆಯ ಮೂಲಕ ಶ್ರೀ ಶ್ರೀ ಮ. ನಿ. ಪ್ರ. ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸಾಂಸ್ಕೃತಿಕ ಕೈಂಕರ್ಯಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀ ಮಠದ ಭಕ್ತರೊಬ್ಬರು ಹೇಳುತ್ತಾರೆ.

ಕಾಮೆಂಟ್‌ಗಳಿಲ್ಲ: