ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಒಂದು ಜನೋತ್ಸವ, ಭಕ್ತಿ ಉತ್ಸವ ಕೊಪ್ಪಳ ನಾಡಿನ ಉತ್ಸವವಾಗಿ ಸುಮಾರು ೪ ಲಕ್ಷ ಭಕ್ತ ಜನಸಾಗರದಲ್ಲಿ ವಿಜೃಂಭಿಸುತ್ತದೆ. ಮಹಾದಾಸೋಹದಲ್ಲಿ ಸವಿಯಾದ ಪ್ರಸಾದ, ರೊಟ್ಟಿ, ಮೆಣಸಿನಕಾಯಿ ಚಟ್ನಿ,ಕಡಲೆ ಪುಡಿ, ಬದನೆಕಾಯಿ, ಕುಂಬಳ ಪಲ್ಯ, ಉಪ್ಪಿನ ಕಾಯಿ, ಹೀಗೆ ಪ್ರಸಾದದ ಪಟ್ಟಿ ಮುಂದುವರಿಯುತ್ತದೆ. ಮೃದುವಾದ ಮಾದಲಿ ಜೊತೆಗೆ ತುಪ್ಪ, ಅದರೊಳಗೆ ಬಿಸಿಹಾಲು ಸವಿಯುತ್ತಿದ್ದರೆ ಅದಕ್ಕಿಂತ ಆನಂದ ಬೇರೋಂದಿಲ. ಅನ್ನ,ಸಾರು, ಹೀಗೆ ಶ್ರೀಮಠದ ದಾಸೋಹವು ಅಬ್ಬಾ ಎನ್ನುವ ಮಟ್ಟಿಗೆ ಅದ್ಬುತವಾಗಿವೆ. ಸುಮಾರು ೫೦೦೦ ಕ್ಕಿಂತ ಹೆಚ್ಚಿನ ಭಕ್ತರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸುತ್ತಿರುವದು ಕಂಡು ಬರುತ್ತದೆ. ಭಕ್ತರಪ್ರಕಾರ ಉತ್ತರ ಕರ್ನಾಟಕದ ಧರ್ಮಸ್ಥಳ ವಾಗುವದರಲ್ಲಿ ಸಂದೇಹವಿಲ್ಲ ಎಂದು ಹೇಳಿರುವದು ಮಹಾದಾಸೋಹದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ.
ಬಳಗಾನೂರಿನ ಶ್ರೀಶಿವಶಾಂತವೀರ ಶರಣರಿಂದ ಧೀರ್ಘದಂಡ ನಮಸ್ಕಾರ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಎರಡನೆಯ ದಿನದಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ಈ ಸಾರೆಯು ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರಿಂದ ಲಿಂ.ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ತನಕ ಧೀರ್ಘದಂಡ ನಮಸ್ಕಾರ ಹಾಕುವ ಕಾರ್ಯಕ್ರಮ ಇಂದು ಸಂಜೆ ಜರುಗಿತು. ಈ ಹಿಂದೆ ಲಿಂ.ಪೂಜ್ಯ ಚನ್ನವೀರ ಶರಣರು ಸುಮಾರು ೫೦-೬೦ ವರ್ಷಗಳಿಂದ ತಮ್ಮ ಗುರುಗಳಾದ ಲಿಂ.ಮ.ನಿ.ಪ್ರ.ಜ.ಮರಿಶಾಂತವೀರ ಮಹಾಸ್ವಾಮಿಗಳ ಗದ್ದುಗೆಯ ತನಕ ಗುರುಸ್ಮರಣೆಗಾಗಿ ಧೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಈಗ ಶ್ರೀಶಿವಶಾಂತವೀರ ಶರಣರು ಮುಂದುವರೆಸಿದ್ದಾರೆ. ಶ್ರೀಶಿವಶಾಂತವೀರ ಶರಣರು ದಿವಂಗತ ಡಾ.ಗಂಗಯ್ಯ ಸ್ವಾಮಿ ಹೀರೆಮಠ ಅವರ ಮನೆಯಿಂದ ಹೊರಟು ಜವಾಹರ ರಸ್ತೆ,ಗಡಿಯಾರಕಂಬ,ಶಾರದಾಟಾಕೀಸ್ ಮಾರ್ಗವಾಗಿ ಶ್ರೀಮಠಕ್ಕೆ ಪಾದಯಾತ್ರೆ ಬಂದು ಅಪಾರ ಭಕ್ತರ ಮಹಾಪೂರದಲ್ಲಿ ಹೂವಿನ ಹಾಸಿಗೆಯ ಮೇಲೆ ಪ್ರವೇಶದ್ವಾರದಿಂದ ಮರಿಶಾಂತವೀರ ಸ್ವಾಮಿಗಳ ಗದ್ದುಗೆಯ ತನಕ ಧೀಘೃದಂಡ ನಮಮಸ್ಕಾರ ಹಾಕಿzರು. ಈ ಕಾರ್ಯಕ್ರಮದಲ್ಲಿ ಹೊಂಬಳ ಗ್ರಾಮದ ಭಜನಾಮಂಡಳಿಯು ನೆರೆದ ಭಕ್ತ ಸಮೂಹವನ್ನು ಮಂತ್ರ ಮುಗ್ಧರನ್ನಾಗಿಸಿತು.
ವೇಷಗಾರರಿಂದ ಕಲಾ ಪ್ರದರ್ಶನ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಶ್ರೀಮಠದ ಆವರಣದಲ್ಲಿ ವೇಷಗಾರರು ತಮ್ಮ ವರ್ಣರಂಜಿತ ಕಲೆಯನ್ನು ಪ್ರದರ್ಶನ ಮಾಡುವದರ ಮೂಲಕ ಜಾತ್ರೆಗೆ ಆಗಮಿಸಿರುವ ಭಕ್ತರಿಗೆ ಮೆರಗನ್ನು ತಂದು ಕೊಟ್ಟರು. ಅವರು ಪೌರಾಣೀಕ,ಧಾರ್ಮಿಕ, ಸಾಮಾಜಿಕ ವಿಷಯಾಧಾರಿತ ವೇಷವನ್ನು ಧರಿಸಿ ಗಾಯನದೊಂದಿಗೆ,ಕುಣಿದು ಕುಪ್ಪಳಿಸಿ ತಮ್ಮ ಕಲಾ ಪ್ರದಶೃನ ಮಾಡಿದರು. ಆರಂಭದಲ್ಲಿ ವೇದಿಕೆಯ ಮೇಲೆ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕರಾದ ಸಿ.ವಿ.ಚಂದ್ರಶೇಕರ ಅವರು ಕಲಾವಿದರಿಗೆ ೧೦೦೦ ರೂ ಕಾಣಿಕಕೊಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇಷಗಾರರ ಮುಖ್ಯಸ್ಥರಾದ ಬಸವರಾಜ ವಿಭೂತಿ ಪಾಲ್ಗೋಂಡಿದ್ದರು. ಪ್ರಾಸ್ತಾವಿಕ ಶಿವಕುಮಾರ ಕೆ. ನಿರೂಪಣೆ ರಾಜೇಶ ಸಸಿಮಠ ನೆರವೇರಿಸಿದರು.
ಜನಸ್ತೋಮವನ್ನು ರಂಜಿಸಿದ ಕುಸ್ತಿ ಸ್ಪರ್ಧೆ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾ ಜಾತ್ರೆಯ ಅಂಗವಾಗಿ ಇಂದು ಶ್ರೀಮಠದ ಆಟದ ಆವರಣದಲ್ಲಿ ಪುರುಷರ ಮತ್ತು ಮಹಿಳೆಯರ ಭಾರೀ ಜಂಗೀ ನಿಖಾಲಿ ಕುಸ್ತಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ನಾಡಿನ ಹೆಸರಾಂತ ಕುಸ್ತಿ ಪಟುಗಳು ಭಾಗವಹಿಸಿದ್ದರು. ಇವರಲ್ಲಿ ವಿಜೇತ ಪಟುಗಳಾದ ಬಸವರಾಜ ಹುಯಿಲಗೋಳ, ಫಯಾಜ್, ರಸೂಲ್, ಸತ್ಯಪ್ಪ, ಹುಲಗಪ್ಪ , ಪಾಲಾಕ್ಷಿ ,ಸಮೀರ್, ಈ ಕುಸ್ತಿಪಟುಗಳಿಗೆ ಶ್ರೀ ಮಠದದಿಂದ ಹಣದ ರೂಪದ ಪ್ರಶಸ್ತಿ,ಫಲಕ ನೀಡಲಾಯಿತು. ನಿರ್ಣಾಯಕರಾಗಿ ಶ್ರೀಭೀಮಸಿ ಪೈಲವಾನ್,ಶ್ರೀಮುಸ್ತಫಾ ಪೈಲವಾನ್,ಶ್ರೀಶರಣಗೌಡ ಕುಸ್ತಿ ತರಬೇತುದಾರರು,ಶ್ರೀ ವಿ.ಎನ್.ಘಾಡಿ ಆಗಮಿಸಿದ್ದರು.ವ್ಯವಸ್ಥಪಕರಾಗಿ ಪ್ರಭು ಹೀರೇಮಠ, ನರೇಂದ್ರ ಎಚ್‌ಎಸ್ ಪಾಟೀಲ ಕಾರ್ಯನಿರ್ವಹಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ