ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಬುಧವಾರ, ಜನವರಿ 11, 2012

ದೇವಿಗೆ ಉಡಿತುಂಬುವ ಕಾರ್ಯಕ್ರಮ ಲಘು ರಥೋತ್ಸವ ಸಂಗೀತ ಕಾರ್ಯಕ್ರಮ







ಜಾತ್ರೆಗಾಗಿಯೇ  ಮೊಬೈಲ್ ಟವರ್  ಸ್ಥಾಪನೆ












ಮದುವೆ, ಮುಂಜುವೆ ಮುಂತಾದ ಕಾರ್ಯಕ್ರಮಗಳಲ್ಲಿ ಮನೆಯಲ್ಲಿ ಹಿರಿಯರನ್ನು ಹಾಗೂ ಲಕ್ಷ್ಮೀ ಪೂಜೆಗಳನ್ನು ನೇರವೇರಿಸುವಂತೆ ಶ್ರೀ ಮಠದದಲ್ಲಿಯೂ ಸಹಿತ ಶ್ರೀಮಠದಲ್ಲಿಯ ಅನ್ನಪೂರ್ಣೇಶ್ವರಿ ದೇವಿಗೆ ಸುಮಂಗಲೆಯರು  ಮಂಗಲ ದ್ರವ್ಯಗಳೊಂದಿಗೆ ಉಡಿತುಂಬುವ ಕಾರ್ಯಕ್ರಮ ಅನೂಚಾನವಾಗಿ ನಡೆದು ಬಂದಿದೆ. ಇಂದೂ ಸಹ ಸಹಸ್ರಾರು ಸುಮಂಗಲೆಯರು ಉಡಿತುಂಬುವ  ಕಾರ್ಯಕ್ರಮಗಳಲ್ಲಿ ಭಕ್ತಿ ಭಾವದೊಂದಿಗೆ ಸೇವೆಗೈದರು ದೇವಿಗೆ ಉಡಿ ತುಂಬುವದರಿಂದ ಸಂತಾನಫಲ, ಕಂಕಣಬಲ,ಧನಧಾನ್ಯಾಧಿಗಳು ಲಭಿಸುತ್ತವೆ ಎಂಬ ಶ್ರದ್ಧೇ ಮತ್ತು ಬಲವಾದ ನಂಬಿಕೆ ಸುಮಂಗಲೆಯರಲ್ಲಿ ಮನೆಮಾಡಿದೆ. ಹಾಗೂ ಇದು ಶ್ರೀಮಠದ ಸತ್‌ಸಂಪ್ರದಾಯವಾಗಿದೆ.

ಲಘು ರಥೋತ್ಸವ ಹಾಗೂ ಸಂಗೀತ ಕಾರ್ಯಕ್ರಮ

ಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಉಚ್ಚಾಯ (ಲಘು ರಥೋತ್ಸವ ) ಪೂಜ್ಯ ಶ್ರೀಗಳ ಸನ್ನಿಧಿಯಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ಜರುಗಿತು. ಇದು ರಥೋತ್ಸವದ ಮುನ್ನಾದಿನ ನಡೆಯುವ ಸಂಪ್ರದಾಯವಾಗಿದೆ. ಜಾತ್ರೆಯಷ್ಟು ಜನರು ಇದರಲ್ಲಿ ಬಾಗಿಯಾಗಿದ್ದರು. ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಉಡಿ ತುಂಬುವ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮೆರಗನ್ನ ತಂದರು.ವೇದಿಕೆ ಮೇಲೆ ನಾಡಿನ ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು. 
 ಮಹಾದಾಸೋಹದ ಪ್ರಸಾದ ತಯಾರಿಕೆಗೆ ಪೂಜ್ಯಶ್ರೀಗಳಿಂದ ಚಾಲನೆ
ಕೊಪ್ಪಳದ ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ಸಂಜೆ ಶ್ರೀ Uವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಮಹಾದಾಸೋಹದಲ್ಲಿನ ಪ್ರಸಾದ ತಯಾರಿಕೆಗೆ ವಿದ್ಯೂಕ್ತ ಚಾಲನೆ ಮಾಡಿದರು. ಪೂಜ್ಯರ ಜೋತೆಗೆ ಎಸ್.ಮಲ್ಲಿಕಾರ್ಜುನ, ಚಂಪಾಲಾಲ್‌ಜೀ ಮೆಹತಾ, ಫಕೀರಪ್ಪ ಗಡ್ಡಿ, ಸಿದ್ದಣ್ಣ ನಾಲ್ವಾಡ, ಪ್ರಕಾಶ ಚಿನ್ನವಾಲರ, ಸಂಜಯ ಕೊತ್ಬಾಳ, ಪರಮೇಶಪ್ಪ ಕೊಪ್ಪಳ, ರಾಜು ಶೆಟ್ಟರ, ಶಿವು  ಕೊಣಂಗಿ ಮೊದಲಾದ ಪುರ ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: