ಸಂಸ್ಥಾನ ಶ್ರೀಗವಿಮಠದ ಶ್ರೀ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಯು ಇದೇ ದಿನಾಂಕ ೧೧-೦೧-೨೦೧೧ ರಂದು ಜರುಗುತ್ತಿರುವ ಹಿನ್ನಲೆಯಲ್ಲಿ ನಗರದ ತುಂಬೆಲ್ಲಾ ಜಾತ್ರೆಗೆ ಆಗಮಿಸುತ್ತಿರುವ ಜನರನ್ನು ಸ್ವಾಗತಿಸಲಿಕ್ಕಾಗಿ ಬಣ್ಣ ಬಣ್ಣದ ಪ್ಲೆಕ್ಸಗಳುಗಳು ರಾರಾಜಿಸುತ್ತವೆ. ಪುರದ ಪ್ರಮುಖರು, ರಾಜಕೀಯ ಮುಖಂಡರು,ಸಂಘ ಸಂಸ್ಥೆಯ ಪದಾಧಿಕಾರಿಗಳು ಈ ಮೊದಲಾದವರು ಈ ನೆಲದ ಪಾವನ ಪುರುಷ ಶ್ರೀಗವಿಸಿದ್ಧೇಶ್ವರರ ಜಾತ್ರೆಗೆ ತುಂಬು ಮನಸ್ಸಿನಿಂದ ಸ್ವಾಗತ ಕೋರುತ್ತಿರುವ ಪ್ಲೆಕ್ಸಗಳು ಜಾತ್ರೆಯ ಮುನ್ನಾ ದಿನಗಳ ಆಕರ್ಷಣೆಗಳಲ್ಲಿ ಒಂದಾಗಿದೆ.
ಅಜ್ಜನ ಜಾತ್ರೆಯ ದಾಸೋಹಕ್ಕಾಗಿ ೨೫೦೦ ಲೀಟರ್ ಹಾಲು
ಸಂಸ್ಥಾನ ಶ್ರೀ ಗವಿಮಠದ ಗವಿಸಿದ್ಧೇಶ್ವರ ಅಜ್ಜನ ಜಾತ್ರೆಯ ಮಹಾದಾಸೋಹಕ್ಕಾಗಿ ಭಕ್ತರಿಂದ ೨೫೦೦ ಲೀಟರು ಹಾಲು ಅರ್ಪಿತವಾಗುತ್ತಲಿದೆ. ಪ್ರಾರಂಭದಿಂದ ಐದು ದಿನಗಳ ಕಾಲ ಭಕ್ತಾಧಿಗಳಿಗೆ ಸಿಹಿ ಮಾದಲಿಯ ಪ್ರಸಾದವಿರುವದರಿಂದ ಹಾಲಿನ ಅವಶ್ಯಕತೆಯಿರುವದನ್ನು ಮನಗಂಡು ಇದರ ವ್ಯವಸ್ಥೆಯನ್ನು ಭಕ್ತರು ಮಾಡಿದ್ದಾರೆ. ಈಗಾಗಲೇ ಹೊಸಪೇಟೆಯ ಸಿ.ಓ.ಎಸ್.ಎಲ್.ಆರ್ ಮೆಟಲಿಕ್ಸ ಕಂಪನಿಯ ಕೆ.ಸಿ.ಸಿದ್ದಪ್ಪ ೫೦೦ ಲೀಟರು, ಕೆಸರಟ್ಟಿಯ ಬಸವರಾಜ iಳಗಿ ೫೦೦ ಲೀಟರ್, ಆಂದ್ರದ ಗೋವಿಂದ ಹೊಳಗುಂದಿ ೨೫೦ ಲೀಟರು, ಹೊಸಪೇಟೆಯ ಸುಬ್ಬಾರಾವ್ ೨೫೦ ಲೀಟರು, ಕೊಪ್ಪಳದ ದೇವಿ ವೈನ್ ಶಾಪ್‌ನ ಮಾಲಕ ಬಸವನಗೌಡ ಶಿವನಗೌಡ ನರೆಗಲ್ ರಿಂದ ೨೫೦ ಲೀಟರು ಹಾಲು ಅರ್ಪಣಾಸೇವೆಯನ್ನು ಮಾಡಿದ್ದಾರೆಂದು ಹಾಗೂ ಇನ್ನು ೧೨೫೦ ಲೀಟರು ಹಾಲನ್ನು ಸಂಗ್ರಹಿಸುವ ಯೋಜನೆ ಇದೆಯೆಂದು ದಾಸೋಹ ಸಮಿತಿಯ ಶಿವಕುಮಾರ ಕೋಣಂಗಿ,ಪ್ರಕಾಶ ಚಿನಿವಾಲರು, ರಾಜು ಶಿವಪ್ಪ ಶೆಟ್ರು,ಬಸವರಾಜ ಗೌರಾ ಮಾಧ್ಯಮಕೇಂದ್ರಕ್ಕೆ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ