ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಮಂಗಳವಾರ, ಜನವರಿ 25, 2011

ಮಹಾ ದಾಸೋಹದಲ್ಲಿ ಸಿರಾ-ಕಡಕ್‌ರೊಟಿ - ಬದನೆಪಲ್ಯ- ಅನ್ನ- ಸಾಂಬರ್-ಮೊಸರು.

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಮತ್ತೊಂದು ವೈಶಿಷ್ಟ್ಯ ಎಂದರೆ ಮಹಾದಾಸೋಹ. ದಿನಕ್ಕೆ ಲಕ್ಷಾಂತರ ಭಕ್ತರು ಅಜ್ಜನ ಅನ್ನರೂಪದ ಪ್ರಸಾದದ ರುಚಿಯನ್ನು ಸವಿದು ಧನ್ಯತಾ ಭಾವವನ್ನು ಮೆರೆಯುತ್ತಾರೆ. ಹಾಗೆಯೇ ಕೆರೆಯ ನೀರನ್ನು ಕೆರೆಗೆ ಚಲ್ಲು ಎನ್ನುವಂತೆ ಭಕ್ತರಿಂದ ಬಂದಂತಹ ದವಸ ಧಾನ್ಯಗಳನ್ನು ಅದೇ ಭಕ್ತರ ಮಹಾಪ್ರಸಾದಕ್ಕೆ ವಿನಿಯೋಗಿಸಿ ಹಸಿದವರ ಅಂಗಳಕ್ಕೆ ಕೃಪೆ ಮಾಡುತ್ತಿರುವ ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಈ ಮಹತ್ ಕಾಯವನ್ನು ಭಕ್ತರು ಮುಕ್ತ ಕಂಠದಿಂದ ಪ್ರಶಂಸೆ ಮಾಡುತ್ತಿರುವದು ಮಹಾದಾಸೋಹದಲ್ಲಿ ಕಂಡುಬರುತ್ತಿತ್ತು. ಇಂದಿನ ಮಹಾ ದಾಸೋಹದಲ್ಲಿ ಸಿರಾ, ಕಡಕ್ ರೊಟ್ಟಿ, ಬದನೆಪಲ್ಯ, ಜುಣಕಾ, ಅನ್ನ, ಸಾಂಬರ್, ಮೊಸರು ಸದ್ಭಕ್ತರ ಹಸಿವನ್ನು ನೀಗಿಸಿತು.


ಶ್ರೀ ಮಠದ ಮಹಾ- ದಾಸೋಹದಲ್ಲಿ ಸೇವೆಗೈದವರು..

ಇಂದಿನ ದಾಸೋಹದಲ್ಲಿ ಬೆಳಿಗ್ಗೆ ನೀರಲಗಿ, ವದಗನಾಳ್ ಗ್ರಾಮದ ಸದ್ಭಕ್ತರು ಹಾಗೂ ಶ್ರೀ ಎಸ್. ವಿ. ಕೆ ಬಿ.ಬಿ.ಎಂ & ಬಿ.ಸಿ.ಎ ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಕಲ್ಗಡದ ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಪ್ರಸಾದವನ್ನು ಭಕ್ತಾಧಿಗಳಿಗೆ ಬಡಿಸಿದರು. ಸಾಯಂಕಾಲ ಶ್ರೀ ಗವಿಸಿದ್ಧೇಶ್ವರ ಆಯುರ್ವೆದಿಕ್ ವಿದ್ಯಾರ್ಥಿಗಳು ಹಾಗೂ ಬಾಲ ವಿನಾಯಕ ಮಿತ್ರಮಂಡಳಿ ಕೊಪ್ಪಳ ಇವರು ಪ್ರಸಾದವನ್ನು ಬಡಿಸಿದರು. ಹಾಗೇಯೆ ಇಂದು ಮಹಾದಾಸೋಹದಲ್ಲಿ ಹಳ್ಳಿಗುಡಿ, ಜಂತ್ಲಿ-ಶಿರೂರು, ಮಂಗಳೂರು ಗ್ರಾಮಗಳ ಸದ್ಭಕ್ತರು ಪ್ರಸಾದ ರೂಪದ ಅಡುಗೆ ತಯಾರಿಸಿ ತಮ್ಮ ತಮ್ಮ ಸೇವೆಯನ್ನು ಸಲ್ಲಿಸಿದರು. ಅದರಂತೆ ಕೊಪ್ಪಳದ ಅಕ್ಕಮಹಾದೇವಿ ಮಹಿಳಾಮಂಡಳದ ಕೋಮಲಕ್ಕ ಕುದರಿಮೋತಿ ಹಾಗೂ ಸಂಗಡಿಗರು, ಇನ್ನರ್ ವಿಲ್ ಪದಾಧಿಕಾರಿಗಳು ಹಾಗೂ ದಾಸೋಹದ ಚಟುವಟಿಕಗಳಲ್ಲಿ ತೊಡಗಿಸಿಕೊಂಡಿರುವ ಹಂಪಮ್ಮ ಮೈನಳ್ಳಿ ಹಾಗೂ ಸಂಗಡಿಗರು ದಾಸೋಹದ ಅಡುಗೆಗೆ ಬೇಕಾಗುವ ತರಕಾರಿಗಳನ್ನು ಸಮರ್ಪಕವಾಗಿ ಒದಗಿಸುವ ಕಾರ್ಯದಲ್ಲಿ ತೊಡಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಇವರೆಲ್ಲರಿಗೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.


ಸಿಹಿ ಕರಿಗಡುಬು ದಾಸೋಹಕ್ಕೆ ಸಮರ್ಪಣೆ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ನಡೆಯುತ್ತಿರುವ ಮಹಾದಾಸೋಹದಲ್ಲಿ ಜಿಲ್ಲೆಂದ ವಿವಿಧ ಭಕ್ತರು ತಮ್ಮ ತನು-ಮನ-ಧನ ಸಹಾಯವನ್ನು ನೀಡುತ್ತಿದ್ದಾರೆ. ಇಂದು ಭಾಗ್ಯನಗರ ಗ್ರಾಮದ ಮಾಜಿ ಗ್ರಾ.ಪಂ.ಸದಸ್ಯರಾದ ಭೋಗಪ್ಪ ಡಾಣಿ ಕುಟುಂಬ ವರ್ಗ ಹಾಗೂ ಅವರ ಕಾರ್ಮಿಕ ಮಂಡಳಿಯವರು ಸೇರಿಕೊಂಡು ಅಜ್ಜನ ಈ ಮಹಾದಾಸೋಹಕ್ಕೆ ೫೦ ಕೆ.ಜಿ ಸಿಹಿ ಕರಿಕಡುಬನ್ನು ದಾಸೋಹಕ್ಕೆ ಸಮರ್ಪಿಸಿದರು, ಇವರೊಂದಿಗೆ ಪ್ರಭಣ್ಣ ಡೊಳ್ಳಿನ, ಆನಂದಪ್ಪ ಅಳವಂಡಿ, ಬಸಣ್ಣ ಸಮಗಂಡಿ, ನಾಗರಾಜ ಡಾಣಿ, ಬಸವರಾಜ ಡಾಣಿ, ವೆಂಕಟೇಶ ಕಬ್ಬೇರ, ಗುಂಡೇಶ ಪಿ. ಸಿದ್ದಪ್ಪ ಡಾಣಿ, ಶಿವ ಕೋಣಂಗಿ, ಲಕ್ಷವ್ವ ಬೋಗಪ್ಪ ಡಾಣಿ, ಪಾರ್ವತಮ್ಮ ಹೊಟ್ಟಿ, ಶಾಂತವ್ವ ಸಮಗಂಡಿ ಉಪಸ್ಥಿರಿದ್ದರು. ಸದ್ಭಕ್ತರಿಗೆ ಪೂಜ್ಯ ಶ್ರೀಗಳು ಆಶೀರ್ವದಿಸಿದ್ದಾರೆ.


ಬಾಯಲ್ಲಿ ನೀರೂರಿಸುವ ಗೋಭಿಮಂಚುರಿ,ಊಟಿ ಮಿರ್ಚಿ, ಡೆಲ್ಲಿ ಹಪ್ಪಳ, ಪಾವ್‌ಬಜಿ,

ಕೊಪ್ಪಳ: ಬಾಯಲ್ಲಿ ನೀರೂರಿಸುವ ಗೋಭಿಮಂಚುರಿ, ಊಟಿ ಮಿರ್ಚಿ, ಡೆಲ್ಲಿ ಹಪ್ಪಳ, ಪಾವ್‌ಬಜಿ, ನೋಡಲ್ಸ, ಮೈಸೂರ ಸ್ಪೆಷಲ್ ಗೋಭಿ ಮಂಚುರಿ, ಇವುಗಳು ಜಾತ್ರೆಯಲ್ಲಿ ತಿರುಗಾಡುವ ಭಕ್ತರ ಪ್ರಿಯ ವಸ್ತುಗಳು. ಹೌದು ಇವು ಶ್ರೀ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ದೊರಕುವ ವಿಶಿಷ್ಟ ಆಕರ್ಷಣೆಯ ತಿನಿಸುಗಳು. ಚಿಕ್ಕವರಿಂದ ಹಿಡಿದು ದೊಡ್ಡವರು ಸಹ ಇತ್ತ ಕಡೆ ಹಾಯುವಾಗ ಒಂದು ಕೈ ನೋಡಿಯೇ ಬಿಡಬೇಕು ಎಂದೆನಿಸಿ ಆಯಾ ಅಂಗಡಿಗಳ ಮುಂದೆ ನಿಂತುಕೊಂಡು ಬಾಯಿ ಚಪ್ಪರಿಸುತ್ತಾ ಆನಂದಿಸಿ ನಂತರ ಕಬ್ಬಿನ ಹಾಲನ್ನು ಸೇವಿಸಿ ಜಾತ್ರೆಯ ಸವಿಯನ್ನು ಅನುಭವಿಸುವದು ಜಾತ್ರಾ ಅವರಣದಲ್ಲಿ ಕಂಡು ಬರುವ ವಿಶೇಷವಾದ ಆಕರ್ಷಣೆಗಳಲ್ಲೊಂದಾಗಿತ್ತು.

ಕಾಮೆಂಟ್‌ಗಳಿಲ್ಲ: