ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯಲ್ಲಿ ನಿನ್ನೆ ಚಾಲನೆಗೊಂಡ ಪಲ್ಸ ಪೋಲಿಯೋ ಹಾಕುವ ಕಾರ್ಯ ತುರುಸಾಗಿ ನಡೆಯುತ್ತಲಿದೆ. ಜಾತ್ರಾ ನಿಮಿತ್ಯ ಸೋಮವಾರ ಶ್ರೀ ಗವಿಸಿದ್ಧೇಶ್ವರರ ಕರ್ತೃ ದರ್ಶನಕ್ಕೆ ಬಹಳಷ್ಟು ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಸಂಘಟಕರು ಪ್ರವೇಶ ದ್ವಾರದ ಗೇಟಿನ ಮುಂದೆ ಬಿಡಾರ ಹೂಡಿ ತಾಯಂದಿರ ಕೈಯಲ್ಲಿ ಇರುವ ಚಿಕ್ಕ ಚಕ್ಕ ಮಕ್ಕಳಿಗೆ ಪಲ್ಸ ಪೋಲಿಯೋ ಹಾಕುತ್ತಿರುವ ದೃಶ್ಯ ಕಂಡು ಬಂದಿತು.
ದಾಸೋಹ ಸೇವೆಗೈದವರು.
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರೆಯ ಅಂಗವಾಗಿ ಇಂದು ಸಹ ಮಹಾದಾಸೋಹ ಭರ್ಜರಿಯಾಗಿ ಸಾಗಿತು. ದಿನಾಂಕ ೨೪-೦೧-೨೦೧೧ ರ ಸೋಮವಾರದ ಇಂದಿನ ಮಹಾದಾಸೋಹದಲ್ಲಿ ಬೆಳಿಗ್ಗೆ ತಿಗರಿ ಗ್ರಾಮದ ಸದ್ಭಕ್ತರು, ಹ್ಯಾಟಿ-ಮುಂಡರಗಿ ಗ್ರಾಮದ ಸದ್ಭಕ್ತರು, ಗ್ರಾಮೀಣ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ದದೇಗಲ್ ಹಾಗೂ ಸಂಜೆ ಮಂಡಲಗೇರಿ ಗ್ರಾಮದ ಸದ್ಭಕ್ತರು, ಶ್ರೀ ಗ"ಸಿದ್ಧೇಶ್ವರ ಆಯುರ್ವೆದಿಕ್ ಕಾಲೇಜಿನ "ದ್ಯಾರ್ಥಿಗಳು ಪ್ರಸಾದ ಬಡಿಸುವ ಸೇವೆಯಲ್ಲಿ ತೊಡಗಿದ್ದರು. ಇವತ್ತಿನ ದಾಸೋಹದಲ್ಲಿ ಅಡುಗೆ ತಯಾರಿಕಾ ಕಾರ್ಯದಲ್ಲಿ ಹಳ್ಳಿಗುಡಿ, ಜಂತ್ಲಿ-ಶಿರೂರು, ಮಂಗಳೂರು ಗ್ರಾಮದ ಸದ್ಭಕ್ತರು ಭಾಗವ"ಸಿದ್ದರು. ಇವರೆಲ್ಲರಿಗೆ ಪೂಜ್ಯ ಶ್ರೀ ಗಳು ಆಶೀರ್ವದಿಸಿದ್ದಾರೆ.
ನಾಳೆ ದಿನಾಂಕ ೨೫-೦೧-೨೦೧೧ ರ ಮಂಗಳವಾರ ದಾಸೋಹದ ಸೇವೆಯಲ್ಲಿ ಬೆಳಿಗ್ಗೆ ಪ್ರಸಾದ ಬಡಿಸುವವರು ನೀರಲಗಿ, ವದಗನಾಳ್ ಗ್ರಾಮಸ್ಥರು ಹಾಗೂ ಎಸ್..ಕೆ ಬಿ.ಬಿ.ಎಮ್ ಕಾಲೇಜಿನ ವಿದ್ಯಾರ್ಥಿಗಳು, ಸಂಜೆ ಶ್ರೀ ಗವಿಸಿದ್ಧೇಶ್ವರ ಆಯುರ್ವೆದಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಾಲವಿನಾಯಕ ಮಿತ್ರ ಮಂಡಳಿ ಕೊಪ್ಪಳ ಭಾಗವಹಿಸುವರು.
ಜೀವನದಲ್ಲಿ ಮೌಲ್ಯಗಳ ಅಳವಡಿಕೆ ಅವಶ್ಯವಾಗಿದೆ - ಡಾ.ಗುರುರಾಜಕರ್ಜಗಿ
ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ೩ನೇ ದಿನದ ಸಮಾರೋಪ ಸಮಾರಂಭದ ಮುಖ್ಯ ಅಥಿಗಳಾಗಿ ಸಮಾರೋಪದ ನುಡಿಗಳನ್ನಾಡಿದ ಶಿಕ್ಷಣ ತಜ್ಞರಾದ ಡಾ.ಗುರುರಾಜ ಕರ್ಜಗಿ ಅವರು ಜಾತ್ರೆಯ ವೈಶಿಷ್ಟ್ಯತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮಾನವಿಯ ಮೌಲ್ಯಗಳು ಅಧಃಪತನದ ಹಾದಿ"ಡಿಯುತ್ತಿರುವದು ವಿಷಾದಕರ. ಇಂದಿನ ದಿನದಲ್ಲಿ ಮನುಷ್ಯ ಜರೂರಾಗಿ ಭಾರತೀಯ ಸಂಸ್ಕೃತಿಯ ಮೂಲ ಬೇರು ಸಾಮಾಜಿಕ, ಮೌಖಿಕ ಸಂಬಂಧ ಮತ್ತು ಮಾನವಿಯ ಮೌಲ್ಯಗಳನ್ನು ಅಳವಡಿಕೆ ಮಾಡಿಕೊಳ್ಳುವದು ಅವಶ್ಯವೆಂದು ಮನೋಜ್ಞವಾಗಿ ಮಾತನಾಡಿದರು. ಶಿಕ್ಷಣ, ಆಧ್ಯಾತ್ಮ, ದಾಸೋಹ, ಭಕ್ತಿಯ ನಿತ್ಯೋತ್ಸವಗಳು ಶ್ರೀಮಠದಲ್ಲಿ ನಿರಂತರ ಜರುಗುತ್ತಿರುವದು ಶ್ಲ್ಯಾಘನೀಯವೆಂದರು. ಈ ಸಂದರ್ಭದಲ್ಲಿ ಸಕಲ ಶ್ರೀಗಳು ಉಪಸ್ಥಿತರಿದ್ದರು. ಇದೇ ಸಮಯದಲ್ಲಿ ಪೂಜ್ಯ ಅಭಿನವ ಶ್ರೀಗವಿಸಿದ್ಧೇಶ್ವರ ಶ್ರೀಗಳು ಶ್ರೀಮಠಕ್ಕೆ ಉದಾರವಾಗಿ ದಾನಗೈದ ಮಹನೀಯರನ್ನು ಸನ್ಮಾನಿಸಿ ಆಶಿರ್ವದಿಸಿದರು.
ನಾಳೆ ಚಕೋರಿ ನಾಟಕ ಪ್ರದರ್ಶನ ದಿನಾಂಕ ೨೫-೦೧-೨೦೧೧ರ ಮಂಗಳವಾರದಂದು ಕೈಲಾಸ ಮಂಟಪದ ವೇದಿಕೆಯಲ್ಲಿ ಶ್ರೀ ಶಿವಕುಮಾರ ಕಲಾತಂಡ ಸಾಣೆಹಳ್ಳಿ ಇವರಿಂದ ಡಾ.ಚಂದ್ರಶೇಖರ ಕಂಬಾರ ವಿರಚಿತ ಚಕೋರಿ ನಾಟಕ ಪ್ರದರ್ಶನಗೊಳ್ಳಲಿದೆ. ಕೊಪ್ಪಳದ ನಾಗರೀಕರು ವಿಕ್ಷಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ