ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಶ್ರೀಮಠಕ್ಕೆ ಧವಸ-ಧಾನ್ಯಗಳು, ರೊಟ್ಟಿಗಳು, ಸಿಹಿಮಾದಲಿ, ತುಪ್ಪ, ಹಾಲು ಮೊದಲಾದವುಗಳು ಅರ್ಪಿತವಾಗುತ್ತಲಿವೆ. ಇಂದು ಹಿರೇಮನ್ನಾಪುರ ಗ್ರಾಮದಿಂದ ೧೦೦೦೦,ಕಾಟ್ರಳ್ಳಿ ಗ್ರಾಮದಿಂದ ೨೦೦೦, ಹಿರೇಬೊಮ್ಮನಾಳ ಗ್ರಾಮದಿಂದ ೫೦೦೦, ಕಲ್ಲೂರು ಗ್ರಾಮದಿಂದ ೧೫೦೦ ರೊಟ್ಟಿ,೪ ಚೀಲ ಉಳ್ಳಾಗಡ್ಡಿ, ನರೇಗಲ್ ಗ್ರಾಮದಿಂದ ೧೦೦೦ ರೊಟ್ಟಿ, ೩೪ ಚೀಲ ದವಸಧಾನ್ಯಗಳು,ಹುಲಗಿ ಗ್ರಾಮದಿಂದ ೨೦೦೦ ರೊಟ್ಟಿ ಹಾಗೂ ಗಿಣಗೇರಿ ಗ್ರಾಮದಿಂದ ಒಂದು ಕ್ವಿಂಟಾಲ್ ಮಾದಲಿ ಹೀಗೆ ರೊಟ್ಟಿಗಳು ಶ್ರೀಮಠದ ತುಂಬೆಲ್ಲ ಸಪ್ಪಳ ಮಾಡುತ್ತಿವೆ. ವಿವಿಧ ಗ್ರಾಮಗಳಿಂದ ಭಕ್ತರು ಡೊಳ್ಳು ಕುಣಿತ,ನಂದಿಕೋಲು ಕುಣಿತ, ಭಜನೆಯೊಂದಿಗೆ ಶ್ರೀಮಠಕ್ಕೆ ಆಗಮಿಸುತ್ತಿರುವದು ಜಾತ್ರೆಯ ವಿಶೇಷವಾಗಿದೆ.
ದುರ್ಗಾದೇವಿಮಿತ್ರ ಮಂಡಳಿಯಿಂದ ೫೧೦೦೦ ರೂಪಾಯಿ ಕಾಣಿಕೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಗರದ ದುರ್ಗಾದೇವಿಮಿತ್ರ ಮಂಡಳಿ(ರಿ) ಗಡಿಯಾರಕಂಭ ಈ ಸಮಿತಿಯು ೫೧೦೦೦ ರೂಪಾಯಿಗಳನ್ನು ಶ್ರೀಮಠದ ವಿದ್ಯಾರ್ಥಿನಿಲಯಕ್ಕೆ ಕಾಣಿಕೆಯನ್ನಾಗಿನೀಡಿದೆ. ಸಮಿತಿಯ ಆಧ್ಯಕ್ಷರಾದ ದಾಮೋದರ್ ವೆರ್ಣೆಕರ್,ಈರಣ್ಣ ಸಂಡೂರು, ಉಮೇಶ ಕುರಡೇಕರ್,ಅಜ್ಜಪ್ಪ ಚರಂತಿಮಠ, ರಾಘವೇಂದ್ರ,ಶಿವುಕೋಣಂಗಿ, ಶಿವು ಹಕ್ಕಾಪಕ್ಕಿ, ರಾಜು ಬೆಳವಣಕಿ, ಮಂಜು ಬೋಧಾ, ಮೊದಲಾದ ಪದಾಧಿಕಾರಿಗಳು ಪೂಜ್ಯ ಶ್ರೀ ಗವಿಸಿದ್ಧೇಶ್ವರ ಶ್ರೀಗಳಿಗೆ ಕಾಣಿಕಯನ್ನು ಸಮರ್ಪಿಸಿದರು. ದಾನಿಗಳಿಗೆಲ್ಲ ಪೂಜ್ಯ ಶ್ರೀಗಳು ಆಶಿರ್ವದಿಸಿದ್ದಾರೆ.
ಬಸವಪಟ ಆರೋಹಣ ಕಾರ್ಯಕ್ರಮ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಧೀಕೃತ ಕಾರ್ಯಕ್ರಮವು ದಿನಾಂಕ ೦೭-೦೧-೨೦೧೨ ಶನಿವಾರ ಸಂಜೆ ೬ Wಂಟೆಗೆ ಬಸವಪಟ ಆರೋಹಣ ಹಾಗೂ ಜಂಗಮ ದಾಸೋಹದ ಕಾರ್ಯಕ್ರಮದೊಂದಿಗೆ ಆರಂಭಗೊಳ್ಳಲಿದೆ.ಈಕಾರ್ಯಕ್ರಮದಲ್ಲಿ ಸದ್ಭಕ್ತರು ಭಾಗಿಯಾಗಿ ಶ್ರೀಗವಿಸಿದ್ಧೇಶ್ವರರ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ