ಕೊಪ್ಪಳ ಜಿಲ್ಲೆಯ ಸುದ್ದಿ,ಮಾಹಿತಿಗಾಗಿ ಕನ್ನಡನೆಟ್.ಕಾಂ ಕನ್ನಡನೆಟ್.ಬ್ಲಾಗಸ್ಪಾಟ್.ಕಾಂ ಕವಿಸಮೂಹ.ಬ್ಲಾಗ್ ಸ್ಪಾಟ್.ಕಾಂ ಕನಕಗಿರಿಉತ್ಸವ.ಬ್ಲಾಗಸ್ಪಾಟ್.ಕಾಂ

ಸೋಮವಾರ, ಜನವರಿ 10, 2011

ಒಡಲದನಿ ಆಲಿಸಲು ಕರೆ- 15 ಬೆಳಕಿನೆಡೆಗೆ ಕಾರ್ಯಕ್ರಮ



ಕೊಪ್ಪಳ : ಪ್ರತಿಯೊಬ್ಬರಲ್ಲಿಯೂ ಒಡಲದನಿ ಇದ್ದೇ ಇರುತ್ತದೆ. ಆ ದನಿಯನ್ನು ಆಲಿಸಿ ಅದರಲ್ಲಿಯ ಕೆಟ್ಟದ್ದನ್ನು ಕೈಬಿಟ್ಟು ಉತ್ತಮವಾದ ಜ್ಞಾನದ ವಿಚಾರಫಾಂಟ್ ಗಾತ್ರಗಳನ್ನು ಆಯ್ದುಕೊಂಡು ಮನುಷ್ಯ ಪರಿಪೂರ್ಣನಾಗಬೇಕೆಂದು ಸುದ್ದಿಮೂಲ ದಿನಪತ್ರಿಕೆಯ ಸಂಪಾದಕ ಬಸವರಾಜಸ್ವಾಮಿ ನುಡಿದರು.
ಅವರು ಗವಿಮಠದ ಕೆರೆಯ ಆವರಣದಲ್ಲಿ ಪ್ರತಿತಿಂಗಳು ಅಮವಾಸ್ಯೆಯಂದ ನಡೆಯುವ ಬೆಳಕಿನೆಡೆಗೆ ಕಾರ್‍ಯಕ್ರಮದ ಮುಖ್ಯ ಅತಿಥಿಯಗಿ ಭಾಗವಹಿಸಿ ವೀರಣ್ಣ ಹುರಕಡ್ಲಿ ಭಾಗ್ಯನಗರ ಇವರ "ಒಡಲದನಿ" ಕವನಸಂಕಲನ ಬಿಡುಗಡೆಗೊಳಿಸಿ ಮೇಲಿನಂತೆ ಮಾತನಾಡುತ್ತ ಮುಂದುವರೆಸಿಸಿ ನಮ್ಮ ಮಾತುಗಳಲ್ಲಿರುವ ಜ್ಞಾನದ ವಿಚಾರವನ್ನು ತಿಳಿಯದಿದ್ದರೆ ಬದುಕಿನಲ್ಲಿ ಬಹಳಷ್ಟು ಅವಘಡಗಳು ಸಂಭವಿಸುತ್ತವೆ. ಅವುಗಳನ್ನು ಜ್ಞಾನಕ್ಕೆ ಪರಿವರ್ತಿಸಿಕೊಂಡರೆ ಅವನೇ ಮಹಾತ್ಮಾ ಸಂತ ಶರಣನಾಗುತ್ತಾನೆಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಲದನಿಯ ಕರ್ತೃ ವೀರಣ್ಣ ಹುರಕಡ್‌ಲಿ ತಾವು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಲು ಪ್ರೇರಣೆಯಾದದ್ದನ್ನು ಹೇಳುತ್ತಾ ಸಾಹಿತ್ಯ ಬದುಕಿಗೂ ಮತ್ತು ಸಮಾಜಕ್ಕೂ ನೆಮ್ಮದಿಯನ್ನು ಕೊಡುತ್ತದೆ ಆ ಕಾರಣದಿಂದ ಸಾಹಿತ್ಯ ನನಗೆ ಪ್ರಿಯವಾಗಿದೆ ಎಂದರು.
ನಂತರ ಸಂಗೀತ ಕಲಾವಿದೆ ಕು.ಅಂಬಿಕಾ ಉಪ್ಪಾರವರಿಂದ ಭಕ್ತಿಸಂಗೀತ ಕಾರ್‍ಯಕ್ರಮ ನಡೆಯಿತು. ಅತ್ಯಂತ ಸುಶ್ರಾವ್ಯವಾಗಿ ಹಾಡಿದ ಅವರ ಸಂಗೀತಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ಶಿಕ್ಷಕ ಗವಿಸಿದ್ದಪ್ಪ ಕೊಪ್ಪಳ ಕಾರ್‍ಯಕ್ರಮ ನಿರ್ವಹಣೆ ಮಾಡಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಉತ್ತಮ ಛಾಯಾಗ್ರಾಹ ಪ್ರಶಸ್ತಿ ಪಡೆದ ಪ್ರಕಾಶ ಕಂದಕೂರು ಮತ್ತು ಹಂಪಿ ಕನ್ನಡ ವಿಶ್ವವಿದ್ಯಲಯದಿಂದ ಪಿಎಚ್ಡಿ ಪದವಿ ಪಡೆದಿರುವ ಪ್ರಕಾಶ ಬಳ್ಳಾರಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿಜಯಕುಮಾರ ಕವಲೂರವರು ಭಕ್ತಿಸೇವೆ ನಡೆಸಿಕೊಟ್ಟದ್ದರಿಂದ ಅವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು , ಪ್ರಾಚಾರ್‍ಯರಾದ ಮಹಾಂತೇಶ ಮಲ್ಲನಗೌಡರ, ಅಲ್ಲಮಪ್ರಭು ಬೆಟ್ಟದೂರ, ಡಾ.ವಿ.ಬಿ.ರಡ್ಡೇರ, ಪರೀಕ್ಷಿತರಾಜ ಮತ್ತು ಮಾಲಿಪಾಟೀಲ್, ವಿಠ್ಠಪ್ಪ ಗೋರಂಟ್ಲಿ, ಎಚ್.ಎಸ್.ಪಾಟೀಲ್, ಎಸ್.ಎಂ.ಕಂಬಾಳಿಮಠ, ಮಲ್ಲಿಕಾರ್ಜುನ ಸೋಮಲಾಪುರ, ಕವಿಸಮೂಹ ಬಳಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ: