

ಕೊಪ್ಪಳ: ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ವಿಶೇಷತೆಯೆಂದರೆ ಮಹಾದಾಸೋಹ. ಜಿಲ್ಲೆಯಾದ್ಯಾಂತ ಕೊಡುಗೈ ದಾನಿಗಳಿಂದ ದವಸ, ಧಾನ್ಯ, ರೊಟ್ಟಿ, ಭತ್ತ ಮೊದಲಾದವುಗಳು ಮಹಾಪುರದಂತೆ ಹರಿದು ಬಂದು ದಾಸೋಹಕ್ಕೆ ಸಮರ್ಪಿತವಾದದ್ದು ಒಂದು ಐತಿಹಾಸಿಕತೆ. ಪ್ರತಿದಿನವು ಹಲವಾರು ಓಣಿಗಳ, ಸಂಘ ಸಂಸ್ಥೆಗಳಿಂದ ಸಿಹಿ ತಿನಿಸುಗಳು ಹರಿದು ಬರುತ್ತಿವೆ. ಇಂದು ಪಂಡರಪೋಳಿ ಕ"ಟಿಂದ ೫೦ ಕೆ.ಜಿ ಪುಳಿಯೋಗರೆ, ಸಿದ್ದು ಅಂಗಡಿಯವರಿಂದ ೨೫ ಕೆ.ಜಿ ಕೇಸರಿಬಾತ್, ಮಹಾಬಳೇಶ್ವರ ಗವಿಯಪ್ಪ ಮಟ್ಟಿ ಕುಟುಂಬದಿಂದ ೨೫೧೧ ಶೆಂಗಾ ಹೋಳಿಗೆ ದಾಸೋಹಕ್ಕೆ ಸಮರ್ಪಿತವಾಗಿವೆ. ಇವುಗಳನ್ನು ಆ ಓಣಿಯ ಗಿರೀಜಾ ಮೆಳ್ಳಿಕೇರಿ, ಸುಮಂಗಲಾ ಮಟ್ಟಿ, ಸೂಗಮ್ಮ ಬೆಳವಣಿಕಿ, ಸುಜಾತಾ ಬೆಟಗೇರಿ, ವಿಮಲಾ ಗಾಲಾ, ಪಾರಕ್ಕ ಕಡ್ಲಿ, ಸುಧಾ ಮಟ್ಟಿ, ಶಾಂತಾ ಸ್ವಾಮಿ ಮೊದಲಾದವರು ಒಂದೇ ದಿನದಲ್ಲಿ ೨೫೧೧ ಶೆಂಗ ಹೋಳಿಗೆಗಳನ್ನು ತಯಾರಿಸಿದ್ದು ಶ್ಲ್ಯಾಘನೀಯವಾಗಿದೆ. ಇವರೆಲ್ಲರಿಗೂ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.
ತೋಟದ ಭಾವಿ ಓಣಿಯವರಿಂದ ೧೮೦೦೦ ಬದಾಮ ಪುರಿ ಸಮರ್ಪಣೆ. ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಜಾತ್ರಾ ವಿಶೇಷತೆಯೆಂದರೆ ಮಹಾದಾಸೋಹ ದಿನಾಂಕ ೨೮.೦೧.೨೦೧೧ ರಂದು ತೋಟದ ಭಾವಿ ಓಣಿಯವರಿಂದ ೧೮೦೦೦ ಬದಾಮ ಪುರಿಯನ್ನು ಮೆರವಣಿಗೆಯ ಮೂಲಕ ತಂದು ಶ್ರೀಮಠದ ದಾಸೋಹಕ್ಕೆ ಸಮರ್ಪಿಸಿದರು. ಓಣಿಯ ಪ್ರಮುಖರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ